
ವಿಜಯಪುರ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ವಿಜಯೆಂದ್ರ ಎಚ್ಚರಿಕೆ ನೀಡಿರುವ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಒಬ್ಬರೆ ಪಕ್ಷ ಕಟ್ಟಿಲ್ಲ. ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಸೇರಿದಂತೆ ಹಲವರು ಪಕ್ಷ ಕಟ್ಟಿದ್ದಾರೆ.ರಾಜ್ಯದಲ್ಲಿ ಬಿ.ಬಿ ಶಿವಪ್ಪನವರು ಪಕ್ಷ ಕಟ್ಟಿದ್ದಾರೆ. ಪಾಪ ಪಕ್ಷ ಕಟ್ಟಿದ ಅವರನೆಲ್ಲಾ ಮುಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಯತ್ನಾಳ್.
ವಿಜಯೆಂದ್ರ ಏನ್ ಕಟ್ಟಿದ್ದಾನಂತೆ ಎಂದು ಏಕವಚನದಲ್ಲೇ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಇನ್ನು ವಕ್ಫ್ ವಿಚಾರವಾಗಿ ಅನಿರ್ಷ್ಟಾವಧಿ ಧರಣಿ ಸತ್ಯಗ್ರಹ ವಿಚಾರವಾಗಿ ಮಾತನಾಡಿ, ಧರಣಿ ಸತ್ಯಾಗ್ರಹ ನಡೆಸುತ್ತೇವೆ. 1974-75 ರ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು. ನಾಳೆ ವಕ್ಫ್ ವಿರುದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದಿದ್ದಾರೆ ಯತ್ನಾಳ್.




