
ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗುತ್ತಿರುವ ವಿಚಾರದಲ್ಲಿ ಸಚಿವ ಕೆ.ಎನ್ ರಾಜಣ್ಣ ಸ್ವಂತ ಸರ್ಕಾರದ ವಿರುದ್ದವೇ ಚಾಟಿ ಬಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ವಕ್ಫ್ ನೋಟಿಸ್ ಕೊಟ್ಟಿದ್ದು, ಪಹಣಿ ದಾಖಲು ಆಗ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿ, ವಕ್ಫ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಾನೂನು ಬಾಹಿರ ಕ್ರಮ ತಗೊಳ್ಳಿ ಅಂತ ಸೂಚನೆ ಕೊಟ್ಟಿಲ್ಲ. ಸಿಎಂ ಸೂಚನೆ ಕೊಡಬೇಕಾದರೆ ಕಾನೂನು ಬದ್ಧವಾಗಿಯೇ ಕೊಡ್ತಾರೆ. ನಿಯಮ ಬಾಹಿರ ಸೂಚನೆಯನ್ನು ಸಿಎಂ ಸಿದ್ದರಾಮಯ್ಯ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದರ ಮಧ್ಯೆ ಇರೋರು ಸಿಎಂ ಸಿದ್ದರಾಮಯ್ಯ ಹೆಸರು ದುರುಪಯೋಗ ಮಾಡಿಸಿಕೊಂಡು ಈ ರೀತಿ ಮಾಡಿರುವ ಸಾಧ್ಯತೆಯಿದೆ. ಜಮೀರ್ ಅಹಮದ್ ವಕ್ಫ್ ಸಚಿವರಾಗಿ ಇರಬಹುದು, ಹಾಗಂತ ಖಾತೆಗಳನ್ನು ಬದಲಾಯಿಸಿ ಅಂತ ನಿಯಮ ಬಾಹಿರವಾಗಿ ಹೇಳೋದೂ ತಪ್ಪು, ನಿಯಮ ಬಾಹಿರ ಸೂಚನೆಗಳನ್ನು ಪಾಲಿಸಿರುವ ಅಧಿಕಾರಿಗಳದ್ದೂ ತಪ್ಪಿದೆ ಎಂದಿದ್ದಾರೆ. ಹೀಗಾಗಿ ಆರ್‌ಟಿಸಿಯಲ್ಲಿ ಆಗಿರುವ ತಪ್ಪುಗಳಿಗೆ ಯಾರು ಕಾರಣವೋ ಅವರ ಮೇಲೆ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.ಈ ಮೂಲಕ ಸಚಿವ ಜಮೀರ್ ಅಹಮದ್ ವಿರುದ್ಧ ಸಚಿವ ರಾಜಣ್ಣ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಡಿಸಿಗೆ ಜಮೀರ್ ನೀಡಿದ ಸೂಚನೆ ನಿಯಮ ಬಾಹಿರ ಅಂತ ಪರೋಕ್ಷವಾಗಿ ಹೇಳಿರುವ ಸಚಿವ ಕೆ.ಎನ್ ರಾಜಣ್ಣ, ಆರ್‌ಟಿಸಿಯಲ್ಲಿ ವಕ್ಫ್ ಹೆಸರು ನಮೂದು ಆಗಿರೋದು ಇನ್ನೊಬ್ವರ ಚಿತಾವಣೆಯಿಮದ ಆಗಿದೆಯಾ..? ಅಥವಾ ಅಜಾಗರೂಕತೆಯಿಂದ ಆಗಿದೆಯಾ..? ಅನ್ನೋ ಚರ್ಚೆ ಇದೆ. ಯಾರು ರೈತರ ದಾಖಲೆಗಳಲ್ಲಿ ವಕ್ಫ್ ಹೆಸರು ಬರಲು ಕಾರಣ ಆಗಿದ್ದಾರೆ, ಯಾರ ಆದೇಶ ಮೇಲೆ ವಕ್ಫ್ ಹೆಸರು ಬಂದಿದೆ ಅಂತ ತನಿಖೆ ಆಗಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಮಾಡಿ ಚರ್ಚೆ ಮಾಡ್ತೇನೆ ಎಂದಿದ್ದಾರೆ. ಇನ್ನು ಬಿಜೆಪಿಯವರೇ ಯಾಕೆ ದಾಖಲೆಗಳಲ್ಲಿ ವಕ್ಫ್ ಹೆಸರು ಹಾಕಿಸಿ, ರಾಜಕೀಯಕ್ಕೆ ಬಳಸ್ತಿದ್ದಾರೆ ಅಂತ ಭಾವಿಸಬಾರದು..? ಅಂತಾನು ಪ್ರಶ್ನೆ ಮಾಡಿದ್ದಾರೆ.
RTC ಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಯಾರು ಕಾರಣ ಆಗಿದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿರುವ ಸಚಿವ ರಾಜಣ್ಣ, ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಜಮೀನು ದಾಖಲೆಗಳಲ್ಲಿ ವಕ್ಫ್ ಹೆಸರು ಏಕಾಏಕಿ ಬರಲು ಸಾಧ್ಯವಿಲ್ಲ. ಯಾವುದಾದರೂ ಆಧಾರ ಇರಬೇಕು ಅಥವಾ ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿರಬೇಕು. ಆ ಸೂಚನೆ ಮೇಲೆ ಇವೆಲ್ಲ ಬದಲಾವಣೆ ಆಗಿರಬಹುದು. ಆ ಸೂಚನೆ ಕೊಟ್ಟವರು ಯಾರು..? ಅಂತ ಪತ್ತೆ ಮಾಡಿ ಅವರ ವಿರುದ್ಧ ಕ್ರಮ ತಗೋಬೇಕು ಎಂದು ಆಗ್ರಹ ಮಾಡಿದ್ದಾರೆ. ಒಟ್ಟಾರೆ ಜಮೀರ್ ವಿರುದ್ಧ ಕಾಂಗ್ರೆಸ್‌ನಲ್ಲೇ ಆಕ್ರೋಶದ ಕಟ್ಟೆ ಒಡೆಯುತ್ತಿದೆ.