Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆರೋಗ್ಯ ಕ್ಷೇತ್ರದಲ್ಲಿನ‌ ಮಹಿಳೆಯರು ಪುರುಷರಿಗಿಂತ 24% ರಷ್ಟು ಕಡಿಮೆ ಕೆಲಸ ವೇತನ‌ಪಡೆಯುತ್ತಾರೆ : ILO ವರದಿ

ಫಾತಿಮಾ

ಫಾತಿಮಾ

July 17, 2022
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಮುಂದಿನ 25ವರ್ಷಗಳಲ್ಲಿ ಭಾರತ ಅಭಿವೃದ್ದಿ ಹೊಂದಿದ ದೇಶವಾಗಬೇಕು : ಪ್ರಧಾನಿ ಮೋದಿ

ನೀರಿನ ಕೊಡ ಮುಟ್ಟಿದ ದಲಿತ ಬಾಲಕನನ್ನು ಹೊಡೆದು ಕೊಂದ ಶಿಕ್ಷಕ

ನಮ್ಮ ಜತೆ ಪ್ರಧಾನಿ ಮೋದಿ ಮಾತನಾಡಿದಾಗ ಇಡೀ ದೇಶವೇ ನಮ್ಮನ್ನು ಬೆಂಬಲಿಸಿದ ಅನುಭವವಾಯ್ತು: ಹರ್ಮನ್‌ಪ್ರೀತ್

ಕೊರೋನಾ ಕಾಲದಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿ ಜಗತ್ತಿನ ಆರೋಗ್ಯ ಕಾಪಾಡುವಲ್ಲಿ ವಿಶಿಷ್ಟ ಕೊಡುಗೆ ನೀಡಿರುವುದು ಆರೋಗ್ಯ ಕಾರ್ಯಕರ್ತರು, ಅದರಲ್ಲೂ ಮಹಿಳಾ ಆರೋಗ್ಯ ಕಾರ್ಯಕರ್ತರು. ಮಹಿಳಾ ಆರೋಗ್ಯ ಕಾರ್ಯಕರ್ತರ ಸೇವೆ ಪರಿಣಾಮಕಾರಿಯಾಗಿ ಜಗತ್ತಿನ‌ ಗಮನ ಸೆಳೆದದ್ದೇ ಕೊರೋನಾ ಕಾಲದಲ್ಲಿ ಎನ್ನಬಹುದು.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ವರದಿಯ ಪ್ರಕಾರ ಆರೋಗ್ಯ ಮತ್ತು ಸ್ವಾಸ್ಥ್ಯ ವಲಯದ ಮಹಿಳೆಯರು ಇತರ ಆರ್ಥಿಕ ವಲಯಗಳಿಗಿಂತ ದೊಡ್ಡ ಲಿಂಗ ವೇತನದ ತಾರತಮ್ಯವನ್ನು ಎದುರಿಸುತ್ತಾರೆ. ಅವರು ಪುರುಷ ಕಾರ್ಯಕರ್ತರಿಗಿಂತ ಸರಾಸರಿ 24% ರಷ್ಟು ಕಡಿಮೆ ವೇತನ ಗಳಿಸುತ್ತಾರೆ ಎನ್ನುವುದು ವರದಿಯ ಸಾರಾಂಶ.

ಆರೋಗ್ಯ ಕ್ಷೇತ್ರದಲ್ಲಿನ ಲಿಂಗಾಧಾರಿತ ವೇತನದ ಅಸಮಾನತೆಗಳ ಕುರಿತು ವಿಶ್ವದ ಅತ್ಯಂತ ನಂಬಲರ್ಹ ಮತ್ತು ಸಮಗ್ರ ವಿಶ್ಲೇಷಣೆಯಾಗಿರುವ ಈ ವರದಿಯು ಸರಿಸುಮಾರು 20 ಪ್ರತಿಶತ ಅಂಕಗಳ ಅಂತರವನ್ನು ಕಂಡುಕೊಂಡಿದೆ. ವಯಸ್ಸು, ಶಿಕ್ಷಣ ಮತ್ತು ಕೆಲಸದ ಸಮಯದಂತಹ ಅಂಶಗಳನ್ನೂ ಲೆಕ್ಕ ಹಾಕಿದಾಗ ಇದು 24 ಶೇಕಡಾ ಪಾಯಿಂಟ್‌ಗಳಿಗೆ ಜಿಗಿಯುತ್ತದೆ.

ಈ ವೇತನ ಅಧ್ಯಯನದಲ್ಲೂ‌ ತಾರತಮ್ಯಕ್ಕೆ ಸರಿಯಾದ ಕಾರಣ ಕಂಡುಕೊಳ್ಳಲಾಗಿಲ್ಲ. ಆದರೆ ಅವರು ಮಹಿಳೆಯರಾಗಿರುವುದಕ್ಕೇ ತಾರತಮ್ಯ ಆಗುತ್ತಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ವಿಶ್ವಾದ್ಯಂತ 67 ಪ್ರತಿಶತದಷ್ಟು ಆರೋಗ್ಯ ಮತ್ತು ಆರೈಕೆ ಕಾರ್ಯಕರ್ತರು ಮಹಿಳೆಯರೇ ಆಗಿದ್ದು ಇತರ ಆರ್ಥಿಕ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿನ ವೇತನವು ಒಟ್ಟಾರೆಯಾಗಿ ಕಡಿಮೆ ಇರುತ್ತದೆ ಎಂದು ವರದಿಯು ಕಂಡುಕೊಂಡಿದೆ. ಜೊತೆಗೆ ಮಹಿಳೆಯರು ಪ್ರಧಾನವಾಗಿರುವ ಆರ್ಥಿಕ ವಲಯಗಳಲ್ಲಿ ವೇತನಗಳು ಸಾಮಾನ್ಯವಾಗಿ ಕಡಿಮೆಯಾಗಿರುತ್ತವೆ ಎಂಬ ಮಾತಿಗೂ ಈ ಅಧ್ಯಯನ ಪುಷ್ಟಿ ನೀಡಿದೆ.

ಕೋವಿಡ್-19 ರ ಸಮಯದಲ್ಲಿ ಆರೋಗ್ಯ ಮತ್ತು ಆರೈಕೆ ಕಾರ್ಯಕರ್ತರು ನಿರ್ವಹಿಸಿದ ಪಾತ್ರ ನಿರ್ಣಾಯಕವಾಗಿದ್ದರೂ ಸಹ ವೇತನ ಸಮಾನತೆಯಲ್ಲಿ 2019 ಮತ್ತು 2020 ರ ನಡುವೆ ಕನಿಷ್ಠ ಸುಧಾರಣೆಗಳು ಮಾತ್ರ ಕಂಡುಬಂದಿವೆ ಎಂದು ವರದಿ ಹೇಳುತ್ತದೆ.

ಅಂತರವನ್ನು ಮುಚ್ಚಲು ಏನು ಮಾಡಬಹುದು?
ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ವಿವಿಧ ಆರ್ಥಿಕ ವಲಯಗಳಲ್ಲಿ ಲಿಂಗ ಅಸಮಾನತೆಯಿದೆ. ಈ ವೇತನದ ಅಂತರವು ಅನಿವಾರ್ಯವಲ್ಲ ಮತ್ತು ಸರ್ಕಾರಗಳು ಸರಿಯಾದ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾದರೆ ಖಂಡಿತವಾಗಿಯೂ ಈ ಅಂತರವನ್ನು ಮುಚ್ಚಬಹುದು. ಆರೋಗ್ಯ ಕ್ಷೇತ್ರವೊಂದರಲ್ಲಿ ಮಾತ್ರವಲ್ಲದೆ ಇತರ ವಲಯಗಳಲ್ಲೂ ಹೆಚ್ಚಿನ ವೇತನದ ಕೆಲಸಗಳಲ್ಲಿ ಪುರುಷರ ಪ್ರಾತಿನಿಧ್ಯ ಹೆಚ್ಚಿದ್ದರೆ ಕಡಿಮೆ ವೇತನದ ವಲಯಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿದೆ.

ಇಷ್ಟು ಮಾತ್ರವಲ್ಲದೆ ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವ ತಾಯಂದಿರು ಹೆಚ್ಚುವರಿಯಾಗಿ ನಷ್ಟಕ್ಕೊಳಗಾಗುತ್ತಿದ್ದಾರೆ. ಮಹಿಳೆಯ ಸಂತಾನೋತ್ಪತ್ತಿಯ ವರ್ಷಗಳಲ್ಲಿ, ಈ ಕ್ಷೇತ್ರದಲ್ಲಿ ಉದ್ಯೋಗ ಮತ್ತು ಲಿಂಗ ವೇತನದ ಅಂತರವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ಅಂತರಗಳು ಮಹಿಳೆಯ ಜೀವನದುದ್ದಕ್ಕೂ ಪರಿಣಾಮ ಬೀರುತ್ತದೆ. ಪುರುಷರು ಮತ್ತು ಮಹಿಳೆಯರ ನಡುವಿನ ಕೌಟುಂಬಿಕ ಕರ್ತವ್ಯಗಳ ಹೆಚ್ಚು ಸಮಾನವಾದ ಹಂಚಿಕೆಯು ಅನೇಕ ಸಂದರ್ಭಗಳಲ್ಲಿ ಮಹಿಳೆಯರು ವಿಭಿನ್ನ ಔದ್ಯೋಗಿಕ ಆಯ್ಕೆಗಳನ್ನು ಮಾಡಲು ಕಾರಣವಾಗಬಹುದು ಎಂದೂ ವರದಿಯು ಹೇಳಿದೆ .

ಈ ಅಧ್ಯಯನವು‌ಲಿಂಗ ವೇತನ‌ ತಾರತಮ್ಯದ ಇತರ ವಿಚಾರಗಳ ಕಡೆಯೂ ಗಮನ‌ಹರಿಸಿದ್ದು ವಯಸ್ಸು, ಶಿಕ್ಷಣ, ಕೆಲಸದ ಸಮಯ ಮತ್ತು ಸಾರ್ವಜನಿಕ ಅಥವಾ ಖಾಸಗಿ ವಲಯಗಳಲ್ಲಿ ಪುರುಷರು ಮತ್ತು ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವನ್ನೂ ಸಹ ವಿಶ್ಲೇಷಿಸಿದೆ.

ನಿರ್ಣಾಯಕ ನೀತಿ ನಿಯಮಗಳ ಅನುಷ್ಠಾನ

ಪ್ರಪಂಚದಾದ್ಯಂತ ಆರೋಗ್ಯ ಮತ್ತು ಆರೈಕೆ ವಲಯದಲ್ಲಿ ಒಂದೇ ರೀತಿಯ ಕಾರ್ಮಿಕ ಮಾರುಕಟ್ಟೆ ಪ್ರೊಫೈಲ್ ಇದ್ದರೂ ಪುರುಷರಿಗಿಂತ ಮಹಿಳೆಯರು ಕಡಿಮೆ ವೇತನವನ್ನು ಪಡೆಯಲಿರುವ ಕಾರಣಗಳನ್ನು ಹೆಚ್ಚಿನ ಕಾರ್ಮಿಕ ಮಾರುಕಟ್ಟೆ ವಿವರಿಸುವುದಿಲ್ಲ ಎನ್ನುತ್ತದೆ ವರದಿ.‌

“ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಬಹುಪಾಲು ಕೆಲಸಗಾರರು ಮಹಿಳೆಯರೇ ಆಗಿರುತ್ತಾರೆ. ಆದರೂ ಹಲವಾರು ದೇಶಗಳಲ್ಲಿ ವ್ಯವಸ್ಥಿತ ತಾರತಮ್ಯಗಳು ನಡೆಯುತ್ತಿವೆ ” ಎಂದು WHO ಆರೋಗ್ಯ ಕಾರ್ಯಪಡೆಯ ನಿರ್ದೇಶಕ ಜಿಮ್ ಕ್ಯಾಂಪ್ಬೆಲ್ ಹೇಳುತ್ತಾರೆ.

“ಈ ವರದಿಯಲ್ಲಿನ ಪುರಾವೆಗಳು ಮತ್ತು ವಿಶ್ಲೇಷಣೆಯ ಆಧಾರದಲ್ಲಿ ಸರ್ಕಾರಗಳು, ಉದ್ಯೋಗದಾತರಿಗೆ ಮತ್ತು ಕಾರ್ಮಿಕರಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಲು ತಿಳಿಸಬೇಕು. ಹಲವಾರು ದೇಶಗಳಲ್ಲಿ ಕೈಗೊಂಡ ಸಮಾನ ವೇತನದ ಕ್ರಮಗಳು ಕೆಲಸದ ಸ್ಥಳದಲ್ಲಿ ಉಂಟು ಮಾಡಿದ ಯಶಸ್ಸಿನ ಕಥೆಗಳನ್ನು ಹೆಚ್ಚು ಹೆಚ್ಚು ಪ್ರಚುರಪಡಿಸಬೇಕು ಎಂದೂ ಅವರು ಹೇಳುತ್ತಾರೆ.

“ಆರೋಗ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಕಡಿಮೆ ವೇತನ, ಲಿಂಗಾಧಾರಿತ ವೇತನ ತಾರತಮ್ಯ ಮತ್ತು ಹೆಚ್ಚಿನ ಕೆಲಸವಿರುತ್ತದೆ. ಕೋವಿಡ್ -19 ಸಾಂಕ್ರಾಮಿಕವು ಈ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ ಮತ್ತು ಕುಟುಂಬಗಳು, ಸಮಾಜಗಳು ಮತ್ತು ಆರ್ಥಿಕತೆಗಳನ್ನು ಮುಂದುವರಿಸುವಲ್ಲಿ ವಲಯ ಮತ್ತು ಅದರ ಕಾರ್ಮಿಕರು ಎಷ್ಟು ಪ್ರಮುಖರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದೆ” ಎಂದು ಹೇಳುತ್ತಾರೆ ILOನ ಮ್ಯಾನುಯೆಲಾ ಟೋಮಿ.

“ಆದರೆ ಉತ್ತಮ ವೇತನ, ಉತ್ತಮ‌‌ ಪರಿಸರವನ್ನು ‌ಒದಗಿಸದೆ ಉತ್ತಮ-ಗುಣಮಟ್ಟದ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲ” ಎನ್ನುತ್ತಾರೆ. “ಸಂಸ್ಥೆಗಳ ನಡುವೆ ಅಗತ್ಯ ನೀತಿಯ ರಚನೆ ಸೇರಿದಂತೆ ನಿರ್ಣಾಯಕ ನೀತಿ ಕ್ರಮಕ್ಕೆ ಸಮಯ ಬಂದಿದೆ. ಈ ವಿವರವಾದ ಮತ್ತು ಅಧಿಕೃತ ವರದಿಯು ಇದನ್ನು ರಚಿಸಲು ಅಗತ್ಯವಿರುವ ಸಂವಾದ ಮತ್ತು ರಚನಾ ಪ್ರಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ”ಎಂದು ಟೋಮಿ ಆಶಾವಾದ ವ್ಯಕ್ತಪಡಿಸಿದ್ದಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಬಿಜೆಪಿ ತೊರೆದು ಆರ್‌ಜೆಡಿ ಜೊತೆ ನಿತೀಶ್‌ ಸರ್ಕಾರ ರಚನೆ ?
ದೇಶ

ಬಿಹಾರ: ಗೃಹ ಖಾತೆ, ಸ್ಪೀಕರ್ ಸ್ಥಾನದ ಮೇಲೆ RJD ಕಣ್ಣು; ನಾಲ್ಕು ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಬೇಡಿಕೆ

by Shivakumar A
August 10, 2022
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡ್ತಿವಿ ತಾಕತ್ತಿದ್ದರೆ ತಡೀರಿ : ಪ್ರಮೋದ್ ಮುತಾಲಿಕ್
ಕರ್ನಾಟಕ

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡ್ತಿವಿ ತಾಕತ್ತಿದ್ದರೆ ತಡೀರಿ : ಪ್ರಮೋದ್ ಮುತಾಲಿಕ್

by ಪ್ರತಿಧ್ವನಿ
August 8, 2022
ಮಳೆಗಾಲದ ಅವಾಂತರಗಳೂ ವ್ಯವಸ್ಥೆಯ ಲೋಪಗಳೂ
ಅಭಿಮತ

ಮಳೆಗಾಲದ ಅವಾಂತರಗಳೂ ವ್ಯವಸ್ಥೆಯ ಲೋಪಗಳೂ

by ನಾ ದಿವಾಕರ
August 9, 2022
ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರು ಬದಲಾಗಬಹುದು : ಬಿ.ಎಸ್‌.ಯಡಿಯೂರಪ್ಪ
ಕರ್ನಾಟಕ

ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರು ಬದಲಾಗಬಹುದು : ಬಿ.ಎಸ್‌.ಯಡಿಯೂರಪ್ಪ

by ಪ್ರತಿಧ್ವನಿ
August 10, 2022
ಇವತ್ತು ನನಗೆ ನಮ್ಮ ಅಪ್ಪ ನೆನಪು ಆಗ್ತಿದಾರೆ! VRavichandran #pratidhvani #vravichandran #bangalore #kannada
ವಿಡಿಯೋ

ಇವತ್ತು ನನಗೆ ನಮ್ಮ ಅಪ್ಪ ನೆನಪು ಆಗ್ತಿದಾರೆ! VRavichandran #pratidhvani #vravichandran #bangalore #kannada

by ಪ್ರತಿಧ್ವನಿ
August 9, 2022
Next Post
ಊರ ಜಾತ್ರೆಗೆ ದಲಿತರಿಗೆ ನಿರ್ಬಂಧ : ಹಾಸನದಲ್ಲಿ ಬೆಳಕಿಗೆ ಬಂದ ಅಸ್ಪಶ್ಯತೆ ಆಚರಣೆ!

ಊರ ಜಾತ್ರೆಗೆ ದಲಿತರಿಗೆ ನಿರ್ಬಂಧ : ಹಾಸನದಲ್ಲಿ ಬೆಳಕಿಗೆ ಬಂದ ಅಸ್ಪಶ್ಯತೆ ಆಚರಣೆ!

2025ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ : ಸಚಿವ ಡಾ.ಕೆ.ಸುಧಾಕರ್‌

2025ಕ್ಕೆ ಮಲೇರಿಯಾ ಮುಕ್ತ ಕರ್ನಾಟಕದ ಗುರಿ : ಸಚಿವ ಡಾ.ಕೆ.ಸುಧಾಕರ್‌

ಬಿಜೆಪಿಗರು ನಮ್ಮ ಸಂವಿಧಾನವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ : ಡಿ.ಕೆ. ಶಿವಕುಮಾರ್

ತನಿಖಾ ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ : ಕೇಂದ್ರದ ವಿರುದ್ಧ ಡಿ.ಕೆ.ಶಿ ಗರಂ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist