ಕೊರೊನಾ ತಡೆಯುವ ವಿಚಾರದಲ್ಲಿ ಮತ್ತು ರಾಜತಾಂತ್ರಿಕ ಸಂಬಂಧ ಬೆಳಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತತ್ವಜ್ಞಾನಿಯಂತೆ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರ ದೂರದೃಷ್ಟಿಯ ಯೋಚನೆಗಳು ಭಾರತದಲ್ಲಿ ಆಗಬಹುದಾಗಿದ್ದ ಕೋಟ್ಯಾಂತರ ಸಾವು ನೋವುಗಳನ್ನು ತಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕಾಕರಣದಿಂದ ಭಾರತ ಕೋವಿಡ್ ಅನ್ನು ಸಮರ್ಥವಾಗಿ ಮತ್ತು ಸಮಗ್ರವಾಗಿ ಎದುರಿಸಿದೆ. ಸಂಭಾವ್ಯ 4ನೇ ಅಲೆಯನ್ನು ತಡೆಯಲು ಕೂಡ ಲಸಿಕೆ ಒಂದೇ ಅಸ್ತ್ರ. ಸರ್ಕಾರ ನೀಡುವ ಲಸಿಕೆಯನ್ನು ಸಾರ್ವಜನಿಕರು ಶೀಘ್ರದಲ್ಲೇ ಪಡೆದುಕೊಂಡು ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ ಎಂದು ಹೇಳಿದರು.
ಅನೇಕ ದೇಶಗಳಲ್ಲಿ ಈ ಹಿಂದೆಯೂ ಸಾಂಕ್ರಾಮಿಕ ರೋಗಗಳು ಬಂದ್ದವು . ಸ್ಪಾನಿಷ್ ಫ್ಲೂ, ಪ್ಲೇಗ್ ನಂತಹ ಸಾಂಕ್ರಾಮಿಕ ಕಾಯಿಲೆಗಳು ಮರಾಣಾಂಕತಿವಾಗಿದ್ದವು. ದಾಖಲೆಗಳ ಪ್ರಕಾರ ಊರು ಬಿಟ್ಟು ಬೇರೆ ಊರಿಗೆ ಗುಳೆ ಹೋದವರಿದ್ದಾರೆ. ಸ್ಪಾನಿಷ್ ಫ್ಲೂ ಕಾಯಿಲೆಯಲ್ಲಿ ಸತ್ತವರಿಗಿಂತ ಹಸಿವಿನಿಂದ ಸತ್ತಿದ್ದಾರೆ ಅನ್ನುವುದನ್ನು ದಾಖಲೆಗಳು ಹೇಳುತ್ತವೆ. ಆದರೆ ಪ್ರಧಾನಿಯವರ ದೂರದೃಷ್ಟಿಯ ಯೋಜನೆಗಳು ಕೊರೊನಾದ ವೇಳೆ ಆಗಬಹುದಾಗಿದ್ದ ದೊಡ್ಡ ಮಟ್ಟದ ಅನಾಹುತಗಳನ್ನು ತಪ್ಪಿಸಿದೆ ಎಂದು ತಿಳಿಸಿದರು.
2020ರ ಜನವರಿ ವೇಳೆಯಲ್ಲಿ ಕಂಡು ಕೇಳರಿಯದ ಸಾಂಕ್ರಾಮಿಕ ರೋಗ ಕೊರೊನಾ ಭಾರತಕ್ಕೆ ಕಾಲಿಟ್ಟಿತ್ತು. ಝೊನಾಟಿಕ್ ಇನ್ಫೆಕ್ಷನ್ ವೈರಸ್ ಗಳಿಂದ ಕೊರೊನಾ ಪ್ರಾಣಿಗಳಿಂದ ಮನುಷ್ಯನಿಗೆ ಬಂತು. ಶತಮಾನದಲ್ಲಿ ಕಾಣದೇ ಇದ್ದಂತಹ ಸಾಂಕ್ರಾಮಿಕ ರೋಗ ಇದಾಗಿತ್ತು. ವೈದ್ಯಕೀಯ ಜಗತ್ತಿಗೂ ಸವಾಲು ಮತ್ತು ಕುತೂಹಲ ಇತ್ತು. ಪ್ರಧಾನಿ ನರೇಂದ್ರ ಮೋದಿಯವರು ಮುತ್ಸದಿಯಾಗಿ, ಸಮಗ್ರ ಮತ್ತು ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡಲು ಯೋಜನೆ ರೂಪಿಸಿದ್ದರು. 135 ಕೋಟಿ ಜನಸಂಖ್ಯೆ ಇದ್ದಂತಹ ಈ ದೇಶದಲ್ಲಿ ಕೊರೊನಾವನ್ನು ನಿಯಂತ್ರಣಕ್ಕೆ ತಂದಿದ್ದು ಐತಿಹಾಸಿಕ ಮತ್ತು ಕೇಸ್ ಸ್ಟಡಿಯೂ ಆಗಿದೆ ಎಂದು ಅಭಿಪ್ರಾಯ ಪಟ್ಟರು.
ಭಾರತದಲ್ಲಿ ಕೊರೊನಾ ಉದ್ಭವವಾದಾಗ ಜಗತ್ತಿನ ಅನೇಕ ಮುಂದುವರೆದ ದೇಶಗಳು ಬೀದಿ ಬೀದಿಯಲ್ಲಿ ಸಾವು ಖಚಿತ ಅನ್ನುವ ರೀತಿಯಲ್ಲಿ ಮಾತನಾಡಿದ್ದವು. ಬಡತನ, ಅನಕ್ಷರತೆಯ ದೇಶವಾಗಿರುವ ಭಾರತ ದೊಡ್ಡ ಸಂಕಟಕ್ಕೆ ಸಿಲುಕಲಿದೆ ಅಂತ ಅಂದುಕೊಂಡವರೇ ಹೆಚ್ಚು. ಆದರೆ ಪ್ರಧಾನಿಗಳು ಬೇರೆಯದ್ದೇ ಯೋಚನೆ ಮಾಡಿದ್ದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಜೊತೆ ನಿಕಟ ಸಂಬಂಧ ಬೆಳೆಸಿ, ಪ್ರತೀ ಹಂತದಲ್ಲೂ ಮಾರ್ಗಸೂಚನೆಗಳನ್ನು ಕೊಟ್ಟು ವಿಚಾರ ವಿನಿಮಯ ಮಾಡಿಕೊಂಡರು. ಕೊರೊನಾವನ್ನು ಸಮರ್ಥವಾಗಿ ನಿಯಂತ್ರಣ ಮಾಡಲು ಲಸಿಕೆ ಒಂದೇ ದಾರಿ ಅನ್ನುವುದನ್ನು ಹೇಳಿದರು. ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ಲಸಿಕೆ ತಯಾರಿಕಾ ಕಂಪನಿಗಳ ಜೊತೆ ಸಂಪರ್ಕ ಸಾಧಿಸಿದರು. ನೈತಿಕತೆಯಿಂದ ಹಿಡಿದು ಆರ್ಥಿಕವಾಗಿಯೂ ಕೇಂದ್ರ ಸರ್ಕಾರದ ಸಹಕಾರ ಕೊಟ್ಟಿತು. ಸರ್ಕಾರದ ಪರವಾನಗಿ ಸೇರಿ ಎಲ್ಲವನ್ನೂ ಕೊಟ್ಟಿತು.
ಅನೇಕ ದೇಶಗಳಲ್ಲಿ ಲಾಕ್ಡೌನ್ ಘೋಷಣೆಯಾದರೂ ಅದನ್ನು ಪಾಲನೆ ಮಾಡಲು ಆಗಿರಲಿಲ್ಲ. ಆದರೆ ಭಾರತದಲ್ಲಿ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಯಿತು. ಅಷ್ಟೇ ಅಲ್ಲ ಕೊರೊನಾ ಮಾಚ್ 2020ರಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿತ್ತು. ಲಸಿಕೆಯನ್ನು 2021ರ ಜನವರಿ ವೇಳೆಗೆ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತಹ ಯೋಜನೆಗಳನ್ನು ಜಾರಿ ಮಾಡಲಾಗಿತ್ತು.
ಜನವರಿ 16, 2021ರಂದು ಪ್ರಧಾನಿ ಮೋದಿ ದೂರದೃಷ್ಟಿ ಇಟ್ಟುಕೊಂಡ ಇಡೀ ದೇಶದಲ್ಲಿ ಏಕಕಾಲಕ್ಕೆ ಲಸಿಕಾ ಕರಣ ಆರಂಭಿಸಿದರು. ಇವತ್ತು ವಿಶ್ಚದಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ದೇಶವಾಗಿ ಭಾರತ ಸಾಧನೆ ಮಾಡಿದೆ. ಭಾರತದಲ್ಲಿ 185 ಕೋಟಿ 90 ಲಕ್ಷದ 68 ಸಾವಿರದ 616 ಡೋಸ್ ಲಸಿಕೆ ಇಲ್ಲಿ ತನಕ ನೀಡಲಾಗಿದೆ. ಚೈನಾ ಆದ ಮೇಲೆ ಅತೀ ಹೆಚ್ಚು ಲಸಿಕೆ ನೀಡಿದ್ದು ಅನ್ನು ಹೆಗ್ಗಳಿಕೆ ಭಾರತದ ಪಾಲಾಗಿದೆ.
ನಮ್ಮ ದೇಶದಲ್ಲಿ ಅನೇಕ ಲಸಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ ನಮಗೆ ಅದು ಸಿಕ್ಕಿದ್ದು ಎಷ್ಟೋ ವರ್ಷಗಳು ಕಳೆದ ಬಳಿಕ. ಹೈಪಟೈಟಿಸ್ ಬಿ 1985ರಲ್ಲಿ ವಿಶ್ವಕ್ಕೆ ಸಿಕ್ಕರೂ ಭಾರತಕ್ಕೆ ಲಭ್ಯವಾಗಿದ್ದು 2005ರಲ್ಲಿ. ಬಿಸಿಜಿ 45 ವರ್ಷ ತಡವಾಗಿ ಬಂದಿತ್ತು. ಜಪಾನಿಸ್ ಎನ್ಸೆಫಲಿಟಿಸ್ ಭಾರತಕ್ಕೆ ಸಿಕ್ಕಿದ್ದು 85 ವರ್ಷಗಳ ಬಳಿಕ. ಆದರೆ ಕೊರೊನಾ ಲಸಿಕೆ ವಿಶ್ವಕ್ಕೆ 2020 ಡಿಸೆಂಬರ್ನಲ್ಲಿ ಸಿಕ್ಕರೆ, ಭಾರತಕ್ಕೆ 2021ಜನವರಿಲ್ಲಿ ಬಂದಿತ್ತು.
ಭಾರತೀಯ ಮೂಲದ ಲಸಿಕೆಯನ್ನು ತಯಾರಿಸಿದ್ದು ನಮ್ಮ ಹೆಮ್ಮೆ.ಭಾರತ್ ಬಯೋಟೆಕ್ನ ಕೊ ವ್ಯಾಕ್ಸಿನ್ ಮತ್ತು ಪುಣೆಯಿಂದ ಸೀರಂ ಇನ್ಸಿಟಿಟ್ಯೂಟ್ನ ಕೋವಿ ಶೀಲ್ಡ್ ಲಸಿಕೆ ಭಾರತದಲ್ಲಿ ಸರ್ವಾಜನಿಕರಿಗೆ ಸಿಕ್ಕಿತ್ತು. ಇವತ್ತು ಒಟ್ಟು 10 ವಿಧದ ಲಸಿಕೆಗಳಿಗೆ ಭಾರತ ಸರ್ಕಾರ ಪರವಾಗಿ ಕೊಟ್ಟಿದೆ. ಸೀರಂನ ಕೋವಿಶೀಲ್ಡ್ ಜೊತೆಗೆ ಕೋ ವ್ಯಾಕ್ಸ್ ಇದೆ. ಬಯೋಲಾಜಿಕಲ್ ಇ ಲಿಮಿಟೆಡ್ ನ ಕಾರ್ಬೊ ವ್ಯಾಕ್ಸ್ 12 ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುತ್ತಿದೆ. ಝೈಡಸ್ ಕ್ಯಾಡಿಲಾ ಸಂಸ್ಥೆ ಮೊದಲ ಡಿಎನ್ ಎ ವ್ಯಾಕ್ಸಿನ್ ತಯಾರಿಸಿದೆ. ವಿಶ್ವದ ಮೊದಲ ಡಿಎನ್ ವ್ಯಾಕ್ಸಿನ್ ಝೈಕೋ ಡಿ ತಯಾರಾಗಿದ್ದು ಭಾರತದಲ್ಲೇ
ಮಾಡೆನಾ ಸಂಸ್ಥೆ ಸ್ಪೈಕ್ ವ್ಯಾಕ್ಸ್ ತಯಾರಿಸಿದರೆ, ಗಮಾಲೆಯಾಗೆ ಸ್ಪುಟ್ನಿಕ್ ಲೈಟ್ ಮತ್ತು, ಸ್ಪುಟ್ನಿಕ್ ವಿ ಲಸಿಕೆ ನೀಡಿದೆ. ಜಾನ್ಸನ್ ಅಂಡ್ ಜಾನ್ಸನ್: ಎಡಿ26 ಕೋವಿಡ್ 2.7 ಎಸ್ ಅನ್ನುವ ಲಸಿಕೆ ತಯಾರಿಸಿದೆ. ಸೀರಂ ವ್ಯಾಕ್ಸ್ ಝನೆರಿಯಾ ಅನ್ನು ಲಸಿಕೆಯನ್ನು ತಯಾರಿಸಿದೆ. ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ನೀಡುತ್ತಿದೆ.
ಆರಂಭದಲ್ಲಿ ಅಮೆರಿಕದಲ್ಲಿ ಮಡೆನಾ ಮತ್ತು ಫೈಝರ್ 2 ಲಸಿಕೆ ಇತ್ತು. ಅಮೆರಿಕವನ್ನು ಭಾರತ ಸಂಪರ್ಕ ಮಾಡಿದಾಗ ಲಸಿಕೆ ನೀಡಲು ಒಪ್ಪಿಕೊಂಡರೂ ಅದರಿಂದಾಗುವ ತೊಂದರೆಗೆ ಜವಾಬ್ದಾರಿ ಅಲ್ಲ ಅಂತ ಹೇಳಿತ್ತು. ಹೀಗಾಗಿ ಸರ್ಕಾರ ಜನರ ಜೀವದ ಜೊತೆಗೆ ಆಡುವುದಿಲ್ಲ ಅನ್ನುವ ದಿಟ್ಟ ನಿರ್ಧಾರ ಮಾಡಿ ದೇಶೀಐ ಲಸಿಕೆಯನ್ನು ಬಳಸಲು ಅನುಮತಿ ನೀಡಿತ್ತು. ಅನೇಕ ಮುಂದೆವರೆದ ದೇಶಗಳಲ್ಲಿ ಜನ ಲಸಿಕೆ ತೆಗೆದಯಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕೆನಡಾದಲ್ಲಿ ಜನರು ಲಸಿಕೆ ತೆಗೆದುಕೊಳ್ಳಿ ಅಂದಿದ್ದ ಅಧ್ಯಕ್ಷರ ವಿರುದ್ಧವೇ ದಂಗೆ ಎದ್ದಿದ್ದರು. ಆದರೆ ಒಕ್ಕೂಟ ವ್ಯವಸ್ಥೆಯ ನಮ್ಮ ದೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಧಿಕಾರ ಮಾಡುತ್ತಿದ್ದರೂ, ಪ್ರಧಾನಿಗಳು ಮುತುವರ್ಜಿಂದ ಮಾತುಕತೆ ನಡೆಸಿ ಸರ್ಕಾರಗಳ ಜೊತೆ ಕೈ ಜೋಡಿಸಿ ಎಲ್ಲರೂ ಒಂದೇ ಮನಸ್ಸಿನಿಂದ ಕೆಲಸ ಮಾಡಲು ಪ್ರೋತ್ಸಾಹಿಸಿದರು.
ಭಾರತದಲ್ಲಿ ಆರೋಗ್ಯ ವ್ಯವಸ್ಥೆ 70 ವರ್ಷಗಳ ಆಳ್ವಿಕೆಯ ಬಳುವಳಿಯಾಗಿತ್ತು. ಆರಂಭದಲ್ಲಿ ಅದನ್ನು ಇಟ್ಟುಕೊಂಡು ಕೊರೊನಾ ಎದುರಿಸಿದೆವು. ಆದರೆ ಅವುಗಳು ಎಲ್ಲೂ ಸಾಕಾಗಲಿಲ್ಲ. ಹೀಗಾಗಿ ಇದರ ಅಭಿವೃದ್ಧಿಗೆ ಗಮನ ಕೊಟ್ಟು, ಇವತ್ತು 4 ರಿಂದ 5 ಪಟ್ಟು ಅತ್ಯುತ್ತಮ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಜನರು ಹಸಿವಿನಿಂದ ಸಾಯಬಾರದು ಅನ್ನುವ ಕಾರಣದಿಂದ ಪ್ರಧಾನಿಗಳು ಪ್ರಧಾನ ಮಂತ್ತಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದು ಒಂದೂವರೆ ವರ್ಷ ಉಚಿತ ಆಹಾರ ಧಾನ್ಯ ಕೊಟ್ಟರು. 80 ಕೋಟಿ ಜನರ ಮತ್ತು ಕುಟುಂಬಗಳಿಗೆ ಇದು ನೆರವಾಯಿತು. ಈಗ ಇದನ್ನು ಇನ್ನೂ ಆರು ತಿಂಗಳು ಮುಂದುವರೆಸಲಾಗಿದೆ. ವಿಶ್ವದ ಯಾವದೇಶದಲ್ಲೂ ಈ ರೀತಿ ಮಾಡಲು ಸಾಧ್ಯವಾಗಿಲ್ಲ. ಭಾರತದ ಯೋಜನೆಗಳ ಮೂಲಕ ಎಲ್ಲಾ ವರ್ಗದ ಜನರು ಸಮಾನ ಬದುಕು ಕಟ್ಟಿಕೊಳ್ಳುವಂತಾಗಿದೆ.
ರಾಜ್ಯದಲ್ಲಿ ಇಲ್ಲಿ ತನಕ 10 ಕೋಟಿ 54 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ 101 ಶೇಕಡಾಕ್ಕಿಂತ ಹೆಚ್ಚಿದೆ. 2ನೇ ಡೋಸ್ 98 ಶೇಕಡಾ ಆಗಿದೆ. 12-14 ವರ್ಷ ಕೆಟಗರಿಯಲ್ಲಿ 70.2 %, 15 ರಿಂದ 17 ವರ್ಷ ಕೆಟಗರಿಯಲ್ಲಿ 79.2% 18 ರಿಂ 44 ವರ್ಷದ ಕೆಟಗರಿಯಲ್ಲಿ ಮೊದಲ ಡೋಸ್ 97.4% ನೀಡಲಾಗಿದೆ. ಮುನ್ನಚ್ಚೆರಿಕಾ ಡೋಸ್ಗೆ ಜನ ಹೆಚ್ಚು ಲಕ್ಷ್ಯ ಕೊಡಬೇಕು
ಕೋವಿಡ್ ಅಂತ್ಯವಾಗಿಲ್ಲ ಬೇರೆ ಬೇರೆ ಪ್ರಬೇಧದ ಮೂಲಕ ಬರಬಹುದು ಅನ್ನುವ ಎಚ್ಚರಿಕೆ ನೀಡಲಾಗಿದೆ. ಎಕ್ಸ್.ಇ ಮತ್ತು ಎಂ.ಇ ಗಳು ಪ್ರಬೇಧಗಳು ಬರುತ್ತಿವೆ. ಆದರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಲು ಲಸಿಕೆ ಒಂದೇ ಉಪಾಯ. ಸರ್ಕಾರ ನೀಡುವ ಉಚಿತ ಲಸಿಕೆ ಉಚಿತ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಮನವಿ ಮಾಡಿರು.
ವಿಶ್ವದ ಬೇರೆ ಬೇರೆ ದೇಶಗಳಲ್ಲ ಕೊರೊನಾ ಲಸಿಕೆಗೆ 2 ರಿಂದ 5 ಸಾವಿರ ವೆಚ್ಚವಾಗುತ್ತದೆ. ಆದರೆ ಭಾರತದಲ್ಲಿ ಇದು ಉಚಿತ. ಅಷ್ಟೇ ಅಲ್ಲ ಕೋವಿನ್ ಆ್ಯಪ್ ಮೂಲಕ ಲಸಿಕೆ ನೀಡಲಾಗಿದೆ. ಜಗತ್ತಿನ ವಿವಿಧ 50 ದೇಶಗಳು ಈ ತಂತ್ರಾಂಶದ ನೆರವು ಕೇಳಿವೆ. ಸುಮಾರು 40 ದೇಶಗಳಿಗೆ ಭಾರತ ಲಸಿಕೆಯನ್ನು ಉಚಿತವಾಗಿ ನೀಡಿದೆ. ಈ ಮೂಲಕ ಬೇರೆ ದೇಶಗಳಲ್ಲೂ ಪ್ರಾಣ ಹಾನಿಯನ್ನು ತಪ್ಪಿಸಿದೆ. ಆತ್ಮನಿರ್ಭರ ಭಾರತ್ ಯೋಜನೆಯ ಅಡಿಯಲ್ಲಿ ಕೇವಲ 3-4 ತಿಂಗಳಲ್ಲಿ 18 ರಿಂದ 20 ಕಂಪನಿಗಳು ಪಿಪಿಇ ಕಿಟ್, ವೆಂಟಿಲೇಟರ್ ಮಾಸ್ಕ್, ಆಕ್ಸಿಜನ್ ಬೆಡ್, ಐಸಿಯು ಎಲ್ಲವನ್ನೂ ತಯಾರ ಮಾಡಿವೆ. ಇತರೆ ದೇಶಗಳ ಮೇಲಿದ್ದ ಅಲಂಭನೆಯನ್ನು ಆತ್ಮನಿರ್ಭರ್ ಭಾರತ್ ಕಡಿಮೆ ಮಾಡಿದೆ.
ಕೊರೊನಾ 2ನೇ ಅಲೆಯಲ್ಲಿ ತೊಂದರೆ ಆಗಿತ್ತು. ಆದರೆ ಅದು ಪಾಠವಾಗಿದೆ. ಇವತ್ತು ಭಾರತ ಮತ್ತು ಕರ್ನಾಟಕ ಎಲ್ಲಾ ಸಾಂಕ್ರಾಮಿಕ ರೋಗಗಳನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯುತವಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 243 ಆಕ್ಸಿಜನ್ ಪ್ಲಾಂಟ್ ಸಿಕ್ಕಿದೆ. ಈ ಪೈಕಿ 42 ಬಂದಿದೆ. 234 ಪ್ಲಾಂಟ್ಗಳು ಕಮಿಷನ್ ಆಗಿವೆ . 9 ಪ್ಲಾಂಟ್ಗಳ ಕಾಮಾಗಾರಿ ಬಾಕಿ. ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಮತ್ತು ಶೇಖರಣೆ ಹೆಚ್ಚಾಗಿದೆ.
ಲಸಿಕೆ ತೆಗೆದುಕೊಳ್ಳಬೇಕು ಅಂದಾಗ ಮೊದಲು ವಿಐಪಿಗೆ ಹೋಗಬೇಕು ಅನ್ನುವುದು ನಮ್ಮಲ್ಲಿನ ಸಂಸ್ಕೃತಿ. ಶ್ರೀಮಂತರಿಗೆ ಅಥವಾ ದೊಡ್ಡವರಿಗೆ ಸಿಗುತ್ತದೆ ಅನ್ನುವು ವಾಡಿಕೆ. ಆದರೆ ಲಸಿಕೆ ಬಂದಾಗ ಪ್ರಧಾನಿಗಳು ಹಳಿದ್ದು ಕೊರೊನಾ ವಾರಿಯರ್ ಗಳು ತೆಗೆದುಕೊಳ್ಳಬೇಕು. ಜನರಿಗೋಸ್ಕರ ಕೆಲಸ ಮಾಡಿದವರಿಗೆ ಮೊದಲು ಸಿಗಬೇಕು . ಆಮೇಲೆ 60 ವರ್ಷ ಮೇಲ್ಪಟ್ಟ,ವರಿಗೆ, ನಂತರ ಹಂತ ಹಂತವಾಗಿ ಎಲ್ಲರಿಗೂ ನೀಡಲಾಗಿದೆ. ಯುದ್ಧ ಅಥವಾ ಸಾಂಕ್ರಾಮಿಕ ರೋಗಗಳು ಬಂದಾಗ ವಿರೋಧ ಪಕ್ಷಗಳು ಆಡಳಿತ ಪಕ್ಷದ ಜೊತೆ ಕೆಲಸ ಮಾಡಬೇಕು. ಒಂದೇ ನಿಲುವು ಇರಬೇಕು. ಆದರೆ ಮೊದಲ ಬಾರಿಗೆ ಲಸಿಕೆ ವಿಚಾರದಲ್ಲಿ ರಾಜಕಾರಣ ಮಾಡಿದರು. ಜನರನ್ನು ಹೆಸರಿಸಿದರು. ದೊಡ್ಡ ಪ್ರಮಾಣದಲ್ಲಿ ಲಸಿಕೆ ಬರ್ತಿಲ್ಲ ಅನ್ನುವ ಕಂಪ್ಲೇಟ್ ಮಾಡಿದರು. ನಮ್ಮ ರಾಜ್ಯದಲ್ಲೂ ವಿರೋಧ ಪಕ್ಷಗಳು ಬಾಯಿ ಮಾತಿನಲ್ಲಿ ಸಹಕಾರ ಕೊಡ್ತಿವಿ ಅಂತ ಹೇಳಿದವು. ಆದರೆ ಅವಿಶ್ವಾಸ ಮತ್ತು ಅಸಹಕಾರ ಕೊಟ್ಟಿದ್ದನ್ನು ಜನ ಗಮನಿಸಿದ್ದಾರೆ ಎಂದು ಹೇಳಿದರು.