• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭ

ನಾ ದಿವಾಕರ by ನಾ ದಿವಾಕರ
April 22, 2022
in ಕರ್ನಾಟಕ
0
ರಾಜ್ಯದ ದ್ವಿತೀಯ ಪಿಯು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್
Share on WhatsAppShare on FacebookShare on Telegram

ADVERTISEMENT

22ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಹತ್ತನೆಯ ತರಗತಿ ಭವಿಷ್ಯದ ಮೊದಲ ಮೆಟ್ಟಿಲಾದರೆ ಪಿಯುಸಿ ಮೊದಲ ಘಟ್ಟ. ಪದವಿ ವ್ಯಾಸಂಗ, ಉನ್ನತ ವ್ಯಾಸಂಗಗಳಿಗೆ ಬಾಗಿಲು ತೆರೆಯುವ ಈ ಘಟ್ಟ ೧೮ ವಯಸು ದಾಟುವ ಯುವಪೀಳಿಗೆಗೆ ಮತದಾನದ ಹಕ್ಕನ್ನೂ ನೀಡುತ್ತದೆ. ತಮ್ಮ ಭವಿಷ್ಯದ ಕನಸುಗಳಿಗೆ ವಿದ್ಯಾರ್ಥಿಗಳು ರೆಕ್ಕೆ ಪುಕ್ಕಗಳನ್ನು ಜೋಡಿಸುವುದೂ ಈ ಹಂತದಲ್ಲೇ. ಈ ಘಟ್ಟದಲ್ಲಿ ಕೊಂಚ ಪಲ್ಲಟವಾದರೂ ಭವಿಷ್ಯಕ್ಕೆ ಧಕ್ಕೆ ಉಂಟಾಗುತ್ತದೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಸಮೂಹಕ್ಕೆ ಶುಭ ಕೋರುವುದರೊಂದಿಗೆ ಅವರಲ್ಲಿ ಭರವಸೆಯನ್ನು ತುಂಬುವುದು ನಾಗರಿಕತೆ ಇರುವ ಸಮಾಜದ ಕರ್ತವ್ಯ. ಹಾಗೆಯೇ ಈ ಸಮಾಜದ ಆಡಳಿತ ನಿರ್ವಹಿಸುವ ಸರ್ಕಾರದ ಕರ್ತವ್ಯವೂ ಹೌದು. ತಳಮಟ್ಟದ ದುಡಿಯುವ ವರ್ಗಗಳಿಗೆ ಶಿಕ್ಷಣವೇ ಗಗನ ಕುಸುಮವಾಗುತ್ತಿರುವ ಹೊತ್ತಿನಲ್ಲಿ, ಉದ್ಯೋಗ ಮರೀಚಿಕೆಯಾಗುತ್ತಿರುವ ಹೊತ್ತಿನಲ್ಲಿ, ವಿದ್ಯಾರ್ಥಿ ಸಮುದಾಯ ನೆಮ್ಮದಿಯಿಂದ, ನಿಶ್ಚಿಂತರಾಗಿ, ಯಾವುದೇ ಭೀತಿ ಆತಂಕಗಳಿಲ್ಲದೆ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುವುದು ಆಡಳಿತ ವ್ಯವಸ್ಥೆಯ ನೈತಿಕ ಕರ್ತವ್ಯ.

ಆದರೆ ಈಗ ಮತ್ತೊಮ್ಮೆ ಹಿಜಾಬ್ ವಿವಾದ ಮುಸ್ಲಿಂ ಹೆಣ್ಣುಮಕ್ಕಳನ್ನು ಆತಂಕಕ್ಕೆ ದೂಡಿದೆ. ಯಾವುದೇ ಧಾರ್ಮಿಕ ವಸ್ತ್ರಧಾರಣೆಗೆ ಅವಕಾಶವಿಲ್ಲ, ಸಮವಸ್ತ್ರ ಕಡ್ಡಾಯ ಎಂದು ಘೋಷಿಸುವ ಮೂಲಕ ಶಿಕ್ಷಣ ಸಚಿವರು ಈ ಆತಂಕವನ್ನು ಹೆಚ್ಚಿಸಿದ್ದಾರೆ. ಹಿಜಾಬ್ ವಿವಾದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಾತ್ರ ಸಂಬಂಧಿಸಿದ ವಿಚಾರ. ಖಾಸಗಿ ಶಾಲೆಗಳಲ್ಲಿ ಭಿನ್ನ ನಿಯಮಗಳೂ ಇರಲಿಕ್ಕೆ ಸಾಧ್ಯ . ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಲ್ಲಿ ಎರಡೂ ವರ್ಗದವರು ಇರುತ್ತಾರೆ. ಹಿಜಾಬ್ ನಿರ್ಬಂಧ ಕೋರ್ಟ್ ಆದೇಶದ ಮೇರೆಗೇ ವಿಧಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ, ಪರೀಕ್ಷೆಯ ಸಂದರ್ಭದಲ್ಲಿ ವಿನಾಯಿತಿ ನೀಡುವ ವಿವೇಚನಾಧಿಕಾರ ಸರ್ಕಾರಕ್ಕೆ ಇದ್ದೇ ಇರುತ್ತದೆ.

ಆದರೆ ಕರ್ನಾಟಕ ಸರ್ಕಾರ ತನ್ನ ವಿವೇಚನೆಯನ್ನು ಬಳಸುತ್ತಿಲ್ಲ. ಇತ್ತ ಪರೀಕ್ಷೆ ಬರೆಯುವ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ವಾರಸುದಾರರ ಒತ್ತಡಗಳಿಗೆ‌ ಮಣಿದು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ಮುಂದಾಗುವ ಲಕ್ಷಣಗಳೂ ಕಾಣುತ್ತಿಲ್ಲ. ತಮ್ಮ ಭವಿಷ್ಯವನ್ನು ನಿರ್ಧರಿಸುವ ನಿರ್ಣಾಯಕ ಘಟ್ಟದಲ್ಲಿ ತಮ್ಮದೇ ಸ್ವಂತ ನಿಲುವು ತಳೆಯುವ ವಿವೇಚನಾಧಿಕಾರವನ್ನು ಮುಸ್ಲಿಂ ಹೆಣ್ಣು ಮಕ್ಕಳಿಗೆ ನೀಡುವುದೂ ಇಲ್ಲ. ಮುಸ್ಲಿಂ ಸಮುದಾಯದ ಪ್ರಜ್ಞಾವಂತರು, ವಿವೇಕಯುತ ಸುಶಿಕ್ಷಿತರು ಈ ವಿಚಾರದಲ್ಲಿ ಕೊಂಚ ವಿವೇಚನೆಯಿಂದ ಯೋಚಿಸಿದರೆ, ತಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉಂಟಾಗುತ್ತಿರುವ ಧಕ್ಕೆಯನ್ನು ತಪ್ಪಿಸಬಹುದು.

ಸಮುದಾಯದ ದೃಷ್ಟಿಯಿಂದ, ಧಾರ್ಮಿಕ ಅಸ್ಮಿತೆಯ ದೃಷ್ಟಿಯಿಂದ ಇದನ್ನು ತಾತ್ವಿಕ ಸೋಲು ಎಂದು ಭಾವಿಸಿ, ಭಾವಾವೇಶಕ್ಕೊಳಗಾಗುವುದರ ಬದಲು,‌ವಿಷಯ ನ್ಯಾಯಾಲಯದಲ್ಲಿರುವುದರಿಂದ ಮುಂದೆ ನ್ಯಾಯ ಸಿಗಬಹುದು ಎಂಬ ವಿಶ್ವಾಸದೊಂದಿಗೆ, ಮುಸ್ಲಿಂ ಸಮುದಾಯದ ನಾಯಕರು, ವಿವೇಕಯುತ ಪ್ರತಿನಿಧಿಗಳು, ತಮ್ಮ ಹೆಣ್ಣು ಮಕ್ಕಳಿಗೆ ಹಿಜಾಬ್ ಇಲ್ಲದೆಯೂ ಪರೀಕ್ಷೆ ಬರೆಯಲು ಅನುಮತಿ ನೀಡುವುದು ಸೂಕ್ತ. ಹಿಜಾಬ್ ವ್ಯಕ್ತಿಯ ಧಾರ್ಮಿಕ ಅಸ್ಮಿತೆಯನ್ನು ಪ್ರತಿನಿಧಿಸಬಹುದು ಅದರೆ ಅದು ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನೂರಾರು, ಸಾವಿರಾರು ಹೆಣ್ಣು ಮಕ್ಕಳು ಈ ಅಸ್ಮಿತೆ ಮತ್ತು ಅಸ್ತಿತ್ವದ ಮುಲಾಜಿಗೆ ಬಲಿಯಾಗುವುದು ಅಮಾನುಷ ಎನಿಸುತ್ತದೆ. ಮುಸ್ಲಿಂ ಸಮುದಾಯ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಸಮುದಾಯದೊಳಗಿನ ವಿವೇಚನಾಶೀಲ ಮನಸುಗಳು ಮಾತನಾಡಬೇಕಿದೆ.

ಸರ್ಕಾರ ಮತ್ತು ಸಮುದಾಯದ ಹಗ್ಗ ಜಗ್ಗಾಟದಲ್ಲಿ ಹೆಣ್ಣುಮಕ್ಕಳ ಭವಿಷ್ಯ ಹಾಳಾಗುವುದು ನಾಗರಿಕತೆಯ ಲಕ್ಷಣವಲ್ಲ. ಸರ್ಕಾರ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಂತೆ ವರ್ತಿಸುತ್ತಿದೆ. ಆದರೆ ಸಮುದಾಯ ಹೀಗೆ ನಿರ್ದಯಿಯಾಗಿರಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಅಸ್ಮಿತೆಯನ್ನು ಉಳಿಸಲಿ ಆದರೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಕೊಡುವ ಸಾಧನವಾಗದಿರಲಿ. ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿ. ದಯಮಾಡಿ ಅವಕಾಶ ಮಾಡಿಕೊಡಿ. ಸರ್ಕಾರ ಕಣ್ಣು ಕಿವಿ ಮುಚ್ಚಿಕೊಂಡಿದೆ, ಸಮುದಾಯವಾದರೂ ತೆರೆದು ನೋಡುವ ವಿವೇಕ ಹೊಂದಿರಲಿ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

ಕೊನೆಯ ಓವರ್ ನಲ್ಲಿ ಧೋನಿ ಮಿಂಚು: ಮುಂಬೈಗೆ ಸತತ 7ನೇ ಸೋಲು!

Next Post

ಸುದರ್ಶನ್ ಟಿ.ವಿಯ ‘ಜಾಬ್ ಜಿಹಾದ್’ ಕೂಗು ಮತ್ತು ಮುಸ್ಲಿಮರ ವಾಸ್ತವ ಸ್ಥಿತಿಗತಿಗಳು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post
ಸುದರ್ಶನ್ ಟಿ.ವಿಯ ‘ಜಾಬ್ ಜಿಹಾದ್’ ಕೂಗು ಮತ್ತು ಮುಸ್ಲಿಮರ ವಾಸ್ತವ ಸ್ಥಿತಿಗತಿಗಳು

ಸುದರ್ಶನ್ ಟಿ.ವಿಯ 'ಜಾಬ್ ಜಿಹಾದ್' ಕೂಗು ಮತ್ತು ಮುಸ್ಲಿಮರ ವಾಸ್ತವ ಸ್ಥಿತಿಗತಿಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada