ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ಹ್ಯುಮಿಡಿಟಿ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸ್ಟೋರ್ ಮಾಡಿ ಇಟ್ಟಿರುವಂತ ಕಾಳುಗಳು, ಧಾನ್ಯಗಳು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ..ಅದರಲ್ಲೂ ಮುಖ್ಯವಾಗಿ ಕೀಟಗಳ ಬೆಳವಣಿಗೆ ಮಾನ್ಸೂನ್ ಅಲ್ಲಿ ಜಾಸ್ತಿ ಆಗುತ್ತದೆ.ಬ್ಯಾಕ್ಟೀರಿಯ ಹೆಚ್ಚಾದಂತೆ ಫಂಗಸ್ ಬರುತ್ತದೆ..ಧಾನ್ಯಗಳ ಕೆಟ್ಟ ವಾಸನೆ ಹಾಗೂ ಹುಲಗಾಗುತ್ತದೆ.. ಅದರಿಂದ ಮನೆಯಲ್ಲಿ ಇರುವಂತಹ ಧಾನ್ಯಗಳನ್ನ ಸೇಫ್ ಆಗಿ ಶೇಖರಣೆ ಮಾಡಲು ಈ ಟಿಪ್ಸ್ ಅನ್ನ ಫಾಲೋ ಮಾಡುವುದು ಉತ್ತಮ..

ಡ್ರೈ ರೋಸ್ಟ್
ಮನೆಗೆ ತಿಂಗಳಿಗೊಮ್ಮೆ ಅಥವಾ 15 ದಿನಕ್ಕೊಮ್ಮೆ ಧಾನ್ಯ ಅಥವಾ ಬೇಳೆ ಕಾಳುಗಳನ್ನು ತರಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಳುಗಳನ್ನು ಎಣ್ಣೆ ಬಳಸದೆ ಹಾಗೆ ಬಾಣಲೆಯಲ್ಲಿ ಡ್ರೈರೋಸ್ಟ್ ಮಾಡಿ, ಬೆಚ್ಚಗಾದ ನಂತರ ಅದನ್ನು ಒಂದು ಡಬ್ಬಕ್ಕೆ ಹಾಕಿ ಮುಚ್ಚಿಡುವುದರಿಂದ ಬೇಳೆಕಾಳುಗಳು ಹಾಳಾಗುವುದಿಲ್ಲ. ಹೀಗೆ ಮಾಡುವುದರಿಂದ ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಕೀಟಗಳಿಗೆ ಕಡಿಮೆ ಒಳಗಾಗುತ್ತದೆ, ಫಂಗಸ್ ಕೂಡ ಬರುವುದಿಲ್ಲ..

ಲವಂಗ ಬಳಸಿ
ಬೇಳೆ ಕಾಳುಗಳನ್ನ ಹಾಕಿಡುವ ಡಬ್ಬದಲ್ಲಿ ಒಂದೆರಡು ಲವಂಗವನ್ನು ಹಾಕಿ ನಂತರ ಕಾಳುಗಳನ್ನ ಅದರೊಳಗೆ ಹಾಕಿ ಮುಚ್ಚಿಡುವುದರಿಂದ ಯಾವುದೇ ರೀತಿಯ ಬ್ಯಾಕ್ಟಿರಿಯ ಅಥವಾ ಫಂಗಸ್ ಹಾಗೂ ಹುಳಗಳು ಬರುವುದಿಲ್ಲ. ಕಾರಣ ಲವಂಗದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಿರುವುದರಿಂದ ಇದು ಕಡಿಮೆ ತೇವಾಂಶವನ್ನ ಮಾಡುತ್ತದೆ ಹಾಗೂ ಪೇಸ್ಟ್ ಇನ್ಫೆಕ್ಷನ್ ಅನ್ನು ಕೂಡ ತಡೆದು ಹಾಕುತ್ತದೆ.

ಬಿಸಿಲಲ್ಲಿ ಒಣಗಿಸಿ
ಮಳೆಗಾಲ ಶುರುವಾಗುವ ಮುನ್ನ ಮನೆಯಲ್ಲಿರುವ ಬೇಳೆ ಕಾಳುಗಳನ್ನು ಅಥವಾ ತಂದ ಧಾನ್ಯಗಳನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ. ಇದರಿಂದ ತೇವಾಂಶ ಕಡಿಮೆಯಾಗುತ್ತದೆ ಪೇಸ್ಟ್ ಇನ್ಫೆಕ್ಷನ್ ಇಂದ ದೂರವಿಡುತ್ತದೆ. ಇನ್ನು ಮುಖ್ಯವಾಗಿ ಸೂರ್ಯನ ಶಾಖದಿಂದ ಯಾವುದೇ ತೇವಾಂಶವನ್ನ ಆವಿಯಾಗುವಂತೆ ಮಾಡುತ್ತದೆ. ಮತ್ತು ಧಾನ್ಯಗಳಲ್ಲಿ ಗುಣಮಟ್ಟವನ್ನ ಹೆಚ್ಚುತ್ತದೆ ಮತ್ತು ದೀರ್ಘಕಾಲದ ವರೆಗೂ ಆ ಕಾಳುಗಳನ್ನು ನಾವು ಇಟ್ಟುಕೊಳ್ಳಬಹುದು.
