ನಿನ್ನೆ (ಏ.19) ಹೋಮ್ ಪಿಚ್ ನಲ್ಲಿ ನಡೆದ RCB v/s ಪಂಜಾಬ್ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal challengers) ಮತ್ತೊಮ್ಮೆ ಸೋಲು ಕಂಡಿದ್ದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.ತವರು ನೆಲ ಬೆಂಗಳೂರಿನಲ್ಲಿ ಆಡಿದ ಮೂರು ಪಂದ್ಯಗಳನ್ನು RCB ಕೈಚೆಲ್ಲಿದೆ.

ಹೀಗಾಗಿ ಪ್ಲೇ ಆಫ್ ಗೆ ಎಂಟ್ರಿ ಕೊಡುವ ನಿಟ್ಟಿನಲ್ಲಿ ಈಗ RCB ಗೆ ಸವಾಲು ಎದುರಾಗಿದ್ದು, ಇನ್ನು ಬಾಕಿ ಇರುವ 7 ಪಂದ್ಯಗಳಲ್ಲಿ 4 ಪಂದ್ಯ ಜಯ ಸಾಧಿಸುವುದು ತಂಡಕ್ಕೆ ಅನಿವಾರ್ಯವಾಗಿದೆ.
ಹೌದುRCB ಪ್ಲೇ ಆಫ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಇನ್ನೂ ಅಂಕಗಳ ಅವಶ್ಯಕತೆಯಿದೆ.ಹೀಗಾಗಿ RCB ಮುಂದಿನ 7 ಪಂದ್ಯಗಳಲ್ಲಿ 4 ಮ್ಯಾಚ್ಗಳನ್ನು ಗೆಲ್ಲಲೇಬೇಕಿದೆ. ಇದರ ಜೊತೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಎಲ್ಲ ಪಂದ್ಯಗಳು ನಡೆಯಲಿವೆ.

ಈ ಟ್ವಿಸ್ಟ್ ಅಭಿಮಾನಿಗಳಲ್ಲಿ ಚಿಂತೆ ಕಾಡುವಂತೆ ಮಾಡಿದೆ. ಹೀಗಾಗಿ RCB ತವರು ಮೈದಾನದಲ್ಲಿ ಆಡುವ ಮುಂದಿನ ಎಲ್ಲಾ ಪಂದ್ಯಗಳು ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಪಂದ್ಯಗಳಲ್ಲಿ ಗೆದ್ದರೆ RCB 4 ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಎಂಟ್ರಿ ಸಿಗಲಿದೆ.