• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಮ್ಮ ಜ್ಞಾನ ಕರ್ಮ ಸಿದ್ಧಾಂತ ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕುಎಂದು ಕರೆ ಕೊಟ್ಟ ಸಿ.ಎಂ ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
April 19, 2025
in ಕರ್ನಾಟಕ, ರಾಜಕೀಯ
0
ನಮ್ಮ ಜ್ಞಾನ ಕರ್ಮ ಸಿದ್ಧಾಂತ ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕುಎಂದು ಕರೆ ಕೊಟ್ಟ ಸಿ.ಎಂ ಸಿದ್ದರಾಮಯ್ಯ
Share on WhatsAppShare on FacebookShare on Telegram

ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ಇತ್ತು. ಆದರೆ ನಮಗೀಗ ಶಿಕ್ಷಣ ಸಿಕ್ಕಿದೆ. ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ: ಸಿ.ಎಂ ಸಿದ್ದರಾಮಯ್ಯ ಕರೆ

ADVERTISEMENT

ನಮ್ಮ ಜ್ಞಾನ ಕರ್ಮ ಸಿದ್ಧಾಂತ ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು: ಸಿ.ಎಂ

ಶೂದ್ರರು ವಿದ್ಯಾವಂತರಾಗಿ ಏನಾದರೂ ಬರೆದರೆ ಅವರ ಬಗ್ಗೆ ಕತೆ ಕಟ್ಟಿ ಬಿಡ್ತಾರೆ ಹುಷಾರು: ಕಾಳಿದಾಸ, ವಾಲ್ಮೀಕಿ ಪ್ರಸಂಗ ಉದಾಹರಿಸಿ ಎಚ್ಚರಿಸಿದ ಸಿಎಂ

ತುಮಕೂರು ನಲ್ಲಿ ನೆಡೆದ ಕುರುಬ ಸಾಂಸ್ಕೃತಿಕ ಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ: ಹಿಂದೆ ಸಂಸ್ಕೃತ ಕಲಿಯುವವರಿಗೆ, ಶಿಕ್ಷಣ ಕಲಿಯುವ ಇತರರಿಗೆ ಕಾದ ಸೀಸದ ಶಿಕ್ಷೆ ಇತ್ತು. ಆದರೆ ನಮಗೀಗ ಶಿಕ್ಷಣ ಸಿಕ್ಕಿದೆ. ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಪ್ರಜಾ ಪ್ರಗತಿ ಪತ್ರಿಕೆ, ಕುರುಬ ಸಾಂಸ್ಕೃತಿಕ‌ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿಕ‌ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಮ್ಮ ಜ್ಞಾನ ತಿಳಿವಳಿಕೆಯಲ್ಲಿ ಸ್ಪಷ್ಟತೆ ಇರಬೇಕು. ಕರ್ಮ ಸಿದ್ಧಾಂತವನ್ನು ದಿಕ್ಕರಿಸುವ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು. ಆಗ ಮಾತ್ರ ಗುಲಾಮಗಿರಿಯಿಂದ ಹೊರಗೆ ಬರಬಹುದು. ಸತ್ಯ ಹೇಳುವ ಚಾತಿ ಬೆಳೆಸಿಕೊಳ್ಳಬಹುದು ಎಂದರು.

ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ‌ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡ್ತಾರೆ ಹುಷಾರು ಎಂದು ಎಚ್ಚರಿಸಿದರು.

B Dayananda : ಬೆಂಗಳೂರಿಗರ ಪ್ರಶ್ನೆಗಳಿಗೆ ಉತ್ತರಿಸಿದ ಬಿ ದಯಾನಂದ! #pratidhvani

ಬಸವಣ್ಣ 850 ವರ್ಷಗಳ ಹಿಂದೆಯೇ ಅನುಭವ ಮಂಟಪ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು.
ಪ್ರಗತಿಪರ ವಿಚಾರಗಳನ್ನು ಇಟ್ಟುಕೊಂಡವರಿಗೆ ನಿರಂತರವಾಗಿ ಸಮಸ್ಯೆ ಬರುತ್ತಲೇ ಇರುತ್ತವೆ. ಹೀಗಾಗಿ ಪ್ರಗತಿಪರ ವಿಚಾರಗಳ ಜೊತೆ ನೀವು ಸದಾ ಗಟ್ಟಿಯಾಗಿ ನಿಲ್ಲಬೇಕು.
ಪ್ರಗತಿಪರ ವಿಚಾರಗಳ ಜೊತೆಗೆ ನಾವು ನಿಲ್ಲದೆ ಸಮ ಸಮಾಜ ಬರಬೇಕು ಎಂದರೆ ಸಾಧ್ಯವಿಲ್ಲ ಎಂದು ವಿವರಿಸಿದ ಸಿ.ಎಂ

ಸಿಎಂ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳೆಂದರೆ

ಜಾತಿಗೆ ಚಲನ ಇಲ್ಲ. ವರ್ಗಕ್ಕೆ ಚಲನೆ ಇಲ್ಲ. ಜಾತಿ ವ್ಯವಸ್ಥೆ ನಿಂತ ನೀರು. ಚಲನೆ ಇಲ್ಲ. ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿಯಲ್ಲೂ ಚಲನೆ ಸಿಗುತ್ತದೆ. ಈ ಚಲನೆ ಸಿಗಬೇಕಾದರೆ ಶಿಕ್ಷಣದ ಅಗತ್ಯ ಇದೆ ಎಂದರು.

*ಜಾತಿ ಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ ಇವತ್ತಿಗೂ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಇಲ್ಲದಿರುವುದು ಬೇಸರದ ಸಂಗತಿ.

*ನಾನು ಶಿಕ್ಷಣ ಪಡೆದಿರುವುದು ನನ್ನ ಸ್ವಾರ್ಥಕ್ಕೆ ಅಲ್ಲ. ಅವಕಾಶ ವಂಚಿತ ಸಮುದಾಯಗಳ ಬಿಡುಗಡೆಗಾಗಿ ವಿದ್ಯೆ ಸಂಪಾದನೆ ಮಾಡಿದ್ದೇನೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಅರ್ಥ ಮಾಡಿಕೊಳ್ಳಬೇಕು.

*ಸಂವಿಧಾನ ಬರದೇ ಇದ್ದರೆ ನಾವು, ನೀವು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ.

ಮನುಸ್ಮೃತಿ ಕಾರಣದಿಂದ ಜಾತಿ ಅಸಮಾನತೆ, ಜಾತಿ ಶೋಷಣೆ, ಜಾತಿ ದೌರ್ಜನ್ಯ ಹೆಚ್ಚಾಯಿತು

*ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ.

*ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರೆಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ

*ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ, ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ಸ್ಮರಿಸಿ.

*ಕಾಯಕ, ದಾಸೋಹ ಬಸವಣ್ಣನವರ ತತ್ವ. ಇದನ್ನು ಎಲ್ಲರೂ ಪಾಲಿಸಿ .

*ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ಅಳವಡಿಸಿಕೊಳ್ಳಬೇಕು

*ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ‌ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು

Tags: best youtube channel for current affairs in kannadadaily current affairshow to get aswin highest marks in anthropologyhow to get aswin highest morks in upsc mainshow to get good marks in upsc mainshow to use track changes in microsoft wordhow to use track changes in wordknowledgescience for group c examscience for psi pc examscience for sda fda examscientifixsiddaramaiahsiddaramaiah and bommai fight in assemblysiddaramaiah vs bommaithe hindu editorial discussionthe hindu news
Previous Post

UPI ವಹಿವಾಟಿನಲ್ಲಿ 2000/- ಕ್ಕಿಂತ ಹೆಚ್ಚು ಹಣ ಕಳುಹಿಸಿದ್ರೆ GST ಕಟ್ಟಬೇಕಾ..? ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದೇನು..? 

Next Post

ತಂದೆಯವರ ಶಾಲೆಗೆ ನೆರವು ನೀಡಿದ ಸಚಿವ ಮಧು ಬಂಗಾರಪ್ಪ

Related Posts

ಪಲ್ಲವಿ ಲಕ್ಷ್ಮಿಕಾಂತ್‌ ಸಾವಿಗೆ ಏನು‌ ಕಾರಣ? ಕೊನೆಯ ಕ್ಷಣಗಳ ಬಗ್ಗೆ ಮಲ್ಲಮ್ಮ ಹೇಳಿದ್ದೇನು?
ಕರ್ನಾಟಕ

ಪಲ್ಲವಿ ಲಕ್ಷ್ಮಿಕಾಂತ್‌ ಸಾವಿಗೆ ಏನು‌ ಕಾರಣ? ಕೊನೆಯ ಕ್ಷಣಗಳ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

by ಪ್ರತಿಧ್ವನಿ
September 22, 2026
0

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ತಮ್ಮ ಮುಗ್ಧ ನಡವಳಿಕೆಯಿಂದಲೇ ವೀಕ್ಷಕರ ಮನ ಗೆದ್ದಿದ್ದ ಮಲ್ಲಮ್ಮ ಅವರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಫ್ಯಾಷನ್ ಡಿಸೈನರ್ ಪಲ್ಲವಿ...

Read moreDetails
ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

September 22, 2026
ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

September 22, 2026
KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

ಕಾಡು ಕಾಯದಿದ್ದರೆ ಅರಣ್ಯ ಉಳಿಯುತ್ತಿರಲಿಲ್ಲ : ಅರಣ್ಯ ಇಲಾಖೆ ಸಿಬ್ಬಂದಿಗಳ ಪರ ಸಿಎಂ ಡಿಕೆಶಿ ಬ್ಯಾಟಿಂಗ್

September 22, 2026
ಕಸ್ತೂರಿರಂಗನ್ ವರದಿ: ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚನೆ.!

ಕಸ್ತೂರಿರಂಗನ್ ವರದಿ: ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚನೆ.!

September 22, 2026
Next Post
ತಂದೆಯವರ ಶಾಲೆಗೆ ನೆರವು ನೀಡಿದ ಸಚಿವ ಮಧು ಬಂಗಾರಪ್ಪ

ತಂದೆಯವರ ಶಾಲೆಗೆ ನೆರವು ನೀಡಿದ ಸಚಿವ ಮಧು ಬಂಗಾರಪ್ಪ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada