ಬೆಂಗಳೂರು ; ನವೆಂಬರ್ 29 ಶುಕ್ರವಾರದಂದು ಭಾರತದಾದ್ಯಂತ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುತ್ತಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (MAI) ಮತ್ತು ಭಾರತದಾದ್ಯಂತ ಸಿನಿಮಾಗಳು 99 ರೂ.ಗಿಂತ ಕಡಿಮೆ ದರದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದಾಗಿ ಮೊದಲೇ ಘೋಷಿಸಿದ್ದು
ಅದರಂತೆ ಇಂದು ಪ್ರವೇಶದ ದರ 99 ರೂಪಾಯಿ ಇತ್ತು. ಈ ಹೊಸ ಘೋಷಣೆಗೆ ಸಿನಿಪ್ರಿಯರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು ನಗರದ ಬಹುತೇಕ ಮಲ್ಟಿಪ್ಲೆಕ್ಸ್ ಗಳು ಹೌಸ್ ಫುಲ್ ಆಗಿದ್ದವು.
ಆಸಕ್ತ ವೀಕ್ಷಕರು BookMyShow, Paytm ಅಥವಾ ಮಲ್ಟಿಪ್ಲೆಕ್ಸ್‌ಗಳ ಆಯಾ ವೆಬ್‌ಸೈಟ್‌ಗಳಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದ್ದಾರೆ. ಅವರ ನೆಚ್ಚಿನ ಚಿತ್ರವನ್ನು ನೋಡುವ ಚಿತ್ರಮಂದಿರಗಳಲ್ಲಿ, ಅವರ ವೆಬ್‌ಸೈಟ್‌ಗಳಲ್ಲಿ ಮತ್ತು ಅವರ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕ ಟಿಕೆಟ್‌ಗಳು ಬುಕ್ ಮಾಡಲು ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ದಿನದಂದು 6.5 ಮಿಲಿಯನ್ ಏಕದಿನ ಪ್ರವೇಶದ ದಾಖಲೆಯನ್ನು ನಿರ್ಮಿಸಲಾಗಿತ್ತು.. ಈ ವರ್ಷ 4000 ಕ್ಕೂ ಹೆಚ್ಚು ಸ್ಕ್ರೀನ್‌ಗಳು ಈ ಸಂದರ್ಭವನ್ನು ಆಚರಿಸಿವೆ.. PVR INOX, CINEPOLIS, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE ಮುಂತಾದ ಹೆಸರಾಂತ ಚಿತ್ರಮಂದಿರಗಳು ಈ ಸೇಲ್‌ನಲ್ಲಿ ಭಾಗವಹಿಸಿವೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಕಟಣೆಯು ಹೊಸ ಕೊಡುಗೆಯ ಹಿಂದಿನ ಕಾರಣವನ್ನು ವಿವರಿಸುತ್ತದೆ. ಪತ್ರದಲ್ಲಿ, “ಈ ವಿಶೇಷ ಸಂದರ್ಭವು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಒಂದು ದಿನದ ಸಿನಿಮೀಯ ಆನಂದಕ್ಕಾಗಿ ಕರೆತರುತ್ತದೆ, ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಬಹು ಚಲನಚಿತ್ರಗಳ ಅದ್ಭುತ ಯಶಸ್ಸನ್ನು ಆಚರಿಸುತ್ತದೆ. ಇದಕ್ಕೆ ಸಹಕರಿಸಿದ ಎಲ್ಲಾ ಚಲನಚಿತ್ರ ಪ್ರೇಕ್ಷಕರಿಗೆ ಇದು ಹೃತ್ಪೂರ್ವಕ “ಧನ್ಯವಾದಗಳು” ಯಶಸ್ಸು ಮತ್ತು ಇನ್ನೂ ತಮ್ಮ ಸ್ಥಳೀಯ ಚಿತ್ರರಂಗಕ್ಕೆ ಹಿಂತಿರುಗದವರಿಗೆ ಮುಕ್ತ ಆಹ್ವಾನ ಎಂದು ಹೇಳಿದೆ.
ಚಂದನವನದ ತೆರೆಗಳಲ್ಲಿ ಈ ದಿನ ನಾಲ್ಕು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು ಉತ್ತಮ ಒಪನಿಂಗ್ ಸಿಕ್ಕಿದೆ.
- ನಾ ನಿನ್ನ ಬಿಡಲಾರೆ
ಈ ಚಿತ್ರವು ಸುಮಾರು ನಾಲ್ಕು ದಶಕಗಳ ಹಿಂದಿನ ಅನಂತನಾಗ್ ಅಭಿನಯದ ಹಿಟ್ ಚಿತ್ರ ಆಗಿದ್ದು ಇದೀಗ ಅದೇ ಹೆಸರಿನ ನೂತನ ಚಿತ್ರ ಬಂದಿದೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಿತವಾಗಿರುವ ಈ ಚಿತ್ರದಲ್ಲಿ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿದ್ದಾರೆ. ನವೀನ್ ಜಿ.ಎಸ್. ಅವರ ನಿರ್ದೇಶನದಲ್ಲಿ ಮೂಡಿರುವ ಈ ಚಿತ್ರವು ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಹಾರರ್ ಪ್ರಕಾರವನ್ನು ಹೊಂದಿದೆ. ಮುಖ್ಯಭೂಮಿಕೆಯಲ್ಲಿ ಅಂಬಾಲಿ ಭಾರತಿ ಜೊತೆಗೆ ಪಂಚಿ, ಸೀರುಂಡೆ ರಘು, ಕೆ.ಎಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮತ್ತು ಮಂಜುಳಾ ರೆಡ್ಡಿ ನಟಿಸಿದ್ದಾರೆ. ಚಿತ್ರಕ್ಕೆ ವೀರೇಶ್ ಎಸ್. ಅವರ ಛಾಯಾಚಿತ್ರಗ್ರಹಣ ಮತ್ತು ಎಂ.ಎಸ್.ತ್ಯಾಗರಾಜು ಅವರ ಸಂಗೀತ ಸಂಯೋಜನೆ ಇದೆ.
- ಜಲಂಧರ
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ವಿಷ್ಣು ವಿ. ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಸ್ಟೆಪ್ ಅಪ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿತವಾದ ಈ ಚಿತ್ರದಲ್ಲಿ ರುಶಿಕಾ ರಾಜ್, ಆರೋಹಿತ ಗೌಡ, ಬಲ ರಾಜವಾಡಿ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ, ವಿಜಯರಾಜ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಥೆಯನ್ನು ಲೋಕಿ ಬರೆದಿದ್ದು, ವಿಷ್ಣು ವಿ. ಪ್ರಸನ್ನ ಮತ್ತು ಅಕ್ಷಯ್ ಕುಮಾರ್ ಅವರ ಚಿತ್ರಕಥೆ ಇದೆ. ಶ್ಯಾಮ್ ಸುಂದರ್ ಅವರ ಸಂಭಾಷಣೆ ಮತ್ತು ಜ. ಜತಿನ್ ದರ್ಶನ್ ಅವರ ಸಂಗೀತ ಚಿತ್ರಕ್ಕೆ ವಿಶೇಷವಾಗಿದೆ.
- ಮೇಘ
ಕಿರಣ್ ರಾಜ್ ಅಭಿನಯಿಸಿದ ‘ಮೇಘ’ ಚಿತ್ರವು ನಂತರದ ಚಿತ್ರ ‘ರಾನಿ’ ನಂತರ ಕೊಟ್ಟ ಹೊಸ ಸೇರ್ಪಡೆವಾಗಿದೆ. ಚರಣ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಕುಂದರ್ ಅವರ ಜೊತೆಗೆ ಕಿರಣ್ ರಾಜ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವು ಕೌಟುಂಬಿಕ ಹಾಗೂ ಮನರಂಜನಕ ಕಥೆ ಹೊಂದಿದ್ದು, ಇಬ್ಬರ ಹೆಸರುಗಳು ಕೂಡ ‘ಮೇಘ’ ಎಂಬುದು ಚಿತ್ರದಲ್ಲಿ ಪ್ರಮುಖ ಆಗಿದೆ. ಕೃಷಿ ಪ್ರೊಡಕ್ಷನ್ಸ್ ಬ್ಯಾನರ್‌ನ ಈ ಚಿತ್ರದಲ್ಲಿ ರಾಜೇಶ್ ನಟರಂಗ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಶೋಭರಾಜ್, ಸಂಗೀತಾ, ಸುಂದರ್ ವೀಣಾ, ಹನುಮಂತೇಗೌಡ, ತರಂಗ ವಿಶ್ವ, ಗಿರೀಶ್ ಶಿವಣ್ಣ ಮುಂತಾದವರು ನಟಿಸಿದ್ದಾರೆ.
- ಅನಾಥ
ಗೋನೇಂದ್ರ ಫಿಲಂ ಸಂಸ್ಥೆ ನಿರ್ಮಿಸಿದ ‘ಅನಾಥ’ ಚಿತ್ರದಲ್ಲಿ ಇಂದ್ರ ನಾಯಕನಾಗಿ ಅಭಿನಯಿಸಿದ್ದಾರೆ. ಇಂದ್ರ ಅವರೇ ಈ ಚಿತ್ರದ ನಿರ್ಮಾಪಕರಾಗಿದ್ದು, ಸಂಗೀತ ನಿರ್ದೇಶನ ಮತ್ತು ಚಿತ್ರ ನಿರ್ಮಾಣವನ್ನು ನಡೆಸಿದ್ದಾರೆ. ಈ ಚಿತ್ರವು ವಿಜಯಪುರದ ಅಣ್ಣಾ ಶೇಟ್ ಕೆ. ಎ. ಅವರ ನಿರ್ದೇಶನದಲ್ಲಿ ನಿರ್ಮಿತವಾಗಿದೆ. ಸಮಾಜದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ರೂಪಿಸಲಾಗಿದೆ. ವೀರೇಶ್ ಕುಮಾರ್ ಅವರ ಛಾಯಾಚಿತ್ರಗ್ರಹಣ ಮತ್ತು ರಮೇಶ್ ರಂಜಿತ್ ಅವರ ಸಾಹಸ ನಿರ್ದೇಶನ ಚಿತ್ರಕ್ಕೆ ಪ್ರಮುಖವಾಗಿವೆ. ನಿಖಿತಾ ಸ್ವಾಮಿ, ಯುಕ್ತ ಪರ್ವಿ, ಶೋಭರಾಜ್, ಸಂಗೀತ, ಹೊನ್ನವಳ್ಳಿ ಕೃಷ್ಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ