• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

ಪ್ರತಿಧ್ವನಿ by ಪ್ರತಿಧ್ವನಿ
May 25, 2026
in Top Story
0
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !
Share on WhatsAppShare on FacebookShare on Telegram

ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರದ ಶೈಲಿ ಮತ್ತು ದೃಶ್ಯಾವಳಿಗಳ ಬಗ್ಗೆ ಟೀಕೆ ಮಾಡಿದ್ದರು. ಇದೀಗ ಈ ವಿವಾದಕ್ಕೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT
Nithin Nabin Meeting : ರಾಜ್ಯ ನಾಯಕರ ಜತೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಬಿನ್‌ ಮೀಟಿಂಗ್‌..! #bengaluru

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟೀಸರ್ ಅನ್ನೋದು ಕೇವಲ ಒಂದು ಆಹ್ವಾನ ಮಾತ್ರ. ಅದನ್ನೇ ಇಡೀ ಸಿನಿಮಾ ಎಂದು ಅರ್ಥೈಸಬಾರದು. ಪ್ರೇಕ್ಷಕರ ಗಮನ ಸೆಳೆಯಲು ಟೀಸರ್ ಅನ್ನು ಆ ರೀತಿಯಲ್ಲಿ ರೂಪಿಸಲಾಗಿದೆ. ಆದರೆ ಚಿತ್ರದ ಕಥೆ ಮತ್ತು ವಿಷಯ ಸಂಪೂರ್ಣ ಬೇರೆ ಇದೆ” ಎಂದು ಸ್ಪಷ್ಟಪಡಿಸಿದರು.

“ವಿದೇಶಿ ಪ್ರೇಕ್ಷಕರೂ ಈಗ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅವರ ಅಭಿರುಚಿಗೆ ತಕ್ಕಂತೆ ಚಿತ್ರಗಳನ್ನು ಪ್ರಸ್ತುತಪಡಿಸುವ ಅಗತ್ಯ ಇದೆ. ಅದಕ್ಕಾಗಿಯೇ ಟೀಸರ್‌ಗೆ ಅಂತಾರಾಷ್ಟ್ರೀಯ ಶೈಲಿ ನೀಡಲಾಗಿದೆ” ಎಂದರು.

BS Yediyurappa : ಯಡಿಯೂರಪ್ಪ ಕಂಡ್ರೆ ಎಷ್ಟು ಗೌರವ ನೋಡಿ ಬಿಜೆಪಿ ನಾಯಕರಿಗೆ..! #ctravi #ashwathnarayan

ಟೀಸರ್ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಪುಷ್ಪಾ ಅರುಣ್ ಕುಮಾರ್, “ಯಶ್ ಅಭಿನಯದ ಯಾವ ಸಿನಿಮಾದಲ್ಲಾದರೂ ಅಶ್ಲೀಲತೆ ಇದೆ ಎಂದು ಹೇಳಬಹುದು? ಜನರು ಕುಟುಂಬ ಸಮೇತರಾಗಿ ಅವರ ಸಿನಿಮಾಗಳನ್ನು ನೋಡಿದ್ದಾರೆ. ಟೀಸರ್ ನೋಡಿ ತೀರ್ಪು ಕೊಡಬೇಡಿ” ಎಂದು ಹೇಳಿದರು.ಇಂದಿನ ಯುವ ಪ್ರೇಕ್ಷಕರ ಅಭಿರುಚಿ ಬದಲಾಗಿದ್ದು, ನಿರ್ದೇಶಕರು ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. “ಹಿಂದಿನ ಕಾಲದ ಶೈಲಿಯ ಸಿನಿಮಾಗಳನ್ನು ಈಗಿನ ಯುವಕರು ಅಷ್ಟಾಗಿ ನೋಡುವುದಿಲ್ಲ. ಅವರಿಗೆ ಇಷ್ಟವಾಗುವ ರೀತಿಯಲ್ಲಿ ಕಥೆ ಮತ್ತು ಪ್ರಸ್ತುತಿ ಇರಬೇಕು” ಎಂದು ಅಭಿಪ್ರಾಯಪಟ್ಟರು.

 

ಕನ್ನಡ ಚಿತ್ರರಂಗದಲ್ಲಿ ವಲ್ಗರ್ ಸಿನಿಮಾಗಳು ಬರುತ್ತಿವೆ ಎಂಬ ಆರೋಪಕ್ಕೂ ಅವರು ತಿರುಗೇಟು ನೀಡಿದರು. “ಮಚ್ಚು-ಲಾಂಗು ಇರುವ ಆ್ಯಕ್ಷನ್ ಸಿನಿಮಾಗಳನ್ನೇ ಇಂದಿನ ಯುವಕರು ಹೆಚ್ಚು ಇಷ್ಟಪಡುತ್ತಾರೆ. ಹಾಗೆಂದರೆ ಅವು ಅಶ್ಲೀಲ ಅನ್ನೋದಿಲ್ಲ. ಪ್ರೇಕ್ಷಕರ ಬೇಡಿಕೆಯಂತೆ ಸಿನಿಮಾಗಳು ರೂಪುಗೊಳ್ಳುತ್ತಿವೆ” ಎಂದು ಹೇಳಿದರು.ತಮ್ಮ ನಿರ್ಮಾಣದ ಕೊತ್ತಲವಾಡಿ ಚಿತ್ರದ ಉದಾಹರಣೆ ನೀಡಿದ ಅವರು, “ಅದು ಒಂದು ಸಾಂಸಾರಿಕ ಸಿನಿಮಾ. ಆದರೆ ಥಿಯೇಟರ್ ಸಿಗಲಿಲ್ಲ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೂ ಬರುತ್ತಿವೆ” ಎಂದು ಹೇಳಿದರು.

Nithin Nabin : ಕಾಡುಮಲ್ಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಬಿನ್‌..! #bjppresident

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಿನಿಮಾಗಳು ನಿರ್ಮಾಣವಾಗುತ್ತಿರುವುದರ ಬಗ್ಗೆ ಮಾತನಾಡಿದ ಅವರು, “ಕನ್ನಡದಲ್ಲಿ ಯಶ್ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ತಮಿಳಿನ ವಿಜಯ್ ಅವರ ‘ಜನನಾಯಗನ್’ ಕೂಡ ದೊಡ್ಡ ಚಿತ್ರವೇ. ನಮ್ಮ ಕನ್ನಡದಲ್ಲಿ ಇಂತಹ ದೊಡ್ಡ ಸಿನಿಮಾಗಳು ಬರುತ್ತಿರುವುದು ಹೆಮ್ಮೆಪಡುವ ವಿಷಯ” ಎಂದು ಹೇಳಿದರು.

Previous Post

ಬೆಂಗಳೂರಿಗೆ ಬರಲಿದೆ ವಿಶ್ವದ ಮೂರನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ; ಸೂರ್ಯನಗರದಲ್ಲಿ ‘ಮೆಗಾ ಸ್ಪೋರ್ಟ್ಸ್ ಸಿಟಿ’ ವಿಶೇಷತೆ ಏನು? 

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada