2025ರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಪಾಕಿಸ್ತಾನದಲ್ಲಿ (Pakistan) ಚಾಂಪಿಯನ್ಸ್ ಟ್ರೋಫಿ (champions trophy) ನಡೆಯಲಿದ್ದು, ಭಾರತ ಈ ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಇನ್ನು ಗೊಂದಲ ಹಾಗೆ ಮುಂದುವರೆದಿದೆ. ಪಾಕಿಸ್ತಾನದಲ್ಲಿ ಭದ್ರತೆಯ ಭೀತಿಯಿಂದ ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಕೇಂದ್ರ ಅನುಮತಿ ನೀಡಲು ನಿರಾಕರಿಸಿದೆ.
ಪಾಕಿಸ್ತಾನಕ್ಕೆ ಭಾರತ ತಂಡ ತೆರಳುವ ಬದಲು ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟೂರ್ನಿ ನಡೆಸಲು ಬಿಸಿಸಿಐ ಒತ್ತಾಯಿಸಿದೆ.
ಈ ವಿಚಾರವಾಗಿ ಮಾಜಿ ಕ್ರಿಕೆಟಿಗ ತೇಜಸ್ವಿ ಯಾದವ್ (Tejaswi yadav) ಪ್ರಧಾನಿ ಮೋದಿ (Pm modi) ವಿರುದ್ಧ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಪಾಕಿಸ್ತಾನಕ್ಕೆ ಭೇಟಿ ನೀಡಬಹುದಾದರೆ, ಭಾರತೀಯ ಕ್ರಿಕೆಟ್ ತಂಡ ಹೋಗಿ ಏಕೆ ಆಡಬಾರದು? ಎಂದು ಪ್ರಶ್ನಿಸಿದ್ದಾರೆ.