ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಮತ್ತು ಸಚಿವ ಸತೀಶ್ ಜಾರಕಿಹೊಳಿ (Satish jarakiholi) ನಡುವೆ ಮುನಿಸಿಗೆ ಕಾರಣವಾಗಿದ್ದ ಕಾಂಗ್ರೆಸ್ ಭವನ ನಿರ್ಮಾಣದ ವಿಚಾರವಾಗಿ ಮಾತನಾಡಿದ ಸಚಿವ ಸತೀಶ ಜಾರಕಿಹೋಳಿ, ಕಾಂಗ್ರೆಸ್ ಭವನ ನಿರ್ಮಾಣ ಮಾಡಲಿಕ್ಕೆ ಎಲ್ಲರ ಶ್ರಮ ಇದೆ. ಲಕ್ಷ್ಮೀ ಹೆಬ್ಬಾಳಕರ (Lakshmi hebbalkar) ಹಾಗೂ ನಾವೂ ಎಲ್ಲರೂ ಶ್ರಮ ವಹಿಸಿದ್ದೇವೆ ಎಂದಿದ್ದಾರೆ.

ಇನ್ನು ರಮೇಶ ಜಾರಕಿಹೋಳಿ ಕಾಂಗ್ರೆಸ್ ಪಕ್ಷದಲ್ಲಿ ಇರುವಾಗ ಡಿಕೆ ಶಿವಕುಮಾರ್ ಬೆಳಗಾವಿಗೆ ಬರಲು ಬಿಡುತ್ತಿರಲಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ನಾವೆನೂ ಡಿಕೆಶಿ ಅವರನ್ನ ಕಟ್ಟಿ ಹಾಕಬೇಕಾ..? ರಮೇಶ ಜಾರಕಿಹೋಳಿ ಪಕ್ಷ ಬೇರೆ ನಮ್ಮ ಪಕ್ಷ ಬೇರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನಲ್ಲಿ ಬೆಂಕಿ ಹತ್ತಿ ಧಗ ಧಗ ಉರಿಯುತ್ತಿದೆ. ಆ ಬಗ್ಗೆ ಹೆಚ್ಚೇನು ಮಾತಾಡುವುದಿಲ್ಲ,ನಾವು ಯಾವುದೇ ಪಕ್ಷ ವಿರೋಧಿ ಚರ್ಚೆ ಮಾಡುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.