
ಮೈಸೂರು: ಕೋರ್ಟ್ ಮುಂಭಾಗವೇ ದಾಂಧಲೆ ನಡೆಸಿ ವಕೀಲರು ಹಾಗೂ ಸಾರ್ವಜನಿಕರು ಹೊಡೆದಾಡಿಕೊಂಡಿರುವ ಘಟನೆ ಮೈಸೂರಿನ ಮಳಲವಾಡಿ ಬಳಿಯಿರುವ ನೂತನ ಕೋರ್ಟ್ ಬಳಿ ನಡೆದಿದೆ.ಕೋರ್ಟ್ ಮುಂಭಾಗ ವಕೀಲರು ಹಾಗೂ ಸಾರ್ವಜನಿಕರು ಹೊಡೆದಾಡಿಕೊಂಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ವಕೀಲನೊಬ್ಬ ಹಲ್ಲೆ ನಡೆಸಿದ್ದಾನೆ.ಮಹಿಳೆಯೊಬ್ಬರನ್ನು ವಕೀಲ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.






