ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಆಡಳಿತದಲ್ಲೇ ನಂಜನಗೂಡಿನ ಹುಚ್ಚಗಣಿ ದೇಗುಲವನ್ನ ನೆಲಸಮ ಮಾಡಲಾಗಿದೆ. ಹಿಂದೂ ಧರ್ಮದ ಭಾವನೆಗೆ ಖುದ್ದು ಬಿಜೆಪಿಯೇ ಧಕ್ಕೆ ತಂದಿದೆ ಎಂದು ಆರ್ಎಸ್ಎಸ್ ಮತ್ತು ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಸರ್ಕಾರದ ವಿರುದ್ಧದ ಸಂಘಪರಿವಾರದ ನಿಂತಿದ್ದು, ಈ ಕಿಡಿ ಸಿಎಂ ಮಗ್ಗಲನ್ನ ಸುಡಲಾರಂಭಿಸಿದೆ.
ನಂಜನಗೂಡು ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಮಾಡಲಾಗಿದೆ. ಸುಪ್ರೀಂ ಆದೇಶವಿದ್ರೂ ಈವರೆಗೆ ದೇವಸ್ಥಾನ ನೆಲಸಮ ಆಗಿರಲಿಲ್ಲ. ಆದರೆ, ಬಿಜೆಪಿ ಆಡಳಿತದಲ್ಲೇ ಇಂಥದ್ದೊಂದು ಕೆಲಸಕ್ಕೆ ಅಧಿಕಾರಶಾಹಿ ಕೈ ಹಾಕಿದೆ. ಇದು ಸಹಜವಾಗಿಯೇ ಹಿಂದೂಪರ ಸಂಘಟನೆಗಳ ಕೆರಳಿಸಿದೆ. ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮಕ್ಕೆ RSS ಬೇಸರಗೊಂಡಿದೆ.
ಹಿಂದುತ್ವ ಅಂದ್ರೆ ಆರ್ಎಸ್ಎಸ್, ಆರ್ಎಸ್ಎಸ್ ಅಂದ್ರೆ ಹಿಂದುತ್ವ. ಇದರ ನೆರಳಿನಲ್ಲಿರುವ ಬಿಜೆಪಿ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವುದಿಲ್ಲ. ತರಲೂಬಾರದು ಅನ್ನೋದು ಸಂಘದ ಆಶಯ. ಅದರಂತೆ ಬಿಜೆಪಿ ಕೂಡ ನಡೆದು ಬಂದಿದೆ, ಪರಿಪಾಲಿಸಿದೆ. ಆದಾರೀಗ, ರಾಜ್ಯದಲ್ಲಿ ಇದು ಸುಳ್ಳಾಯ್ತಾ? ಅನ್ನೋ ಪ್ರಶ್ನೆಯನ್ನ ಖುದ್ದು ಸಂಘವೇ ಎತ್ತುವಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಚರ್ಚ್-ಮಸೀದಿಗಳನ್ನು ಒಡೆಯಬಹುದು, ಅವುಗಳನ್ನು ದೇವಸ್ಥಾನದೊಂದಿಗೆ ಹೋಲಿಸಬೇಡಿ –ಪ್ರತಾಪ್ ಸಿಂಹ
ಬಿಜೆಪಿ ಆಡಳಿತದಲ್ಲೇ ದೇಗುಲ ನೆಲಸಮ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ನಂಜನಗೂಡಿನ ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಕಚ್ಚಿದೆ. ಮುಂಜಾನೆ ಅಬ್ಬರಿಸಿದ ಜೆಸಿಬಿಯ ಘರ್ಜನೆಗೆ ಪುರಾತನ ದೇಗುಲ ನೆಲಸಮವಾಗಿದೆ. ಬಿಜೆಪಿಯ ಆಡಳಿತದಲ್ಲೇ ಇಂತಹದ್ದೊಂದು ಘಟನೆ ನಡೆದಿರುವುದು ಆರ್ಎಸ್ಎಸ್ ಅನ್ನು ಕೆರಳಿ ಕೆಂಡವಾಗಿಸಿದೆ. ಸುಪ್ರೀಂಕೋರ್ಟ್ ಆದೇಶವಿದ್ರೂ ಈವರೆಗೆ ದೇವಸ್ಥಾನ ನೆಲಸಮ ಆಗಿರಲಿಲ್ಲ. ಆದ್ರೆ ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮಕ್ಕೆ RSS ಬೇಸರಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ನಂಜನಗೂಡು ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಮಾಡಿರುವುದಕ್ಕೆ ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ವಿರೋಧ ನಡುವೆಯೂ ದೇಗುಲ ನೆಲಸಮ ಮಾಡಲಾಗಿದೆ. ಇದ್ರಿಂದ ಸರ್ಕಾರದ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಕೇಳಿಬಂದಿದೆ. ಅದೂ ಕೂಡ ಬಿಜೆಪಿ ಸರ್ಕಾರವಿದ್ರೂ ದೇವಸ್ಥಾನ ನೆಲಸಮಕ್ಕೆ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದೆ.
ದೇಗುಲ ನೆಲಸಮದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: ನೂತನ ದೇವಸ್ಥಾನ ನಿರ್ಮಿಸುವಂತೆ ಸರ್ಕಾರಕ್ಕೆ ಒತ್ತಾಯ
ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಸಿಎಂ ಬೊಮ್ಮಾಯಿಯನ್ನು ಸಂಕಷ್ಟದ ಕಟಕಟೆಗೆ ತಂದು ನಿಲ್ಲಿಸಿದೆ. ದೇಗುಲ ನೆಲಸಮ ಎಷ್ಟರಮಟ್ಟಿಗೆ ಸರಿ ಎಂದಿರುವ ಸಂಘ, ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ಪ್ರಶ್ನೆಗಳ ಸುರಿಮಳೆಗೈದಿದೆ.
ಸುಪ್ರೀಂ ಆದೇಶವಿದ್ದರೂ ದೇಗುಲ ನೆಲಸಮಗೊಳಿಸಿರಲಿಲ್ಲ, ಈಗ್ಯಾಕೆ ಮಾಡಿದ್ರಿ? ಅಂತ ಆರ್ಎಸ್ಎಸ್ ಪ್ರಶ್ನಿಸಿದೆ. ಸುಪ್ರೀಂ ಆದೇಶ ನೀಡಿದ್ದರೆ ಹಗಲಿನ ವೇಳೆ ನೆಲಸಮ ಮಾಡಬಹುದಿತ್ತಲ್ವಾ? ಗ್ರಾಮಸ್ಥರ ವಿರೋಧಿ ನಡೆಯಿಂದ ಬೆಳಗಿನ ಜಾವ ನೆಲಸಮ ಅವಶ್ಯಕತೆ ಇತ್ತಾ? ಎಂದಿರುವ ಸಂಘ, ಪುರಾತನ ದೇವಾಲಯ ನೆಲಸಮಗೊಳಿಸಬಾರದು ಎಂಬ ನಿಯಮ ತಿಳಿದಿಲ್ವಾ? ಅಂತ ಸರ್ಕಾರದ ವಿರುದ್ಧ ಗರಂ ಆಗಿದೆ. ಅಲ್ಲದೆ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ನೆಲಸಮ ಮಾಡುವ ಅವಶ್ಯಕತೆ ಇತ್ತಾ? ಅಂತ ಸರ್ಕಾರದ ವಿರುದ್ಧ ಕಿಡಿಕಾರಿರುವ ಹಿಂದೂಪರ ಸಂಘಟನೆ, ಹಿಂದೂ ಧರ್ಮದ ಭಾವನೆಗೆ ಬಿಜೆಪಿಯೇ ಧಕ್ಕೆ ತರುವುದು ಎಷ್ಟರ ಮಟ್ಟಿಗೆ ಸರಿ? ಅಂತ ಪ್ರಶ್ನೆ ಮಾಡಿದೆ.
ಗ್ರಾಮಸ್ಥರ ವಿರೋಧದ ಹಿನ್ನೆಲೆ ದೇಗುಲ ನೆಲಸಮ ಮಾಡಿರಲಿಲ್ಲ. ಆದ್ರೆ ಬಿಜೆಪಿ ಆಡಳಿತದಲ್ಲಿ ದೇಗುಲವನ್ನು ನಿರ್ಮಾಮ ಮಾಡಲಾಗಿದೆ. ಇದು ಸಂಘದ ಅಸಮಾಧಾನಕ್ಕೆ ಕಾರಣವಾಗಿದ್ದು, ಸದ್ಯ ಸಿಎಂ ಈಗ ಇದನ್ನ ಹೇಗೆ ನಿಭಾಯಿಸ್ತಾರೆ? ಸಂಘದ ಪ್ರಶ್ನೆಗಳಿಗೆ ಏನಂತ ಉತ್ತರಿಸ್ತಾರೋ ಕಾದುನೋಡಬೇಕಿದೆ.