Tag: Basavaraj Bommai

ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗಲು ಮುಖ್ಯಮಂತ್ರಿಗಳ ಕರೆ

ಆಗಸ್ಟ್ 23ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ. ಶಾಲೆ ಆರಂಭಕ್ಕೆ ಎಲ್ಲ ರೀತಿಯ ...

Read moreDetails

ಕೋವಿಡ್-19 3ನೇ ಅಲೆ ಹಿನ್ನೆಲೆ ತೀವ್ರ ಕಟ್ಟೆಚರ ವಹಿಸಲು ಸೂಚನೆ.

ಕೋವಿಡ್ 19 ಮೂರನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಭಾಗಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಚಕ್ ಪೋಸ್ಟ್‌ಗಳಿಗೆ ನಿರಂತರ ಭೇಟಿ ನೀಡಿ ...

Read moreDetails

ಹಿಂದುಳಿದ ವರ್ಗಗಳ ಆಯೋಗದ ವರದಿ ಸ್ವೀಕಾರಕ್ಕೆ ಹಿಂದೇಟು ಏಕೆ : ಸಿದ್ದರಾಮಯ್ಯ

ಯಾವುದೋ ಒಂದು ಜಾತಿ ಅಥವಾ ಜನಾಂಗದ ಪರವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಲ್ಲ. ಹೀಗಿರುವಾಗ ವರದಿಯನ್ನು ಸ್ವೀಕರಿಸಲು ...

Read moreDetails

ಎನ್ಇಪಿ ಜಾರಿಗೊಳಿಸುವಾಗ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಅನುಷ್ಠಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ, ನೀತಿಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ...

Read moreDetails

ಅನವಶ್ಯಕ ವರ್ಗಾವಣೆ, ಭ್ರಷ್ಟಾಚಾರಕ್ಕೆ ಕಡಿವಾಣ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಂದ ಮಹತ್ತರ ನಿರ್ಧಾರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೌನ್ಸಿಲಿಂಗ್ ಕಡ್ಡಾಯಗೊಳಿಸುವುದರ ಮೂಲಕ ಕಟ್ಟುನಿಟ್ಟಿನ ಕ್ರಮಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ...

Read moreDetails

ಮುಗಿಯದ ಸಂಪುಟ ಸಮರ: ಸಿಎಂ ಬೊಮ್ಮಾಯಿ ಭೇಟಿಯಾಗಿ 29 ಪ್ರಮುಖ ಅಂಶಗಳನ್ನು ಮುಂದಿಟ್ಟ ರೆಬೆಲ್ ಶಾಸಕ ರಾಮದಾಸ್

ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಮಾಡಿದ್ದ ದಿನದಿಂದಲೂ ಇಂದಿನವರೆಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಲೇ ಇದೆ. ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು, ಎಂ.ಟಿ.ಬಿ ನಾಗರಾಜ್, ...

Read moreDetails

ಆಗಸ್ಟ್ 23 ರಿಂದ ಶಾಲೆ ಆರಂಭ: ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕಳೆದ ಒಂದೂವರೆ ವರ್ಷದಿಂದ ಕರೋನ ವೈರಸ್ ನಿಂದಾಗಿ ಶಿಕ್ಷಣ ವ್ಯವಸ್ಥೆಯೇ ಅತಂತ್ರವಾಗಿದೆ. ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡುತ್ತು ಕರೋನ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ...

Read moreDetails

ಪಶ್ಚಿಮ ಘಟ್ಟದಲ್ಲಿ ಡ್ಯಾಂ ನಿರ್ಮಿಸುವುದರಿಂದ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡಲಿದೆ

ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ 'ಸಮುದ್ರಕ್ಕೆ ಹರಿಯುವ ನೀರನ್ನು ಹಿಡಿದಿಡಲು' 1,400 ಚೆಕ್ ಡ್ಯಾಂಗಳನ್ನು ನಿರ್ಮಿಸುವುದು ಪರಿಸರಕ್ಕೆ ತೀವ್ರ ಹಾನಿಯನ್ನು ಉಂಟುಮಾಡಲಿದೆ ಎಂದು ಪರಿಸರವಾದಿಗಳು ಆತಂಕ ...

Read moreDetails

ಕರ್ನಾಟಕ ಕರೋನ ಲಸಿಕೆ ಸ್ಥಿತಿಗತಿ: ಇದುವರೆಗೂ 18-44 ವರ್ಷದವರಿಗೆ ಶೇ.3ರಷ್ಟು ಮಾತ್ರ ಲಸಿಕೆ ಪೂರ್ಣ!

ರಾಜ್ಯದಲ್ಲಿ ಇದುವರೆಗೆ 45 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಶೇ .33 ರಷ್ಟು ಮಾತ್ರ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದಿದ್ದಾರೆ. 18 ರಿಂದ 44 ...

Read moreDetails

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಣ ಹೆಚ್ಚಳಕ್ಕೆ ಬೊಮ್ಮಾಯಿ ಸರ್ಕಾರ ಆದೇಶ!

ಜುಲೈನಲ್ಲಿ ಪ್ರವಾಹದಿಂದಾಗಿ ಬಟ್ಟೆ ಮತ್ತು ವಸ್ತುಗಳನ್ನು ಕಳೆದುಕೊಂಡ ಕುಟುಂಬಗಳಿಗೆ 10,000 ರೂ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರವು ಆದೇಶಿಸಿದೆ. ಇದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್‌ಡಿಆರ್‌ಎಫ್) ...

Read moreDetails

14 ಹೊಸ ‘ಅಮೃತ್’ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ: ಇಲ್ಲಿದೆ ಸಂಪೂರ್ಣ ವಿವರ

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಭಾನುವಾರ 14 ಹೊಸ ಕಾರ್ಯಕ್ರಮಗಳನ್ನು ಘೋಷಿಸಿದರು, ಆಯ್ದ ...

Read moreDetails

ಕೋವಿಡ್ ನಿರ್ವಹಣಾ ತಂಡದ ಜೊತೆ ಸಿಎಂ ಬೊಮ್ಮಾಯಿ ಸಭೆ: ಶಾಲೆ ತೆರೆಯುವ ವಿಷಯದಲ್ಲಿ ಮಹತ್ವದ ನಿರ್ಧಾರ!

ಸಧ್ಯಕ್ಕೆ ಲಾಕ್ ಡೌನ್ ಅಥವಾ ಯಾವುದೇ ಹೊಸ ನಿಯಮಗಳ ಜಾರಿ ಬೇಡ, ಅಗತ್ಯ ಬಿದ್ದರೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸೋಣ ಎಂದು ಸಭೆಯ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ...

Read moreDetails

ಬೆಂಗಳೂರಿಗೆ 6000 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಸಿಎಂ ಬೊಮ್ಮಾಯಿ

ನಗರ ವ್ಯಾಪ್ತಿಯಲ್ಲಿ ಕೆಲಸಗಳನ್ನು ವೇಗಗೊಳಿಸಲು ಇನ್ಫ್ರಾ ವಾರ್ ರೂಮ್‌ನೊಂದಿಗೆ 15 ಗ್ರೇಡ್-ವಿಭಜಕಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಯೋಜನೆಗಳು ಮಂದಗತಿಯಲ್ಲಿ ಸಾಗುತಿರುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ಹೆಚ್ಚಿನ ...

Read moreDetails

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ...

Read moreDetails

ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಡದ ಬೊಮ್ಮಾಯಿ; ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತವರ ತಂಡದಿಂದ ಒತ್ತಡದಿಂದ ಕೊನೆಗೂ ಹೈಕಮಾಂಡ್ ಬಿ.ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತು. ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ...

Read moreDetails

ಸಿ ಟಿ ರವಿ ಕನ್ನಡ ವಿರೋಧಿ ಧೋರಣೆಗೆ ಹೊಸ ಸೇರ್ಪಡೆ ಮೇಕೆದಾಟು ಹೇಳಿಕೆ ವಿವಾದ!

ಕಳೆದ ವಾದ ಆಗಸ್ಟ್ 5ರಂದು ಮೇಕೆದಾಟು ಯೋಜನೆ ವಿರೋಧಿಸಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ಮಾಡಿದಾಗ, ಅವರ ...

Read moreDetails

ಶೀಘ್ರದಲ್ಲೇ ಮಂತ್ರಿಯಾಗುವ ವಿಶ್ವಾಸ ಇದೆ: ಶಾಸಕ ರೇಣುಕಾಚಾರ್ಯ

ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯರವರು, ಶೀಘ್ರದಲ್ಲೇ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗುವ ...

Read moreDetails

ಕಗ್ಗಂಟಾದ ಖಾತೆ ಕ್ಯಾತೆ: ತೆರೆಯದ ಆನಂದ್ ಸಿಂಗ್ ಕಚೇರಿ!

ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ಅಸಮಾಧಾನ ಶಮನ ಯತ್ನವಾಗಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ನಡೆಸಿದ ಯತ್ನಗಳು ವಿಫಲವಾಗಿದ್ದು, ಇದೀಗ ಖಾತೆ ಕ್ಯಾತೆ ಬಿಕ್ಕಟ್ಟು ದೆಹಲಿಯ ...

Read moreDetails

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವಿಗೆ ಸಿಟಿ.ರವಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡಿನ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿ ಬಿಜೆಪಿ ಪಕ್ಷದ ನಿಲುವಿನ ಬೆಂಬಲಕ್ಕೆ ನಿಂತಿರುವ ಸಿಟಿ ರವಿ ವಿರುದ್ದ ರಾಜ್ಯದ ಮಾಜಿ ಮುಂಖ್ಯಮಂತ್ರಿ, ವಿರೋಧ ...

Read moreDetails

ಸಿಎಂ ಆಗಿ 15 ದಿನ ಕಳೆದರೂ ಸಿಎಂ ಬೊಮ್ಮಾಯಿಗಿಲ್ಲ ಅಧಿಕೃತ ಸರ್ಕಾರಿ ಬಂಗಲೆ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ ಟಿ ನಗರದಲ್ಲಿರುವ ತಮ್ಮ ಸ್ವಂತ ಮನೆಯಿಂದಲೇ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಇನ್ನೂ ಕೂಡ ಬೆಂಗಳೂರಿನಲ್ಲಿ ಅಧಿಕೃತ ನಿವಾಸವನ್ನು ನೀಡಲಾಗಿಲ್ಲ. ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಗೃಹ ಕಚೇರಿಯಾಗಿ ಬಳಸುತ್ತಿದ್ದ ಕೃಷ್ಣಾ ಬಂಗಲೆಯಲ್ಲೇ ಈಗಲೂ ವಾಸ್ತವ್ಯ ಮುಂದುವರಿಸಿದ್ದಾರೆ. ಅಲ್ಲೇ ಇರುವುದಾಗಿಯೂ ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ತಮ್ಮ ಖಾಸಗಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಬೊಮ್ಮಾಯಿ ಅವರು ಬೆಳಗಿನ ಹೊತ್ತು ಗಾಲ್ಫ್ ಕೋರ್ಸ್ ಎದುರಿಗಿರುವ ಸರ್ಕಾರಿ ಗೆಸ್ಟ್ ಹೌಸ್ ಕುಮಾರಕೃಪಾದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ.ವಿಧಾನಸೌಧದ ಸಮೀಪದಲ್ಲಿ ಬ್ರಿಟಿಷರ ಕಾಲದಲ್ಲಿ ಹಲವು ಬಂಗಲೆಗಳನ್ನ ಜನಪ್ರತಿನಿಧಿಗಳಾಗಿ ನಿರ್ಮಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಕಾರ್ಯನಿರ್ವಹಣೆಗೆ ಪೂರಕವಾಗಿರುವ ವಿಶಾಲವಾದ ಬಂಗಲೆಗಳೆಂದರೆ ಅದು ಕಾವೇರಿ ಮತ್ತು ಅನುಗ್ರಹ. ಇನ್ನುಳಿದವು ಸ್ವಲ್ಪ ಚಿಕ್ಕ ಬಂಗಲೆಗಳಾಗಿವೆ. ಸದ್ಯ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಅವರು ವಾಸವಾಗಿದ್ದರೆ. ಅದರ ಪಕದಲ್ಲೇ ಇರುವ ಅನುಗ್ರಹದಲ್ಲಿ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿದ್ದಾರೆ. ಹಿಂದೆ ಇದೇ ಅನುಗ್ರಹ ನಿವಾಸದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ವಾಸವಿದ್ದರು. ಸಿದ್ದರಾಮಯ್ಯ ಅವರು ಕೃಷ್ಣಾ ಬಂಗಲೆಯನ್ನ ತಮ್ಮ ಗೃಹ ಕಚೇರಿಯಾಗಿ ಮಾಡಿಕೊಂಡಿದ್ದರು. ಬಳಿಕ ಯಡಿಯೂರಪ್ಪ ಅವರು ಇದೇ ಬಂಗಲೆಯಲ್ಲಿ ವಾಸವಿದ್ದಾರೆ. ಈಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ರಾಜಕೀಯ ಗುರು ಯಡಿಯೂರಪ್ಪ ಅವರನ್ನ ಬಂಗಲೆ ಖಾಲಿ ಮಾಡುವಂತೆ ಹೇಳುವ ಸ್ಥಿತಿಯಲ್ಲಂತೂ ಇಲ್ಲ. ಹೀಗಾಗಿ, ಸೂಕ್ತ ಸರ್ಕಾರಿ ಬಂಗಲೆ ಇಲ್ಲದ ಕಾರಣ ಆರ್ ಟಿ ನಗರದಲ್ಲಿರುವ ತಮ್ಮ ಸ್ವಂತ ಮನೆಯಿಂದಲೇ ಅವರು ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸಿಎಂ ಕಚೇರಿಯ ಉನ್ನತ ಮೂಲಗಳ ಪ್ರಕಾರ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಪಕ್ಕದಲ್ಲಿರುವ ರೇಸ್ ವ್ಯೂ ಕಾಟೇಜ್ ಹೆಸರಿನ ಬಂಗಲೆಗೆ ಸಿಎಂ ಬೊಮ್ಮಾಯಿ ವರ್ಗವಾಗುವ ಸಾಧ್ಯತೆ ಇದೆ. ಆದರೆ, ಕಾವೇರಿ ಬಂಗಲೆಗೆ ಹೋಲಿಸಿದರೆ ರೇಸ್ ವ್ಯೂ ಕಾಟೇಜ್ ಬಂಗಲೆ ಬಹಳ ಚಿಕ್ಕದು. ಇಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಿ ಕರ್ತವ್ಯ ನಿಭಾಯಿಸುವುದು ಕಷ್ಟಕರವಾಗಬಹುದು ಎಂಬ ಅಭಿಪ್ರಾಯವಿದೆ. ಒಟ್ಟಾರೆ ಈ ರೀತಿಯ ಪರಿಸ್ಥಿತಿಗೆ ಕೆಲ ಕಾರಣಗಳೂ ಇವೆ. ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ವಾಸ್ತುವನ್ನು ಬಹಳ ನಂಬುತ್ತಾರೆ. ನಂಬಿದ್ದಾರೆ ಕೂಡ. ಹಾಗೆಯೇ ಬೊಮ್ಮಾಯಿ ಕೂಡ ವಾಸ್ತುಗಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡವರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.“ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರು ವಾಸ್ತು, ಜ್ಯೋತಿಷ್ಯವನ್ನು ನಂಬುವುದೇ ಈಗಿನ ಪರಿಸ್ಥಿತಿಗೆ ಕಾರಣ. ಸರ್ಕಾರಿ ಅಧಿಕಾರಿಗಳು ಕೆಲ ದೊಡ್ಡ ಬಂಗಲೆಗಳನ್ನ ಮನಬಂದಂತೆ ಆಫೀಸ್ ಹಾಗೂ ಗೆಸ್ಟ್ ಹೌಸ್ ಆಗಿ ಮಾಡಿದ್ದಾರೆ. ಈಗಲಾದರೂ ಕಾವೇರಿ ಬಂಗಲೆಯನ್ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂದು ಘೋಷಿಸಬೇಕು” ಎಂದು ಸಿಎಂ ಕಚೇರಿಯಲ್ಲಿರುವ ಅಧಿಕಾರಿಯೊಬ್ಬರು ʻಪ್ರತಿಧ್ವನಿʼ ಪ್ರತಿನಿಧಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 1956ರಲ್ಲಿ ಕರ್ನಾಟಕ ರಾಜ್ಯದ ರಚನೆಯಾದಾಗ ಮೊದಲಿಗೆ ಸಿಎಂ ಆಗಿದ್ದ ಎಸ್ ನಿಜಲಿಂಗಪ್ಪ ಅವರು ಪ್ಯಾಲೇಸ್ ರಸ್ತೆಯಲ್ಲಿರುವ ಕಾರ್ಲಟನ್ ಹೌಸ್ ಬಂಗಲೆಯಲ್ಲಿ ಉಳಿದುಕೊಂಡಿದ್ದರು. ಎರಡು ವರ್ಷಗಳ ನಂತರ ಸಿಎಂ ಆದ ಬಿ ಡಿ ಜತ್ತಿ ಅವರು ಸ್ಯಾಂಕಿ ಟ್ಯಾಂಕಿ ರಸ್ತೆಯಲ್ಲಿರುವ ಬಾಲಬ್ರೂಯಿ ಬಂಗಲೆ ಸೇರಿಕೊಂಡರು. ನಂತರ ಸಿಎಂ ಆಗಿ ಬಂದ ಎಸ್ ಆರ್ ಕಾಂತಿ ಅವರು ಕ್ರೆಸೆಂಟ್ ರಸ್ತೆಯಲ್ಲಿರುವ ಕ್ರೆಸೆಂಟ್ ಬಂಗಲೆಯಲ್ಲಿದ್ದರು. ಕ್ರೆಸೆಂಟ್ ಹೌಸ್ ಇದೀಗ ಕರ್ನಾಟಕ ಜುಡಿಷಿಯಲ್ ಅಕಾಡೆಮಿಯಾಗಿ ಬದಲಾಗಿದೆ.ಎಸ್ ನಿಜಲಿಂಗಪ್ಪ ಅವರು ಕಾರ್ಲಟನ್ ಹೌಸ್ ಜೊತೆಗೆ ಈಗ ಕೆಪಿಎಸ್ಸಿ ಮುಖ್ಯ ಕಚೇರಿಯಾಗಿ ಮಾರ್ಪಟ್ಟಿರುವ ಪಾರ್ಕ್ ಹೌಸ್ ಬಂಗಲೆಯಲ್ಲೂ ವಾಸವಿದ್ದರು. ಕಾರ್ಲಟನ್ ಹೌಸ್ ಇದೀಗ ಸಿಐಡಿಯ ಮುಖ್ಯಕಚೇರಿಯಾಗಿದೆ. ಇನ್ನು, ದೇವರಾಜ್ ಅರಸ್ ಅವರು ಜತ್ತಿ ವಾಸವಿದ್ದ ಬಾಲಬ್ರೂಯಿಯನ್ನು ತಮ್ಮ ನಿವಾಸವಾಗಿ ಮಾಡಿಕೊಂಡರು.ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ತಮ್ಮ ಸ್ವಂತ ಮನೆಯಾದ ಕೃತಿಕಾದಲ್ಲೇ ಕರ್ತವ್ಯ ನಿಭಾಯಿಸಿದ್ದರು. ಹೆಚ್ ಡಿ ದೇವೇಗೌಡ ಅವರು ಅನುಗ್ರಹ ಬಂಗಲೆಯಲ್ಲಿದ್ದರೆ, ಜೆ ಎಚ್ ಪಟೇಲ್ ಅವರು ಕಾವೇರಿ ಬಂಗಲೆಯಲ್ಲಿ ವಾಸವಿದ್ದರು. ಎಸ್ ಎಂ ಕೃಷ್ಣ ಅವರು ವಾಸ್ತು ಕಾರಣಕ್ಕೆ ಕಾವೇರಿ ಬದಲು ಅನುಗ್ರಹ ಬಂಗಲೆ ಆಯ್ದುಕೊಂಡರು. ಮೈತ್ರಿ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಆದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿರುವ ಕಾಟೇಜ್ವೊಂದರಿಂದಲೇ ಕೆಲಸ ಮಾಡಿದ್ದರು.

Read moreDetails
Page 18 of 20 1 17 18 19 20

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!