• Home
  • About Us
  • ಕರ್ನಾಟಕ
Saturday, January 17, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

ಸಮಾಜದಲ್ಲಿ ಬದಲಾವಣೆ ಬೇಕಾದರೆ ಸರಿಯಾದ ಜನಪ್ರತಿನಿಧಿ ಆಯ್ಕೆ ಮಾಡಿ

ಪ್ರತಿಧ್ವನಿ by ಪ್ರತಿಧ್ವನಿ
December 23, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ADVERTISEMENT

ಸಮಾಜದಲ್ಲಿ ಬದಲಾವಣೆ ಬೇಕಾದರೆ ಮೊದಲು ಸರಿಯಾದ ಜನಪ್ರತಿನಧಿಯನ್ನು ಆಯ್ಕೆ ಮಾಡಬೇಕು. ಈ ಆಯ್ಕೆ ಮಾಡುವುದು ಸವಾಲಿನ ಕೆಲಸ. ಇದು ಜವಾಬ್ದಾರಿಯುತವಾದ ಕೆಲಸ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು.  ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಸಂಜೀವಿನಿ ಜೀವ ರಕ್ಷಕ್‌ ಟ್ರಸ್ಟ್‌ ವತಿಯಿಂದ ನೀಡಲಾದ ೨೦೨೫ ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಈ ದೇಶ ಜನರದ್ದು, ಯಾವುದೇ ಪಕ್ಷಕ್ಕೆ ಸೇರಿಲ್ಲ. ದೇಶದ ಭವಿಷ್ಯ ಯುವಜನರ ಹೆಗಲ ಮೇಲಿದೆ. ಆದ್ದರಿಂದ ನಾವು ಉತ್ತಮ ವಿಚಾರಗಳ ಬಗ್ಗೆ ಮಾತನಾಡಬೇಕು, ಕಾರ್ಯಕ್ರಮಗಳ ಬಗ್ಗೆ ಮಾತನಾಡಬೇಕು. ದೇವರು ಹಾಗೂ ಜಾತಿಗಳ ಬಗ್ಗೆ ಮಾತನಾಡುವುದು ಬಿಡಬೇಕು. ಈ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ಬೇರೆ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಯುವಜನರು ಕಳೆದು ಹೋಗಬಾರದು ಎಂದು ಹೇಳಿದರು.

ರಾಜಕೀಯವನ್ನು ಹತ್ತಿರದಿಂದ ವಿಮರ್ಶೆ ಮಾಡಿದರೆ ಹಾಗೂ ತಿಳಿದರೆ ಸಮಾಜ ಬದಲಾಗಲಿದೆ. ರಾಜಕಾರಣಿ ಭ್ರಷ್ಟಾಚಾರ ಮುಕ್ತನಾಗಿರಬೇಕು ಎಂದು ನಾವು ಬಯಸುತ್ತೇವೆ. ಇದೇ ವೇಳೆ ಅವರಿಗೆ ಮತ ನೀಡುವವರೂ ಭ್ರಷ್ಟರಾಗಿರಬಾರದು ಎಂದರು. ಪ್ರೀತಿ ವಿಶ್ವಾಸಕ್ಕೆ ಬಂದು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಸ್ವಾಮೀಜಿಗಳ ಸನ್ನಿಧಾನದಲ್ಲಿ ಪ್ರಶಸ್ತಿ ಸಿಕ್ಕದ್ದು ಖುಷಿಯಾಗಿದೆ ಎಂದ ಸಚಿವರು ತಾವು ಈ ಹಿಂದೆ ಕೇದಾರಾನಾಥದಲ್ಲಿ ಮೇಘಸ್ಫೋಟ ಸಂಭವಿಸಿದಾಗ ಹೋಗಿ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ಮಾಡಿದ್ದನ್ನು ಸ್ಮರಿಸಿಕೊಂಡರು.

ಸಿರಿಗೆರೆ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಸಂತೋಷ್‌ ಲಾಡ್‌ ಅವರು ತಮ್ಮ ಸಾಧನೆಯನ್ನು ಮಾತಾಗಿ ಪರಿವರ್ತನೆ ಮಾಡಿದವರು. ಸದಾ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು. ಆದರೂ ಅವರಲ್ಲಿ ಅಹಂಕಾರ ಇಲ್ಲ ಎಂದರು.

ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ಪುಲ್ವಾಮಾ ದಾಳಿ ಆದಾಗ ಸರ್ಕಾರದ ಹಣಕ್ಕೆ ಕಾಯದೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಜನರನ್ನು ಸಂತೋಷ್‌ ಲಾಡ್‌ ಅವರು ಜನರನ್ನು ತಾಯಿನಾಡಿಗೆ ಕರೆ ತಂದರು. ಲಾಡ್‌ ಅವರು ಸಮಾಜಸೇವೆಯ ವಿಭಿನ್ನ ಆಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌ ವಿಚಾರಧಾರೆಗಳನ್ನು ರೂಢಿಸಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದರು.

ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅವರು ಮಾತನಾಡಿ, ಸಂತೋಷ್‌ ಲಾಡ್‌ ಅವರು ಈ ಜೀವರಕ್ಷಕ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ದುರಂತ ನಡೆದರೆ ಸಿದ್ದರಾಮಯ್ಯ ಅವರಿಗೆ ಮೊದಲಿಗೆ ನೆನಪಾಗುವ ಹೆಸರು ಸಂತೋಷ್‌ ಲಾಡ್‌ ಅವರು. ಕಾರ್ಮಿಕ ಇಲಾಖೆ ಬಗ್ಗೆ ವಿಶೇಷ ಗೌರವ ಮತ್ತು ಕಾಳಜಿ ಇಟ್ಟುಕೊಂಡಿದ್ದಾರೆ. ಲಾಡ್‌ ಅವರು ಕಾರ್ಮಿಕ ಸಚಿವರಾದ ನಂತರ ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಇದೆ ಎಂದು ತಿಳಿಯುವಂತಾಗಿದೆ ಎಂದು ಸಚಿವ ಲಾಡ್‌ ಅವರ ಕಾರ್ಯವೈಖರಿಯನ್ನು ಬಣ್ಣಿಸಿದರು.

ರಾಜ್ಯದ ಮೂರು ಕೋಟಿ ಕಾರ್ಮಿಕರ ಜೀವ ರಕ್ಷಕರಾಗಿ ಸಂತೋಷ್‌ ಲಾಡ್‌ ಅವರು ಕೆಲಸ ಮಾಡುತ್ತಾ ಇದ್ದಾರೆ. ಸಚಿವರಾದ ನಂತರ ಋತುಚಕ್ರ ರಜೆ, ಗಿಗ್‌ ಹಾಗೂ ಪತ್ರಿಕಾ ವಿತರಕರಿಗೆ ಜೀವವಿಮೆ ಕಾಯಿದೆ ಜಾರಿ ಮಾಡಿದರು. ದುಡ್ಡು ಮಾಡಲು ಲಾಡ್‌ ಅವರು ರಾಜಕೀಯಕ್ಕೆ ಬಂದಿಲ್ಲ. ರಾಜಕೀಯವನ್ನು ಸೇವಾಕ್ಷೇತ್ರ ಎಂದು ಪರಿಗಣಿಸಿದವರು ಎಂದರು.

ಸಮಾರಂಭದಲ್ಲಿ ಸಂಜೀವಿನ ಜೀವ ರಕ್ಷಕ್‌ ಟ್ರಸ್ಟ್‌ ಸಂಸ್ಥಾಪಕರಾದ ರಂಗಸ್ವಾಮಿ ಡಿ, ಸಂಜೀವಿನ ಜೀವ ರಕ್ಷಕ್‌ ಟ್ರಸ್ಟ್‌ ಸಂಸ್ಥಾಪಕ ಕಾರ್ಯದರ್ಶಿ ಸೌಮ್ಯಾ ಮಂಜುನಾಥ ಸ್ವಾಮಿ, ಮಂಜುನಾಥ ಬಿ, ಭರತ್‌ ಎಂ.ಮುಬಾರಕ್‌ ಅಲಿ ಹಾಗೂ ಅಪಾರ ಸಂಖ್ಯೆಯ ಚಿತ್ರದುರ್ಗದ ನಾಗರಿಕರು ಉಪಸ್ಥಿತರಿದ್ದರು.

Tags: congress mla santhosh ladlabor minister santhosh ladMinister Santhosh Ladmla santosh ladsanthosh ladsanthosh lad about modisanthosh lad about pm modisanthosh lad lashes out at pm modisanthosh lad lashes out at r ashoksanthosh lad latest newssanthosh lad newssanthosh lad news todaysanthosh lad questioned modisanthosh lad speechsanthosh lad today newssanthosh lad vs narendra modisantos ladSantosh Ladsantosh lad jdssantosh lad mlasantosh lad winsantosh s lad
Previous Post

ಹೊಸಕೋಟೆಗೆ ಬಿರಿಯಾನಿ ತಿನ್ನಲು ಹೋದವರ ಸುಲಿಗೆ..

Next Post

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

Related Posts

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ
Top Story

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
0

ಬೆಂಗಳೂರಿನಲ್ಲಿ ಅನೇಕ ಭಾಷೆ, ಧರ್ಮಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಕೈಗಾರಿಕೆ ವಲಯ ಮತ್ತು ವಿವಿಧ...

Read moreDetails
ಮುಂಬೈ ಪಾಲಿಕೆಯಲ್ಲಿ ಬಿಜೆಪಿಯ ಗೆಲುವು ವೋಟ್ ಚೋರಿಯ ಮತ್ತೊಂದು ಸಂಕಷ್ಟಕರ ಅಧ್ಯಾಯ : ಸಿದ್ದರಾಮಯ್ಯ ಕಳವಳ

ಮುಂಬೈ ಪಾಲಿಕೆಯಲ್ಲಿ ಬಿಜೆಪಿಯ ಗೆಲುವು ವೋಟ್ ಚೋರಿಯ ಮತ್ತೊಂದು ಸಂಕಷ್ಟಕರ ಅಧ್ಯಾಯ : ಸಿದ್ದರಾಮಯ್ಯ ಕಳವಳ

January 16, 2026
ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

January 16, 2026
ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

January 16, 2026
ಸಿಎಂ ಸ್ಥಾನ ನನ್ನ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಿನ ವಿಚಾರ-ಡಿ.ಕೆ ಶಿವಕುಮಾರ್

ಸಿಎಂ ಸ್ಥಾನ ನನ್ನ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಿನ ವಿಚಾರ-ಡಿ.ಕೆ ಶಿವಕುಮಾರ್

January 16, 2026
Next Post

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

Recent News

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ
Top Story

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ಕನ್ನಡಿಗರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK
Top Story

ನನಗೆ ಜನರ ಸೇವೆ ಮಾಡುವ ಚಪಲ, ಕೆಲವರಿಗೆ ಜನರ ದುಡ್ಡು ಲೂಟಿ ಮಾಡೋ ಚಪಲ: HDK

by ಪ್ರತಿಧ್ವನಿ
January 16, 2026
ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ
Top Story

ಕೆ.ಎನ್‌ ರಾಜಣ್ಣ ಮನೆಯಲ್ಲಿ ಭರ್ಜರಿ ನಾಟಿ ಕೋಳಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 16, 2026
ಸಿಎಂ ಸ್ಥಾನ ನನ್ನ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಿನ ವಿಚಾರ-ಡಿ.ಕೆ ಶಿವಕುಮಾರ್
Top Story

ಸಿಎಂ ಸ್ಥಾನ ನನ್ನ, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ನಡುವಿನ ವಿಚಾರ-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 16, 2026
BMC Election 2026: ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ಗೆ ಪ್ರಚಂಡ ಗೆಲುವು
Top Story

BMC Election 2026: ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್‌ಗೆ ಪ್ರಚಂಡ ಗೆಲುವು

by ಪ್ರತಿಧ್ವನಿ
January 16, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜಾರ್ಜ್ ಭೇಟಿಯಾದ ರಾಹುಲ್ ಗಾಂಧಿ: ಡಿಕೆಶಿಗೆ ಯಾಕೆ ಸಿಗಲಿಲ್ಲ..?

ಜಾರ್ಜ್ ಭೇಟಿಯಾದ ರಾಹುಲ್ ಗಾಂಧಿ: ಡಿಕೆಶಿಗೆ ಯಾಕೆ ಸಿಗಲಿಲ್ಲ..?

January 16, 2026
ಮುಂಬೈನಲ್ಲಿ ಬಿಜೆಪಿ ಪಾರುಪತ್ಯ: ಮತದಾರರಿಗೆ ಮೋದಿ ಧನ್ಯವಾದ..

ಮುಂಬೈನಲ್ಲಿ ಬಿಜೆಪಿ ಪಾರುಪತ್ಯ: ಮತದಾರರಿಗೆ ಮೋದಿ ಧನ್ಯವಾದ..

January 16, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!