• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಗ್ಗಂಟಾದ ಖಾತೆ ಕ್ಯಾತೆ: ತೆರೆಯದ ಆನಂದ್ ಸಿಂಗ್ ಕಚೇರಿ!

Shivakumar by Shivakumar
August 13, 2021
in ಕರ್ನಾಟಕ, ರಾಜಕೀಯ
0
ಕಗ್ಗಂಟಾದ ಖಾತೆ ಕ್ಯಾತೆ: ತೆರೆಯದ ಆನಂದ್ ಸಿಂಗ್ ಕಚೇರಿ!
Share on WhatsAppShare on FacebookShare on Telegram

ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ಅಸಮಾಧಾನ ಶಮನ ಯತ್ನವಾಗಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ನಡೆಸಿದ ಯತ್ನಗಳು ವಿಫಲವಾಗಿದ್ದು, ಇದೀಗ ಖಾತೆ ಕ್ಯಾತೆ ಬಿಕ್ಕಟ್ಟು ದೆಹಲಿಯ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ಸ್ಥಳಾಂತರಗೊಂಡಿದೆ.

ADVERTISEMENT

ಅಯಕಟ್ಟಿನ ಖಾತೆ ಮೇಲೆ ಕಣ್ಣಿಟ್ಟಿದ್ದ ಆನಂದ್ ಸಿಂಗ್, ತಮ್ಮ ನಿರೀಕ್ಷೆಯ ಆ ಖಾತೆ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಆ ಅಸಮಾಧಾನದ ಹಿನ್ನೆಲೆಯಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಅದಕ್ಕಾಗಿ ಸ್ಪೀಕರ್ ಕಚೇರಿಯನ್ನೂ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಹರಿದಾಡಿತ್ತು.

ಆ ಹಿನ್ನೆಲೆಯಲ್ಲಿ ಗುರುವಾರ ಆನಂದ್ ಸಿಂಗ್ ಜೊತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನ ಸಭೆ ನಡೆಸಿದ್ದರು. ಆದರೆ, ಆ ಸಂಧಾನ ಕೂಡ ಸಿಂಗ್ ಮುನಿಸು ಶಮನಗೊಳಿಸಲು ಯಶಸ್ವಿಯಾಗಿಲ್ಲ. ಹಾಗಾಗಿ ಅವರು ತಮ್ಮ ಅಹವಾಲು ಸಲ್ಲಿಸಲು ಮತ್ತೊಮ್ಮೆ ದೆಹಲಿಗೆ ಪ್ರಯಾಣಬೆಳೆಸಲಿದ್ದಾರೆ. ನೇರವಾಗಿ ಹೈಕಮಾಂಡ್ ಮುಂದೆಯೇ ತಮ್ಮ ಅಪೇಕ್ಷೆಯ ಖಾತೆ ಬಗ್ಗೆ ಕೇಳಲಿದ್ದು, ತಮ್ಮ ಆ ಬೇಡಿಕೆ ಈಡೇರದೇ ಇದ್ದಲ್ಲಿ ತಾವು ಸಚಿವ ಸ್ಥಾನವಷ್ಟೇ ಅಲ್ಲದೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೊಸಪೇಟೆಯ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಅಧಿಕೃತ ಕಚೇರಿಯ ಬೋರ್ಡನ್ನು ಕೂಡ ಕಳೆದ ವಾರ ತೆರವುಗೊಳಿಸಿ, ಕಚೇರಿ ಬಂದ್ ಮಾಡಲಾಗಿತ್ತು. ಗುರುವಾರದ ಸಿಎಂ ಮತ್ತು ಮಾಜಿ ಸಿಎಂ ಸಂಧಾನ ಸಭೆಯ ಬಳಿಕ ಆ ಕಚೇರಿ ಪುನರಾರಂಭದ ನಿರೀಕ್ಷೆಗಳಿದ್ದವು. ಆದರೆ, ಶುಕ್ರವಾರ ಅಂತಹ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಆನಂದ ಸಿಂಗ್ ಅಸಮಾಧಾನ ಶಮನಗೊಂಡಿಲ್ಲ ಎಂಬುದಕ್ಕೆ ಪೂರಕವಾಗಿ ಅವರ ಕಾರ್ಯಾಲಯ ಶುಕ್ರವಾರವೂ ಪುನಾರಂಭ ಆಗಿಲ್ಲ. ಜತೆಗೆ ಕಚೇರಿಗೆ ಜನರ ಭೇಟಿಗೂ ಅವಕಾಶ ನೀಡಲಾಗಿಲ್ಲ. ಕಚೇರಿಯ ಸಿಬ್ಬಂದಿಯೂ ಕಚೇರಿಗೆ ಆಗಮಿಸುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.


ಬಹುಶಃ ಆ.15ರವರೆಗೆ ಇದೇ ಸ್ಥಿತಿ ಮುಂದುವರಿಯಲಿದ್ದು, ಹೊಸಪೇಟೆಯಲ್ಲಿ ಆ.15ರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸಚಿವ ಸಿಂಗ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ. ಆ ನಿಟ್ಟಿನಲ್ಲಿ ಅವರು ಈಗಾಗಲೇ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಅವರ ಅಪ್ತ ಮೂಲಗಳು ತಿಳಿಸಿವೆ.

ಹಾಗಾಗಿ, ಸಿಎಂ, ಮಾಜಿ ಸಿಎಂ ಮತ್ತು ಸಚಿವ ಆರ್ ಅಶೋಕ್ ಗುರುವಾರ ಸಂಜೆ ಎಲ್ಲವೂ ಸುಖಾಂತ್ಯಗೊಂಡಿದೆ ಎಂಬಂತೆ ಸಂದೇಶ ಕೊಡುವ ಯತ್ನ ನಡೆಸಿದ್ದರೂ ವಾಸ್ತವವಾಗಿ ಪರಿಸ್ಥಿತಿ ಬದಲಾಗಿಲ್ಲ. ಖಾತೆ ಬದಲಾವಣೆಯ ಸಿಂಗ್ ಪಟ್ಟು ಸಡಿಲಿಸಿಲ್ಲ. ಹಾಗಾಗಿ ಬಿಕ್ಕಟ್ಟು ಕಗ್ಗಂಟಾಗಿದ್ದು, ಇದೀಗ ಹೈಕಮಾಂಡ್ ಅಂಗಳಕ್ಕೆ ಜಿಗಿದಿದೆ.

Tags: Basavaraj BommaiBJPಆನಂದ್ ಸಿಂಗ್ಆರ್‌ ಅಶೋಕ್‌ಬಿ ಎಸ್ ಯಡಿಯೂರಪ್ಪಬಿಜೆಪಿಹೊಸಪೇಟೆ
Previous Post

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಬಿಜೆಪಿ ನಿಲುವಿಗೆ ಸಿಟಿ.ರವಿ ಬೆಂಬಲ: ಸಿದ್ದರಾಮಯ್ಯ ಆಕ್ರೋಶ

Next Post

ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು – ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್

Related Posts

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

by ಪ್ರತಿಧ್ವನಿ
August 13, 2026
0

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ...

Read moreDetails
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
Next Post
ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು – ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್

ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು - ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada