ಭಾರತದ ಅತಿ ಉದ್ದದ ಸ್ಕೈ ವಾಕ್ ಗಾಜಿನ ಸೇತುವೆಯನ್ನು ಕೇರಳ ವಾಗಮೋನ್ ಪ್ರವಾಸಿ ಕೇಂದ್ರದಲ್ಲಿ ಬುಧವಾರ (ಸೆಪ್ಟೆಂಬರ್ 6) ಉದ್ಘಾಟನೆಗೊಂಡಿದೆ.
ರಾಜ್ಯದ ಪ್ರವಾಸದೋದ್ಯಮ ಸಚಿವ ಮೊಹಮ್ಮದ್ ರಿಯಾಜ್ ಔಪಚಾರಿಕವಾಗಿ ಸ್ಕೈ ವಾಕ್ ಗಾಜಿನ ಸೇತುವೆಯನ್ನು ಉದ್ಘಾಸಿದರು.
ಕೇರಳ ವಾಗಮೋನ್‌ನಲ್ಲಿರುವ ಗಾಜಿನ ಸೇತುವೆ ಸಮುದ್ರ ಮಟ್ಟದಿಂದ 3,500 ಅಡಿ ಎತ್ತರವಿದೆ. ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮವನ್ನು ಉತ್ತಮಪಡಿಸುವ ಭಾಗವಾಗಿ ಜಿಲ್ಲಾ ಪ್ರವಾಸೋದ್ಯಮ ಸಚಿವಾಲಯವು ಖಾಸಗಿ ಸಹಭಾಗಿತ್ವದಲ್ಲಿ ಸ್ಕೈ ವಾಕ್ ಗಾಜಿನ ಸೇತುವೆಯನ್ನು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ.
ಕೇರಳ ರಾಜ್ಯದಲ್ಲಿ ನಿರ್ಮಾಣವಾಗಿರುವ ಈ ಸ್ಕೈ ವಾಕ್ ಗಾಜಿನ ಸೇತುವೆಯಲ್ಲಿ ಒಂದು ಬಾರಿ ಪ್ರವೇಶಕ್ಕೆ ಒಬ್ಬ ವ್ಯಕ್ತಿಗೆ 500 ರೂ. ನಿಗದಿಪಡಿಸಲಾಗಿದೆ. ಆ ವ್ಯಕ್ತಿ 10 ನಿಮಿಷಗಳ ಕಾಲ ಸೇತುವೆಯಲ್ಲಿ ವಿಹರಿಸಬಹುದು.
ಅಲ್ಲದೆ ಗಾಜಿನ ಸೇತುವೆಯಲ್ಲಿ ಸ್ಕೈ ಸ್ವಿಂಗ್ ಮತ್ತು ಸ್ಕೈ ಸೈಕ್ಲಿಂಗ್‌ನಂತಹ ಚಟುವಟಿಕೆಗಳೂ ಸಹ ಲಭ್ಯವಿದೆ.