ಗುಜರಾತ್ ಮೂಲಕ ಪಾಪುಲರ್ ಪೋಲ್ ಸಂಸ್ಥೆ ಕಳೆದ ನವೆಂಬರ್ನಿಂದ ಆರಂಭಿಸಿ ಜನವರಿ 30ರ ತನಕ ನಡೆಸಿರುವ ಸರ್ವೇ ವರದಿ ಬಹಿರಂಗ ಆಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಮುಂದಿನ ಸಿಎಂ ಅಭ್ಯರ್ಥಿ ಆಗಿ ಅಧಿಕಾರ ಹಿಡಿಯುವ ಬಗ್ಗೆ ವರದಿಗಳು ಉಲ್ಲೇಖಿಸಿವೆ. ಕಾಂಗ್ರೆಸ್ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೆಸರು ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಷಿ, ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಜೆಡಿಎಸ್’ನಿಂದ ಕುಮಾರಸ್ವಾಮಿ ಹೆಸರನ್ನು ಜನರೇ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿಯೇ ಬೆಸ್ಟ್..!
ಸಿಎಂ ಅಭ್ಯರ್ಥಿಗಳಾಗಿ ಜನರ ಮತಗಳು ಈ ರೀತಿ ವಿಂಗಡಣೆ ಆಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿಗೆ ಶೇಕಡ 24 ರಷ್ಟು ಮತಗಳು, ಮಾಜಿ ಸಿಎಂ ಸಿದ್ದರಾಮಯ್ಯಗೆ ಶೇಕಡ 18ರಷ್ಟು ಮತಗಳು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೇಕಡ 15ರಷ್ಟು ಮತಗಳು ಬಂದಿದ್ದು, ಡಿ.ಕೆ ಶಿವಕುಮಾರ್ ಅವರಿಗೆ ಕೇವಲ ಶೇಕಡ 4ರಷ್ಟು ಮತ ಬಂದಿವೆ. ಇನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಶೇಕಡ 10ರಷ್ಟು ಮತಗಳನ್ನು ಪಡೆಯುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎನ್ನುವುದು ಇಡೀ ರಾಜ್ಯಾದ್ಯಂತ ಜನರ ಮನಸ್ಥಿತಿ ಎನ್ನುವುದನ್ನು ಈ ಸರ್ವೇ ಬಹಿರಂಗ ಮಾಡಿದೆ. ಆದರೆ ಜೆಡಿಎಸ್ ಅಂದುಕೊಂಡಷ್ಟು ಸೀಟ್ ಗೆಲ್ಲುತ್ತಾ ಅಂದ್ರೆ ಇಲ್ಲ.
ಜೆಡಿಎಸ್’ಗೆ ಸಿಗಲ್ಲ ಸಂಪೂರ್ಣ ಬಹುಮತ..!
ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಆಸೆಯಾಗಿದೆ. ಆದರೆ ಸಂಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯುತ್ತಾರಾ..? ಅನ್ನೋದಕ್ಕೆ ಅಂಕಿ ಅಂಶಗಳೇ ನೋ ಎನ್ನುತ್ತಿವೆ. ಆದರೂ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವುದನ್ನು ಪಾಪುಲರ್ ಪೋಲ್ ಸರ್ವೇ ಬಹಿರಂಗ ಮಾಡಿದೆ. ಯಾವುದೇ ಒಂದು ಪಕ್ಷಕ್ಕೂ ಬಹುಮತ ಬಾರದ ಕಾರಣ ಮುಂದಿನ ಬಾರಿಯೂ ಕೂಡ ಕಿಚಡಿ ಸರ್ಕಾವೇ ಗತಿ ಎನ್ನುವುದು ಈ ಸರ್ವೇ ಕೊಟ್ಟಿರುವ ರಿಪೋರ್ಟ್. ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 80 ರಿಂದ 84 ಸ್ಥಾನಗಳಲ್ಲಿ ಗೆಲ್ಲಲು ಸಮರ್ಥವಾದರೆ ಬಿಜೆಪಿ ಅಂತಿಮವಾಗಿ 82-87 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದಿದೆ ವರದಿ. ಇನ್ನು ಜೆಡಿಎಸ್ 42 ರಿಂದ 45 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮುನ್ಸೂಚನೆ ಈ ಸರ್ವೆ ಕೊಟ್ಟಿದೆ. ಪಕ್ಷೇತರರು 4 ರಿಂದ 6 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವುದು ಈ ಸರ್ವೇ ಸಾರಾಂಶ.
ಮಾಜಿ ಸಿಎಂ HDK ಮೆಚ್ಚಿದ್ಯಾಕೆ ರಾಜ್ಯದ ಜನತೆ..!
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಂಚ ಕೋಪಿಷ್ಟನಾದರೂ ಕಷ್ಟ ಎಂದು ಬಂದವರಿಗೆ ದಯಮಾಯಿ. ತನ್ನ ಕೈಲಾದ ಸಹಾಯವನ್ನು ಮಾಡಿಯೇ ಕಳಿಸ್ತಾರೆ. ಅದರಲ್ಲೂ ಇತ್ತೀಚಿಗೆ ರಾಜಕಾರಣಿಗಳು ಮಾಡುತ್ತಿರುವ ಕೆಲವನ್ನು ಕುಮಾರಸ್ವಾಮಿ 2007ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಜಾರಿ ಮಾಡಿದ್ದರು. ಮದ್ಯ ಪಾನ ನಿಷೇಧ, ಲಾಟರಿ ನಿಷೇಧ, ಜನತಾ ದರ್ಶನ, ಗ್ರಾಮ ವಾಸ್ತವ್ಯ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಹೀಗೆ ಸಾಲು ಸಾಲು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅಧಿಕಾರ ಹಸ್ತಾಂತರ ಮಾಡುವ ವೇಳೆ ಕೆಲವೊಂದು ಗೊಂದಲ ಆಗಿದ್ದರಿಂದ ಜನರ ಕುಮಾರಸ್ವಾಮಿಯನ್ನು ತಿರಸ್ಕಾರ ಮಾಡಿದ್ದರು. ಆದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಕಾರ್ಯಕರ್ತರಿಗೂ ಕುಮಾರಸ್ವಾಮಿ ಅಂದರೆ ಅಭಿಮಾನ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಅಂದರೆ ಬಡವರಿಗೆ ಒಳ್ಳೇದು ಆಗುತ್ತದೆ ಆಗಲಿ ಎನ್ನುತ್ತಾರೆ ಮೂರು ಪಕ್ಷದ ಕಾರ್ಯಕರ್ತರು.
ಹೈದ್ರಾಬಾದ್ ಕರ್ನಾಟಕ 40
( ಬೀದರ್, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ)
ಕಾಂಗ್ರೆಸ್ 20-22
ಬಿಜೆಪಿ 12-15
ಜೆಡಿಎಸ್ 5-7
ಇತರೆ 2-4
ಮುಂಬೈ ಕರ್ನಾಟಕ – 44
(ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಧಾರವಾಡ, ಗದಗ)
ಕಾಂಗ್ರೆಸ್ 16-18
ಬಿಜೆಪಿ 22-24
ಜೆಡಿಎಸ್ 4-6
ಇತರೆ 1-2
ಮಧ್ಯ ಕರ್ನಾಟಕ – 27
( ಚಿತ್ರದುರ್ಗ, ತುಮಕೂರು, ದಾವಣಗೆರೆ, ಶಿವಮೊಗ್ಗ )
ಕಾಂಗ್ರೆಸ್7-9
ಬಿಜೆಪಿ 17-19
ಜೆಡಿಎಸ್ 8-9
ಇತರೆ 0
ಕರಾವಳಿ ಕರ್ನಾಟಕ – 19
(ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ)
ಕಾಂಗ್ರೆಸ್ 5-7
ಬಿಜೆಪಿ 12-14
ಜೆಡಿಎಸ್ 0
ಇತರೆ 0
ದಕ್ಷಿಣ ಕರ್ನಾಟಕ – 66
(ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ)
ಕಾಂಗ್ರೆಸ್ 21-23
ಬಿಜೆಪಿ 11-13
ಜೆಡಿಎಸ್ 25-30
ಇತರೆ 1-2
ಬೆಂಗಳೂರು ನಗರ – 28
ಕಾಂಗ್ರೆಸ್ 14-16
ಬಿಜೆಪಿ 12-14
ಜೆಡಿಎಸ್ 1-2
ಇತರೆ 0-1
ಬೆಂಗಳೂರು ಗ್ರಾಮಾಂತರ – 04
ಕಾಂಗ್ರೆಸ್ 1-2
ಬಿಜೆಪಿ 1-2
ಜೆಡಿಎಸ್ 2
ಇತರೆ 0
ಒಟ್ಟು – 224
ಕಾಂಗ್ರೆಸ್ 80-84
ಬಿಜೆಪಿ 82-87
ಜೆಡಿಎಸ್ 42-45
ಇತರೆ 4-6