2025 ನೇ ಆವೃತ್ತಿಯ IPL ಸರಣಿಯಲ್ಲಿ CSK ತಂಡ ಈಗಾಗಲೇ ಸತತ ಸೋಲುಗಳಿಂದ ಟೇಬಲ್ ನಲ್ಲಿ ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai super kings) ಆಡಿರುವ 8 ಪಂದ್ಯಗಳಲ್ಲಿ ಇಲ್ಲಿವರೆಗೆ ಕೇವಲ 2 ಪಂದ್ಯಗಳಲ್ಲಿ ಗೆದ್ದಿದೆ.

ಹೀಗಾಗಿ ಐಪಿಎಲ್ (Ipl) ಟೀಮ್ ಗಳ ಅಂಕ ಪಟ್ಟಿಯಲ್ಲಿ -1.392 ನೆಟ್ ರನ್ ರೇಟ್ನೊಂದಿಗೆ ಸದ್ಯ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಈಗ CSK ಸದ್ಯದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ.
ಯಾಕಂದ್ರೆ ಸಾಮಾನ್ಯವಾಗಿ 16 ಅಂಕಗಳನ್ನು ಪಡೆಯುವ ತಂಡ ನೇರವಾಗಿ ಪ್ಲೇಆಫ್ಗೆ (Playoff) ಅರ್ಹತೆ ಪಡೆಯುತ್ತವೆ. ಈ ಕಾರಣದಿಂದ CSKಗೆ ಉಳಿದಿರುವ ಎಲ್ಲಾ ಪಂದ್ಯಗಳು ನಿರ್ಣಾಯಕವಾಗಿದೆ.

ಹೀಗಾಗಿ ಉಳಿದಿರುವ 6ಕ್ಕೆ ಆರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ಗೆ ಎಂಟ್ರಿ ಕೊಡೋದು ನಿಜವಾಗ್ಲೂ ಸಾಧ್ಯನಾ..? CSK ಅಥವಾ ಲೀಗ್ ಹಂತದಲ್ಲೇ ಹೊರಬೀಳಲಿದೆಯಾ ಎಂಬ ಚರ್ಚೆ ಜೋರಾಗಿದೆ.