ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಸಚಿವ ಸತ್ಯೇಂದ್ರ ಜೈನ್ ಗೆ ಕ್ಲೀನ್ ಚಿಟ್ ನೀಡಿದ್ದರ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಕೆಮದ್ರ ಸಚಿವೆ ಸ್ಮೃತಿ ಇರಾನಿ ಹರಿಹಾಯ್ದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸ್ಮೃತಿ ಇನ್ನೆಷ್ಟು ದಿನ ನೀವು ದೇಶದ್ರೋಹಿಯನ್ನ ರಕ್ಷಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು, ಸತ್ಯೇಂದ್ರ ಜೈನ್ ವಿರುದ್ದ ಆರೋಪಗಳ ಪಟ್ಟಿಯನ್ನು ಒದಿದ್ದ ಇರಾನಿ ಸತ್ಯೇಂದ್ರರವರ ಒಡೆತನದಲ್ಲಿರುವ ಶೆಲ್ ಕಂಪನಿಯ ಬಗ್ಗೆ ಪ್ರಸ್ತಾವಿಸಿ ಇದು ನಿಜವೇ ಅಥವಾ ಸುಳ್ಳೇ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ಗೆ ಪ್ರಶ್ನಿಸಿದ್ದಾರೆ.
ಎಂಟು ವರ್ಷದ ಹಿಂದಿನ ಹಳೇ ಪ್ರಕರಣವನ್ನ ಕೆದಕಿ ಬಿಜೆಪಿ ದ್ವೇಷ ರಾಜಕಾರಣವನ್ನ ಮಾಡುತ್ತಿದೆ. ಸತ್ಯೇಂದ್ರ ಜೈನ್ರನ್ನು ಎಎಪಿ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಾಣ ಉಸ್ತುವಾರಿಯಾಗಿ ನೇಮಿಸಿದ್ದರಿಂದ ಬಿಜೆಪಿ ಭಯಬೀತವಾಗಿ ಈ ರೀತಿ ಮಾಡಿದೆ ಎಂದು ಆರೋಪಿಸಿದ ಬೆನ್ನಲ್ಲೇ ಸ್ಮೃತಿ ಹೇಳಿಕೆ ಬಂದಿದೆ.