ಬೆಂಗಳೂರು : ಅಹಿಂದ ಸಮುದಾಯ ಹಿಂದುಳಿದಿದ್ದಕ್ಕೆ ಅಹಿಂದ ಶುರುವಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿಯೂ ಈ ಸಮುದಾಯಗಳು ಹಿಂದೆ ಬಿದ್ದಿವೆ. ಹೀಗಾಗಿ ಅವರಿಗೆ ಉತ್ತೇಜನ ಕೊಡಲು ಅಹಿಂದಕ್ಕೆ ಒತ್ತು ನೀಡಲಾಗಿದೆ., ಆ ಸಮುದಾಯ ಮುಖ್ಯವಾಹಿನಿಗೆ ಬರಬೇಕು. ಸಮಾವೇಶದ ಮೂಲಕ
ಅವರ ಸಮಸ್ಯೆಗಳಿಗೆ ಉತ್ತರ ಸಿಗಬೇಕು. ಅಹಿಂದ ಸಮಾವೇಶ ಆದರೆ ಒಳ್ಳೆಯದು, ದಲಿತ ಸಮಾವೇಶಕ್ಕೆ ಅವಕಾಶ ಸಿಗ್ಲಿಲ್ಲವೆಂಬ ಪ್ರಶ್ನೆಗೆ ಅದರಲ್ಲೇ ಉತ್ತರವಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಅಹಿಂದ ಸಮಾವೇಶ ಆದರೆ ಒಳ್ಳೆಯದಾಗುತ್ತದೆ. ಸಿಎಂ ಬದಲಾವಣೆ ವಿಚಾರದಲ್ಲಿ ಬಹಳ ಮಾಹಿತಿ ಇಲ್ಲ, ಈ ಬಗ್ಗೆ ನಾವು ಮಾತನಾಡುವುದು ಸಮಂಜಸವಲ್ಲ , ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜ್ಯದ ಎಲ್ಲ ವಿಚಾರ ಗೊತ್ತಿದೆ. ಅವರು ಎಐಸಿಸಿ ಅಧ್ಯಕ್ಷರಾಗಿರೋದೇ ಸೌಭಾಗ್ಯವಾಗಿದೆ. ರಾಜ್ಯದ ರಾಜಕಾರಣ ಅವರಿಗೆ ಗೊತ್ತಿದೆ, ಅವರು ಸಿಎಂ ಆದರೆ ಬಹಳ ಸಂತೋಷವಾಗುತ್ತದೆ ಎಂದು ಪರಮೇಶ್ವರ್ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಖರ್ಗೆ ಅವರಿಗೆ ಹೆಚ್ಚಿನ ಅನುಭವ ಇದೆ, ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದರು, ಅಹಿಂದರ ರಕ್ಷಣೆ ವಿಚಾರದ ಬಗ್ಗೆ ಮಾತನಾಡೋಕೆ ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ ಕೂಡ ದಹೆಲಿಯಲ್ಲಿ,ಒಳ ಮೀಸಲಾತಿ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ದಲಿತ ಆಯೋಗ ಬೇಟಿಯಾಗಲು ಹೋಗಿದ್ದರು ಎಂದು ಸಚಿವರ ಭೇಟಿಯನ್ನು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ‘ಟಾಕ್ಸಿಕ್’ ಮತ್ತೆ ಮುಂದೂಡಿಕೆ: ಜೂನ್ 4 ರಿಲೀಸ್ ರದ್ದು! ಕಾರಣವೇನು?
ಆ ಪ್ರಕ್ರಿಯೆಯನ್ನು ತಡೆಯೋದಕ್ಕೆ ಆಗುವುದಿಲ್ಲ..
ವಿನಯ್ ಕುಲಕರ್ಣಿ ವಿಚಾರದಲ್ಲಿ ಸ್ಪೀಕರ್ ಕಚೇರಿ ಮೌನಕ್ಕೆ ಪ್ರತಿಕ್ರಿಯಿಸಿ, ಅದೊಂದು ಪ್ರಕ್ರಿಯೆ, ಅದನ್ನು ತಡೆಯೋದಕ್ಕೆ ಆಗಲ್ಲ, ಒಂದೆರಡು ದಿನ ವಿಳಂಬ ಆಗಬಹುದು ಅಷ್ಟೇ ಆದರೆ ಆ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಇಲಾಖೆಯಲ್ಲೂ ನೇಮಕಾತಿ ಮಾಡಿಕೊಳ್ಳುತ್ತೇವೆ..
ಒಳಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ತೀರ್ಮಾನಕ್ಕೆ ತಕ್ಕಂತೆ ಅಧಿಸೂಚನೆ ಬಂದಿದೆ, 56 ಸಾವಿರ ಹುದ್ದೆಗಳ ನೇಮಕಾತಿ ಆಗಲಿದೆ. ನಮ್ಮ ಇಲಾಖೆಯಲ್ಲೂ ನೇಮಕಾತಿ ಮಾಡಿಕೊಳ್ಳುತ್ತೇವೆ., ಎಲ್ಲ ಇಲಾಖೆಗಳೂ ನೇಮಕಾತಿಗೆ ಮುಂದಾಗಲಿವೆ. ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಕೊಟ್ಟಿದೆ ಎಂದು ಗೃಹ ಸಚಿವ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.





