• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ಬಂಗಾಳದ ಚುನಾವಣೆ ಬಿಜೆಪಿಗೆ ಹಾಗೂ ಟಿಎಂಸಿಗೆ ಅತ್ಯಂತ ಮಹತ್ವದ್ದು, ಆದರೆ ರಾಜಕೀಯ ಸಮೀಕರಣಗಳು ಮಾತ್ರ ಹಾಗೆ ಉಳಿದಿಲ್ಲ, ಬದಲಾವಣೆ ದಾರಿ ಹಿಡಿದಿರುವುದು ಕುತೂಹಲ..

ಪ್ರತಿಧ್ವನಿ by ಪ್ರತಿಧ್ವನಿ
April 29, 2026
in Top Story, ಇದೀಗ, ದೇಶ, ರಾಜಕೀಯ
0
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?
Share on WhatsAppShare on FacebookShare on Telegram
ADVERTISEMENT

ಬೆಂಗಳೂರು :  ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಪಶ್ಷಿಮ ಬಂಗಾಳದ ವಿಧಾನಸಭೆಯ ಎರಡನೇ ಹಂತದ ಮತದಾನ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಈಗಾಗಲೇ ಹಲವಾರು ಗ್ಯಾರಂಟಿಗಳನ್ನು ಘೋಷಿಸಿವೆ. ಈ ನಡುವೆ ಪೂರ್ವ ರಾಜ್ಯದ ಚುನಾವಣೆಯು ಬಿಜೆಪಿಗೆ ಮಾಡು ಇಲ್ಲವೇ ಮಡಿ ಎಂಬ ಸನ್ನಿವೇಶಕ್ಕೆ ದೂಡಿದ್ದು, ಅದರಂತೆ ಆಡಳಿತಾರೂಢ ಟಿಎಂಸಿಗೂ ಅಷ್ಟೇ ಸವಾಲಗಳನ್ನೂ ಒಡ್ಡಿದೆ. ಈ ಎಲ್ಲದರ ಮಧ್ಯೆ ಇಂದಿನ ಚುನಾವಣೆಯು ಸಾಕಷ್ಟು ಕಟ್ಟೆಚ್ಚರ ಹಾಗೂ ತೀವ್ರ ಭದ್ರತೆಯ ನಡುವೆ ಮುಂದುವರೆದಿದೆ.

Shashidhara Nagarajappa Podcast : ದುಬೈನಲ್ಲಿ ಕನ್ನಡ ಪಾಠ ಯಾಕೆ ಕಲಿಸುತ್ತೀರಾ..? #pratidhvani

ರಾಜ್ಯದ 142 ಸ್ಥಾನಗಳಿಗೆ ನಡೆಯುತ್ತಿರುವ ಇಂದಿನ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಕಳೆದ ಏಪ್ರಿಲ್ 23 ರಂದು ಪಶ್ಚಿಮ ಬಂಗಾಳದ 152 ಸ್ಥಾನಗಳಿಗೆ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ದಕ್ಷಿಣ ಬಂಗಾಳದ ಎಂಟು ಜಿಲ್ಲೆಗಳಲ್ಲಿ 41,001 ಮತಗಟ್ಟೆಗಳಲ್ಲಿ ಈ  ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ವಿಶೇಷ ಮತದಾರರ ಪಟ್ಟಿ ವೀಕ್ಷಕ ಸುಬ್ರತಾ ಗುಪ್ತಾ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಲು ಹಾಗೂ ಮತದಾರರ ಸುರಕ್ಷತೆಯ ದೃಷ್ಟಿಯಿಂದ ಸಿಎಪಿಎಫ್‌ನ ಸುಮಾರು 2,400 ತುಕಡಿಗಳನ್ನು ನಿಯೋಜಿಸಲಾಗಿದೆ. ಬಂಗಾಳದಲ್ಲಿ ಶಾಂತಿ ಕಾಪಾಡಲು ನಾವು ಯಾವುದೇ ಹಂತಕ್ಕೂ ತಲುಪಲು ಸಿದ್ಧರಿದ್ದೇವೆ. ಎರಡನೇ ಹಂತದ ಚುನಾವಣೆಯು ಅತ್ಯಂತ ಸರಳವಾಗಿ ನಡೆಯುತ್ತದೆ ಎಂದು ಭಾವಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದಲ್ಲಿ ಈಗಾಗಲೇ ಶೇ. 93 ಕ್ಕಿಂತ ಹೆಚ್ಚಿನ ಮತದಾನದ ಪ್ರಮಾಣವನ್ನು ಇನ್ನಷ್ಟು ಅಧಿಕವಾಗಿಸಲು ನಾವು ಎಲ್ಲಾ ಮತದಾರರಿಗೆ ಕರೆ ನೀಡಿದ್ದೇವೆ. ಎರಡನೇ ಹಂತದ ಎಲ್ಲಾ ಮತದಾರರು ಬಂದು ಶಾಂತಿಯುತವಾಗಿ ಮತ್ತು ಯಾವುದೇ ಭಯವಿಲ್ಲದೆ ಮತ ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಎಸ್‌ಐಆರ್‌ (Special Intensive Revisiion) ಪ್ರಕ್ರಿಯೆಯು ನಡೆದಿದ್ದು,, ಕೆಲವು ತುಕಡಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ಆದರೆ ಎಲ್ಲಾ ಸ್ಟ್ರಾಂಗ್ ರೂಮ್‌ಗಳ ಕಾವಲಿಗಾಗಿ ಕೇಂದ್ರದ ಭದ್ರತಾಪಡೆಗಳು ಇರಲಿವೆ. ಸ್ಟ್ರಾಂಗ್ ರೂಮ್‌ಗಳ ಪ್ರವೇಶ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ದೃಶ್ಯಾವಳಿಗಳು ಲಭ್ಯವಿರುತ್ತವೆ” ಎಂದು ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ : ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಇರುತ್ತಾರೆ ಎಂದು ಗುಪ್ತಾ ಹೇಳಿದರು. “ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಎರಡು ವೆಬ್‌ಕ್ಯಾಮ್‌ಗಳನ್ನು ಅಳವಡಿಸಲಾಗಿದೆ – ಒಂದು ಒಳಗೆ ಮತ್ತು ಒಂದು ಹೊರಗೆ ಎಂಬಂತೆ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕಾಗಿ ಹೆಚ್ಚಿನ ಜನರು  ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ. 93.2 ರಷ್ಟು ಮತದಾನವಾಗಿದ್ದು, ದಾಖಲೆಯ ಮತದಾನವಾಗಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಇದರಿಂದ ಲಾಭವಾಗಲಿದೆ.

ಎರಡನೇ ಹಂತದ ನಿರ್ಣಾಯಕ 142 ಸ್ಥಾನಗಳು..

ಇಂದು ಮತದಾನ ನಡೆಯುತ್ತಿರುವ 142 ಸ್ಥಾನಗಳು, ದಕ್ಷಿಣ ಬಂಗಾಳ ಮತ್ತು ಕೋಲ್ಕತ್ತಾ ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿರುವ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಮುಖ ಭದ್ರಕೋಟೆಯಾಗಿದೆ. ಆದರೆ ಈ ಬಾರಿ ಇಲ್ಲಿನ ಸ್ಥಾನಗಳಲ್ಲಿ ಬಿಜೆಪಿಯು ಕಳೆದ 2021 ರ ಚುನಾವಣೆಯಲ್ಲಿನ 77 ಸ್ಥಾನಗಳನ್ನು ಮೀರಿಸುವಂತೆ ಅಧಿಕ ಸೀಟ್‌ಗಳನ್ನು ಗೆಲ್ಲಲು ಬಂಗಾಳದ ದಕ್ಷಿಣ ಭಾಗದಲ್ಲಿರುವ ಟಿಎಂಸಿ ಭದ್ರಕೋಟೆಯನ್ನು ಭೇದಿಸಲು ನೋಡುತ್ತಿದೆ.

ಇನ್ನೂ ಪ್ರಮುಖವಾಗಿ ಈ ಬಾರಿಯ ಬಂಗಾಳದ ಚುನಾವಣೆಯು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಸುವೇಂದು ಅಧಿಕಾರಿಯ ಬಿಜೆಪಿ ನಡುವೆ ನೇರ ಸ್ಪರ್ಧೆಗೆ ಕಾರಣವಾಗಿದೆ. ಹೀಗಾಗಿ ಈ ಸಲದ ಬಂಗಾಳದ ಚುನಾವಣಾ ಪ್ರಚಾರದ ಅಖಾಡದಲ್ಲಿ ಬಿಜೆಪಿಯು ಕೂಡ ಉತ್ತಮ ಪ್ರಯತ್ನ ಮಾಡಿದ್ದು, ಇದರಿಂದ ದೀದಿಗೆ ಸಹಜವಾಗಿಯೇ ಆತಂಕ ಇದ್ದೆ ಇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಘಟಾನುಘಟಿ ಕೇಂದ್ರದ ನಾಯಕರು ಪ್ರಚಾರದ ಅಖಾಡಕ್ಕಿಳಿದು ಟಿಎಂಸಿ ವಿರುದ್ಧ ಮತಬೇಟೆ ನಡೆಸಿದ್ದರು. ಹೀಗಾಗಿ ಬಿಜೆಪಿಗೆ ಬಂಗಾಳದ ಮೇಲೆ ಇನ್ನಷ್ಟು ನಿರೀಕ್ಷೆಯ ಜೊತೆಗೆ ಆಶಾಗೋಪುರ ನಿರ್ಮಾಣವಾದಂತೆ ಕಂಡು ಬರುತ್ತಿದೆ.

ಇಂದಿನ ಮತದಾನದಲ್ಲಿ 1,228 ಪುರುಷರು ಮತ್ತು 220 ಮಹಿಳೆಯರು ಸೇರಿದಂತೆ ಒಟ್ಟು 1,448 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 3.22 ಕೋಟಿಗೂ ಹೆಚ್ಚು ಮತದಾರರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಲ್ಲಿ 1.64 ಕೋಟಿ ಪುರುಷರು, 1.57 ಕೋಟಿ ಮಹಿಳೆಯರು ಮತ್ತು 792 ತೃತೀಯ ಲಿಂಗದ ಮತದಾರರು ಸೇರಿದ್ದಾರೆ.

ಟಿಎಂಸಿ, ಬಿಜೆಪಿಗೆ ಎರಡನೇ ಹಂತ ಏಕೆ ನಿರ್ಣಾಯಕ?

ಎರಡನೇ ಹಂತದಲ್ಲಿ ಹಲವಾರು ನಿರ್ಣಾಯಕ, ಪ್ರಮುಖ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಭಬಾನಿಪುರವೂ ಒಂದು. ಅಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಎದುರಿಸಲಿದ್ದಾರೆ.

ಮೋದಿ ಹೇಗಿರಬೇಕು ಅನ್ನೋದಕ್ಕೆ ಕವನ ಬರೆದು ವ್ಯಂಗ್ಯವಾಡಿದ ಶಿವರಾಜ್ ತಂಗಡಗಿ..

ಇನ್ನೂ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳೂ ಕೂಡ ಉಭಯ ಪಕ್ಷಗಳಿಗೆ ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುತ್ತವೆ. ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು, ಹೂಗ್ಲಿ ಮತ್ತು ಪುರ್ಬಾ ಬರ್ಧಮಾನ್ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

2021 ರಲ್ಲಿ, ಟಿಎಂಸಿ ಈ ಸ್ಥಾನಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಂಡಿತ್ತು. ಅಲ್ಲದೆ 142 ಸ್ಥಾನಗಳಲ್ಲಿ 123 ಸ್ಥಾನಗಳನ್ನು ಗೆದ್ದಿತ್ತು ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಬಿಜೆಪಿ ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಉಳಿದ ಒಂದು ಸ್ಥಾನವಾದ ಭಂಗಾರ್ ಅನ್ನು ಎಡಪಕ್ಷಗಳ ಮಿತ್ರಪಕ್ಷವಾದ ಭಾರತೀಯ ಜಾತ್ಯತೀತ ರಂಗ (ಐಎಸ್ಎಫ್) ಗೆದ್ದುಕೊಂಡಿತು.

ಆದರೆ ಈಗ ಬಂಗಾಳದ ರಾಜಕೀಯ ಚಿತ್ರಣ ಹಾಗೂ ಸಮೀಕರಣಗಳೆರಡೂ ಬದಲಾಗುತ್ತಿವೆ. ಬಿಜೆಪಿಯು ಈ ಚುನಾವಣೆಯನ್ನು ತೀವ್ರ ಪ್ರತಿಷ್ಠೆಯಾಗಿ ಪಡೆದುಕೊಂಡಾಗಿನಿಂದ ಎಲ್ಲವೂ ಉಲ್ಟಾ ಆಗಿದೆ. ಒಂದೆಡೆ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ರೆ, ಇನ್ನೊಂದೆಡೆ ಬಿಜೆಪಿಯು ಕೂಡ ಅಷ್ಟೇ ಆತ್ಮ ವಿಶ್ವಾಸದಿಂದ ದೀದಿ ಕೋಟೆಯನ್ನು ಛಿದ್ರ ಮಾಡುವ ಸಂಕಲ್ಪ ತೊಟ್ಟಿರುವುದಾಗಿ ಹೇಳಿಕೊಳ್ಳುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಂತಿಮವಾಗಿ ಮೂರು ಅವಧಿಗಳ ಕಾಲ ಬಂಗಾಳ ಆಳುತ್ತಿರುವ ನಾರಿ ರಾಜಕೀಯ ಓಟಕ್ಕೆ ಮೋದಿ, ಶಾ ಜೋಡಿ ಬ್ರೇಕ್‌ ಹಾಕುತ್ತಾ ಎನ್ನುವುದಕ್ಕೆ ಮೇ 4 ಉತ್ತರವಾಗಲಿದೆ.

Tags: Amit ShahBhavanipur ConstituencyBJPCentral Election CommissioncongressMamata BanerjeeNandigram ConstituencyNarendra ModiPratidhvaniSuvendu AdhikariTMCWest Bengal Assembly ElectionWest Bengal CM
Previous Post

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

Next Post

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

Related Posts

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
Top Story

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

by ಪ್ರತಿಧ್ವನಿ
April 29, 2026
0

ಬೆಳಗಾವಿ : ಜನ ಸಮುದಾಯ ಎಷ್ಟೇ ಮುಂದುವರೆದರೂ, ತಂತ್ರಜ್ಷಾನ ದಿನದಿಂದ ದಿನಕ್ಕೆ ಬೆಳವಣಿಗೆ ಕಂಡರೂ ಅಲ್ಲದೆ ಕಾನೂನುಗಳು ಅದೆಷ್ಟೇ ಬಿಗಿಯಾದರೂ ಸಹ ಜನರ ಮನಸ್ಸುಗಳು, ಯೋಚನೆಗಳು ಮಾತ್ರ...

Read moreDetails
Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

ಸತ್ತ ಅಕ್ಕನ ಅಸ್ಥಿಪಂಜರ ಹೊತ್ತು ಬ್ಯಾಂಕ್‌ಗೆ ಬಂದ ಸೋದರ: ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೃದಯವಿದ್ರಾವಕ ಪ್ರತಿಭಟನೆ

April 29, 2026
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

April 28, 2026
Next Post

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada