ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ದಲಿತ ಯುವತಿಯ ಅತ್ಯಚಾರ ಪ್ರಕರಣ ಸಂಬಂಧ ವರದಿ ಮಾಡಲೆಂದು ತೆರಳಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್‌ರವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.ನಂತರ ಬಂಧನಕ್ಕೊಳಗಾಗಿ ಜೈಲಿನಲ್ಲಿಡಲಾಗಿತ್ತು. ಆದರೀಗಾ ಕೆಲವು ದಿನಗಳ ಹಿಂದೆ ಸಿದ್ದಿಕ್ ಕಪ್ಪನ್‌ಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ ಜೊತೆಗೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣಿರಾಯಿ ವಿಜಯನ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸಿದ್ದೀಕ್ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಉತ್ತಮ ಚಿಕಿತ್ಸಾ ಸೌಲಭ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸುವಂತೆ ಕೇರಳ ಮುಖ್ಯಮಂತ್ರಿ ಪಿಣಿರಾಯ್ ವಿಜಯನ್ ಉತ್ತರಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ಕಪ್ಪನ್ ಪರ ವಕೀಲರು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣಾ ಅವರಿಗೆ ಪತ್ರ ಬರೆದರು, ಕಪ್ಪನ್ ಚಿಕಿತ್ಸೆ ಪಡೆಯುತ್ತಿರುವ ಮಥುರ ವೈದ್ಯಕೀಯ ಕಾಲೇಜಿನಿಂದ ಮಥುರ ಜೈಲಿಗೆ ಬಿಡುಗಡೆ ವಿಚಾರ ಸಂಬಂಧ ಕೋರ್ಟ್ ತಕ್ಷಣ ಮಧ್ಯಪ್ರವೇಶಿಸಬೇಕು ಯಾಕೆಂದರೆ ಸಿದ್ದೀಕ್ ಕಪ್ಪನ್ ಕೋವಿಡ್ ಪಾಸಿಟಿವ್‌ನಿಂದ ಬಳಲುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಲಾಗಿತ್ತು.
ಪ್ರತಕರ್ತ ಸಿದ್ದೀಕ್ ಕಪ್ಪನ್ ಅವರ ಆರೋಗ್ಯಸ್ಥಿತಿ ಗಂಭಿರವಾಗಿದೆ. ಮಥುರಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದ್ದು, ಚಲನಶೀಲತೆ ಇಲ್ಲದೆ ಹಿಡಿದಿಟ್ಟ ಪ್ರಾಣಿಯಂತಾಗಿದ್ದಾರೆ. ಅವರಿಗೆ ಆಹಾರ ಸೇವಿಸಲು ಕೂಡ ಕಷ್ಟಸಾಧ್ಯವಾಗುತ್ತಿದೆ. ಮತ್ತು ಶೌಚಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ತಕ್ಷಣ ಉತ್ತಮ ಚಿಕಿತ್ಸೆ ಕೊಡಲು ಮುಂದಾಗದಿದ್ದರೆ. ಇದು ಅವರ ಅಕಾಲಿಕ ಸಾವಿಗೆ ಕಾರಣವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೇರಳ ಸಂಸತ್ತಿನ 11 ಸದಸ್ಯರು ಕೂಡ ಸಿಜೆಐ ರಮಣಾಗೆ ಪತ್ರಬರೆದು ನ್ಯಾಯಾಲಯ ಸಿದ್ದೀಕ್ ಕಪ್ಪನ್ ಆರೋಗ್ಯ ಸ್ಥಿತಿಯ ಬಗ್ಗೆ ತುರ್ತು ವಿಚಾರಣೆ ನಡೆಸಬೇಕು ಹಾಗು ಕಪ್ಪನ್ ಅವರವನ್ನು ಮಥುರಾ ವೈದ್ಯಕೀಯ ಕಾಲೇಜಿನಿಂದ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಆದೇಶ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ವೈದ್ಯಕೀಯ ತುರ್ತುಸ್ಥಿತಿಯನ್ನು ಉಲ್ಲೇಖಿಸಿ ಕಪ್ಪನ್ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ವರ್ಗಾಯಿಸುವಂತೆ ಕೋರಿ ಕೇರಳ ಯೂನಿಯನ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ಕೂಡ ಏಪ್ರಿಲ್ 20 ರಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.





