ರಾಜ್ಯಾದ್ಯಂತ ಭಾರೀ ಗದ್ದಲ ಎಬ್ಬಿಸಿದ್ದ ಕೆರಗೋಡು ಗ್ರಾಮದಲ್ಲಿ ಹೆಚ್‌ಡಿಕೆ (HDK) ರಾಮ ಜಪ ಮಾಡಿ, ಮತಯಾಚನೆ ಮಾಡಿದ್ದಾರೆ. ಮಂಡ್ಯ (mandya) ಜಿಲ್ಲೆಯ ಕೆರಗೋಡು ಗ್ರಾಮ ಹನುಮ ಧ್ವಜ ವಿವಾದದಿಂದ ರಾಜ್ಯದೆಲ್ಲಡೆ ಭಾರೀ ಸದ್ದು ಮಾಡಿತ್ತು. ದೇಗುಲದ ಮುಂದಿನ ಧ್ವಜ ಸ್ತಂಭ ತೆರವು ಮಾಡಿದ್ದಕ್ಕೆ, ಬಿಜೆಪಿ-ಜೆಡಿಎಸ್ (B]p-Jds) ಮತ್ತು ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು.

ಆದ್ರೀಗ ಮಂಡ್ಯ ಲೋಕ ಅಖಾಡದಲ್ಲೇ ಕೆರಗೋಡು(keragodu) ಗ್ರಾಮ ಚುನಾವಣಾ ಅಸ್ತ್ರವಾಗಿದೆ. ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿರುವ ಹೆಚ್‌ಡಿಕೆ, ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ಕೆರಗೋಡು ಗ್ರಾಮಕ್ಕೆ ಆಗಮಿಸಿದ ಮಾಜಿ ಸಿಎಂರನ್ನು ಬೈಕ್ ರ್ಯಾಲಿ (Bike rally) ಹಾಗೂ ಪೂರ್ಣ ಕುಂಭದ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯ್ತು.

T ಬಳಿಕ ಕೆರಗೋಡು ಆಂಜನೇಯನ ದೇಗುಲಕ್ಕೆ ಭೇಟಿ ನೀಡಿದ ಹೆಚ್‌ಡಿಕೆ, ರಾಮನವಮಿಯ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಇನ್ನು ವಿವಾದಿತ ಅರ್ಜುನ ಸ್ತಂಭಕ್ಕೆ ಪೂಜೆ ಸಲ್ಲಿಸಿದ್ರು.. ಈ ವೇಳೆ ಕೇಸರಿ ಶಾಲಿನಲ್ಲಿ ಹೆಚ್‌ಡಿಕೆ ಮಿಂಚಿದ್ರು. ಇನ್ನು ಕಾರ್ಯಕರ್ತರು ನೀಡಿದ ಹನುಮ ಧ್ವಜವನ್ನು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ರು. ಆ ಮೂಲಕ ಒಕ್ಕಲಿಗ ಮತಗಳ ಜೊತೆಗೆ ಬಿಜೆಪಿಯ ಹಿಂದುತ್ವದ ಮತಗಳನ್ನೂ ಹೆಚ್‌ಡಿಕೆ ಟಾರ್ಗೆಟ್ ಮಾಡಿದ್ರು.






