ಶ್ರೀ ರಾಮನವಮಿ (Ram navami) ಮುಗಿಸಿ ಕಾರಿನಲ್ಲಿ (car) ತೆರಳುತ್ತಿದ್ದ ಯುವಕರನ್ನ ಅಡ್ಡಗಟ್ಟಿ ಪುಂಡಾಟ ಮೆರೆದಿರುವ ಪ್ರಕರಣ ವರದಿಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಕಾರ್ ತಡೆದು ಕಿರಿಕ್ ತೆಗೆದು ಅಲ್ಲಾ ಹು ಅಕ್ಬರ್ ಕೂಗಲು ಬಲವಂತ ಪಡಿಸಿರುವ ಘಟನೆ ನಡೆದಿದೆ.

ರಸ್ತೆಯಲ್ಲಿ ಇಬ್ಬರು ಯುವಕರು ಕಾರಿನ ಬಳಿ ಬಂದು ಶ್ರೀರಾಮ್ ಎಂದು ಹೇಳಬೇಕಾ, ಜೈ ಶ್ರೀ ರಾಮ್ ಇಲ್ಲಾ.. ಒನ್ನಿ ಅಲ್ಲಾ ಹು ಅಕ್ಷರ್ ಎಂದಿದ್ದಾರೆ.. ಇದಲ್ಲದೇ ಕಾರಿನಲ್ಲಿದ್ದ ರಾಹುಲ್, ವಿನಾಯಕ್ ಹಾಗೂ ಪವನ್ ಎಂಬುವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರಣ್ಯಪುರದ (Vidyaranyapuram) ಬೆಟ್ಟಳ್ಳಿ ಮಸೀದಿ ಬಳಿ ಘಟನೆ ನಡೆದಿದೆ. ಈ ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಡಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ಇನ್ನೂ ಮೂರು ಜನರೊಂದಿಗೆ ಬಂದು ಒಟ್ಟು ಐದು ಜನ ಸೇರಿ ಹಲ್ಲೆ ಮಾಡಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.