ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ (Pradosh) ಅವರ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಎರಡನೇ ದಿನವೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ, ಉಳಿದ ವಕೀಲರಿಗೆ ಕೋರ್ಟ್ ಹಾಲ್‌ನಿಂದ ಹೊರಹೋಗುವಂತೆ ಸೂಚಿಸಲಾಯಿತು.

ಹಿಂದಿನ ದಿನ ಮೂರು ಗಂಟೆಗಳ ಕಾಲ ವಿವರಗಳನ್ನು ದಾಖಲಿಸಿದ್ದ ಪ್ರದೋಷ್, ಪ್ರಮಾಣ ವಚನ ಸ್ವೀಕರಿಸಿ ತನಗೆ ನಟ ದರ್ಶನ್ ಜೊತೆಗಿನ ಒಡನಾಟ ಶುರುವಾದ ದಿನಗಳಿಂದ ಹಿಡಿದು ಘಟನೆ ನಡೆದ ದಿನದವರೆಗಿನ ಸಂಪೂರ್ಣ ವಿವರಗಳನ್ನು ನ್ಯಾಯಾಲಯದ ಮುಂದೆ ಹೇಳಿಕೆ ರೂಪದಲ್ಲಿ ವಿವರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯ ಕಲಾಪದ ಆನ್‌ಲೈನ್ ಪ್ರಕ್ರಿಯೆಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕುರಿತು ಆರೋಪಿಗಳ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶರು ಹಾಗೂ ವಕೀಲರ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡುತ್ತಿರುವುದು ನಿಯಮಬಾಹಿರ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಸಿಸಿಎಚ್ 59ನೇ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕೋರ್ಟ್ ಮಾರ್ಗಸೂಚಿಗಳ ಅನ್ವಯ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆನ್‌ಲೈನ್ ಕಲಾಪವನ್ನು ಸ್ಕ್ರೀನ್ ರೆಕಾರ್ಡ್ ಮಾಡುವುದು, ಎಡಿಟ್ ಮಾಡುವುದು ಅಥವಾ ಹಂಚಿಕೊಳ್ಳುವುದು ಅಪರಾಧ ಎಂದು ಎಚ್ಚರಿಕೆ ನೀಡಿದೆ. ಇಂತಹ ಕೃತ್ಯಗಳು ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಸೂಚಿಸಿದೆ.
ಅಕ್ಟೋಬರ್ 1ರಿಂದ 10 ಪ್ರಮುಖ ಬದಲಾವಣೆಗಳು: ನಿಮ್ಮ ಜೇಬಿನ ಮೇಲೂ ಪರಿಣಾಮ | Rules Change
ರಾಹುಲ್ ಗಾಂಧಿ ಮತ್ತೊಂದು ವೋಟ್ ಚೋರಿ ಬಾಂಬ್ : ದೆಹಲಿಯಲ್ಲಿ 727 ಮತದಾರರ ಹೆಸರು ಡಿಲೀಟ್ ಆರೋಪ | Rahul Gandhi
ಗ್ರಾಹಕರೇ ಗಮನಿಸಿ : ಎಲ್ ಪಿಜಿ ಸಬ್ಸಿಡಿ ಪಡೆಯಲು `ಬಯೋಮೆಟ್ರಿಕ್ ಆಧಾರ್ ದೃಢೀಕರಣ’ಕ್ಕೆ ನಾಳೆಯೇ ಲಾಸ್ಟ್ ಡೇಟ್ | LPG






