• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಹುಲ್ ಗಾಂಧಿ ಮತ್ತೊಂದು ವೋಟ್ ಚೋರಿ ಬಾಂಬ್ : ದೆಹಲಿಯಲ್ಲಿ 727 ಮತದಾರರ ಹೆಸರು ಡಿಲೀಟ್ ಆರೋಪ | Rahul Gandhi

ಪ್ರತಿಧ್ವನಿ by ಪ್ರತಿಧ್ವನಿ
September 29, 2026
in Top Story, ದೇಶ, ವಿಡಿಯೋ
0
Rahul Gandhi drops another vote theft Names of 727 voters deleted in Delhi
Share on WhatsAppShare on FacebookShare on Telegram

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮತ್ತೊಂದು  ದೆಹಲಿಯ ಬೇಲಾ ಎಸ್ಟೇಟ್ ಪ್ರದೇಶದಲ್ಲಿ ಮತದಾರರ ಪಟ್ಟಿಯಿಂದ (Voters List) ನೂರಾರು ಜನರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

ದೆಹಲಿಯ ಯಮುನಾ ನದಿ ತೀರದ ಬೇಲಾ ಎಸ್ಟೇಟ್‌ನ ಮತದಾರರ ಪಟ್ಟಿಯಲ್ಲಿದ್ದ 728 ಜನರ ಪೈಕಿ 727 ಜನರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಅವರು ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Pralhad Joshi : ಕಬ್ಬಿನ FRP ₹365ಕ್ಕೆ ಹೆಚ್ಚಳ: ರೈತರಿಗೆ ಕೇಂದ್ರದ ಭರವಸೆ..! #sugarcane #farmer #bjp

ವೋಟ್ ಕಳ್ಳತನದ ಆರೋಪ ಹೊರಿಸಿದ ರಾಹುಲ್ ಗಾಂಧಿ

ರಾಷ್ಟ್ರ ರಾಜಧಾನಿಯ ಬೇಲಾ ಎಸ್ಟೇಟ್‌ನಲ್ಲಿರುವ ಕೊಳೆಗೇರಿಗೆ ಸೋಮವಾರ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಅಲ್ಲಿನ ನಿವಾಸಿಗಳೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ನಿವಾಸಿಗಳು ದಶಕಗಳಿಂದ ವಾಸಿಸುತ್ತಿದ್ದು, 2024ರ ಲೋಕಸಭೆ ಮತ್ತು 2025ರ ದೆಹಲಿ ವಿಧಾನಸಭೆ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. 2023ರಲ್ಲಿ ಅವರ ಮನೆಗಳನ್ನು ತೆರವುಗೊಳಿಸಲಾಗಿದ್ದರೂ ಜನರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಮನೆ ಇಲ್ಲದವರಿಗೂ ಮತದಾನದ ಹಕ್ಕಿದೆ ಎಂದು ಸ್ವತಃ ಮುಖ್ಯ ಚುನಾವಣಾ ಆಯುಕ್ತರೇ ಹೇಳಿದ್ದರೂ, ವಿಶೇಷ ತೀವ್ರ ಪರಿಷ್ಕರಣೆ ಹೆಸರಿನಲ್ಲಿ ಬಡವರ ಏಕೈಕ ಶಕ್ತಿಯಾಗಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಹುಲ್, ಇದು ಪರಿಷ್ಕರಣೆಯಲ್ಲ, ಬದಲಿಗೆ ಮತ ಕಳ್ಳತನ ಎಂದು ಆರೋಪಿಸಿದ್ದಾರೆ. ಸ್ಥಳೀಯ ಉಪವಿಭಾಗಾಧಿಕಾರಿ (SDM) ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಅಧಿಕಾರಿಯ ವಿವರ ಪಡೆದು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Laxman Savadi : ಭಾಷಣದಿಂದ ಹೊಟ್ಟೆ ತುಂಬಲ್ಲ, ಬರದ ಸಂಕಷ್ಟದಲ್ಲಿ ರಾಜಕೀಯ ಬೇಡ..! #pmmodi #amitshah

ರಾಹುಲ್ ಗಾಂಧಿ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ

ರಾಹುಲ್ ಗಾಂಧಿ ಅವರ ಆರೋಪಗಳಿಗೆ ವಿವರಣೆ ನೀಡಿರುವ ಚುನಾವಣಾ ಆಯೋಗವು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಇರುವ ಹಿನ್ನೆಲೆಯನ್ನು ಬಹಿರಂಗಪಡಿಸಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮತದಾರರ ನೋಂದಾಯಿತ ವಿಳಾಸಗಳಿಗೆ ಫಾರ್ಮ್‌ಗಳನ್ನು ವಿತರಿಸಿ ಸಂಗ್ರಹಿಸುವ ಕಾರ್ಯ ಕೈಗೊಂಡಿದ್ದರು. ಬೇಲಾ ಎಸ್ಟೇಟ್ ಒಳಗೊಂಡಿರುವ ಮತಗಟ್ಟೆ ಸಂಖ್ಯೆ 38ರಲ್ಲಿ ಹೆಚ್ಚಿನ ಮತದಾರರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ 2021ರಲ್ಲಿ ಕೃಷಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದ್ದು, 2022-23ರ ಅವಧಿಯಲ್ಲಿ ಅಲ್ಲಿನ ವಸತಿಗಳನ್ನು ತೆರವುಗೊಳಿಸಲಾಗಿತ್ತು. ಪರಿಣಾಮವಾಗಿ, ಮತದಾರರು ತಮ್ಮ ನೋಂದಾಯಿತ ವಿಳಾಸಗಳಲ್ಲಿ ವಾಸಿಸದ ಕಾರಣ ಅಧಿಕಾರಿಗಳು ಅವರನ್ನು ‘ಕೆಡವಲಾದ ಕಟ್ಟಡ’ (DSDD) ಎಂದು ಗುರುತಿಸಿ 728 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದ್ದರು.

Shivaraj Tangadagi : ಬಿಜೆಪಿಯವರು ಮುಂದೆ ರಾಮನನ್ನೇ ಕದ್ದರೂ ಅಚ್ಚರಿ ಇಲ್ಲ..! #bjp #vote #pmmodi

ಮನೆರಹಿತ ಮತದಾರರಾಗಿ ಸೇರ್ಪಡೆಗೆ ವಿಶೇಷ ಶಿಬಿರ ಹಾಗೂ ಗಡುವು ವಿಸ್ತರಣೆ

ತೆರವುಗೊಂಡ ನಿವಾಸಿಗಳಲ್ಲಿ ಕೆಲವರು ಗೀತಾ ಕಾಲೋನಿ ಸೇತುವೆಯ ಕೆಳಗೆ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದಾರೆ ಎಂದು ಆಯೋಗ ತಿಳಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 20ರ ಅಡಿಯಲ್ಲಿ ಅಂತಹ ಜನರನ್ನು ‘ಮನೆರಹಿತ ಮತದಾರರು’ ಎಂದು ನೋಂದಾಯಿಸಲು ಅವಕಾಶವಿದೆ. ಇದಕ್ಕಾಗಿ ಸೆಪ್ಟೆಂಬರ್ 18 ಮತ್ತು 20 ರಂದು ಬೇಲಾ ಎಸ್ಟೇಟ್ ಹಾಗೂ ವಿಜಯ್ ಘಾಟ್‌ನಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದ್ದು, ಒಟ್ಟು 496 ಹೊಸ ಅರ್ಜಿಗಳು (ಫಾರ್ಮ್ 6) ಸ್ವೀಕೃತವಾಗಿವೆ. ಈ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಯಲ್ಲಿದ್ದು, ಅರ್ಹ ಮತದಾರರನ್ನು ಅವರ ಪ್ರಸ್ತುತ ವಾಸಸ್ಥಳದಲ್ಲೇ ಸೇರ್ಪಡೆ ಮಾಡಲಾಗುವುದು. ಜತೆಗೆ, ದೆಹಲಿ ವ್ಯಾಪ್ತಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 2026ರ ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದ್ದು, ಹೆಸರು ಬಿಟ್ಟುಹೋಗಿರುವವರು ಆನ್‌ಲೈನ್, ಆಫ್‌ಲೈನ್ ಅಥವಾ ಸಹಾಯವಾಣಿ (011-23933221) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.

ಸೋಶಿಯಲ್ ಮೀಡಿಯಾಗಳಲ್ಲಿ ಮಕ್ಕಳ ಸುರಕ್ಷತೆಗೆ ಕಾನೂನುಬದ್ಧ ಚೌಕಟ್ಟು ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ | Supreme Court

यमुना किनारे बेला एस्टेट में 728 लोग रहते हैं। SIR के बाद वोटर लिस्ट में सिर्फ़ एक नाम बचा – बाकी 727 नाम काट दिए गए।

ये लोग दशकों से यहाँ रह रहे हैं। 2024 के लोकसभा चुनाव और 2025 के दिल्ली चुनावों में वोट डाल चुके हैं। 2023 में इनके घर तोड़ दिए गए थे – पर ये कहीं नहीं गए, यहीं… pic.twitter.com/27cJZjqJg6

— Rahul Gandhi (@RahulGandhi) September 28, 2026

Tags: DelhiRahul Gandhivote theft
Previous Post

ಸೋಶಿಯಲ್ ಮೀಡಿಯಾಗಳಲ್ಲಿ ಮಕ್ಕಳ ಸುರಕ್ಷತೆಗೆ ಕಾನೂನುಬದ್ಧ ಚೌಕಟ್ಟು ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ | Supreme Court

Next Post

GOOD NEWS : ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ : ಕೇಂದ್ರ ಸರ್ಕಾರದಿಂದ ಕಬ್ಬಿನ FRP ₹365 ಕ್ಕೆ ಹೆಚ್ಚಳ

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Parents sell their one-month-old infant to buy gold jewelry and a smartphone

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

September 29, 2026
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Next Post
Sweet news for sugarcane growers Central Government hikes sugarcane FRP by ₹365

GOOD NEWS : ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ : ಕೇಂದ್ರ ಸರ್ಕಾರದಿಂದ ಕಬ್ಬಿನ FRP ₹365 ಕ್ಕೆ ಹೆಚ್ಚಳ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada