ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (congress govt) ಅಧಿಕಾರಕ್ಕೆ ಬಂದ ನಂತರದಲ್ಲಿ, ಇತ್ತೀಚಿನ ಗಣೇಶ ಹಬ್ಬದ (ganesha festival) ಸಂದರ್ಭದಲ್ಲಿ ರಾಜ್ಯದ ಬೇರೆ ಬೆರೆ ಕಡೆಗಳಲ್ಲಿ ನಡೆದ ಘಟನೆಗಳಿಗೆ ಸಂಬಂಧಪಟ್ಟಂತೆ ಮಂಗಳೂರು, ಚಿಕ್ಕಮಗಳೂರು, ನಾಗಮಂಗಲ (nagamangala) ಘಟನೆಗಳ ತನಿಖೆಯನ್ನ ಎನ್‌ಐಎಗೆ ವಹಿಸ್ಟೇಕು ಅಂತ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ನಮ್ಮ ದೇಶದ ಭದ್ರತೆ ದೃಷ್ಟಿಯಿಂದ ಇದೆಲ್ಲದರ ತನಿಖೆ ಎನ್‌ಐಎಗೆ (NIA) ನೀಡೇಕು. ಹೀಗೆ ಬಾಂಬ್ (Bomb) ತಯಾರಿಗೆ ಕಚ್ಚಾ ವಸ್ತುಗಳು ಎಲ್ಲಿಂದ ಬಂದ್ವು, ಜಾಗ ಕೊಟ್ಟಿದ್ದು ಯಾರು ಮತ್ತು ಎಲ್ಲಿ ಇದನ್ನು ತಯಾರು ಮಾಡಿದ್ರು ಎಂಬ ಪ್ರಶ್ನೆಗಳಿಗೆ ಉತ್ತರ ಬೆಕಿದೆ ಎಂದು ಆಗ್ರಹಿಸಿದ್ದಾರೆ.
ಈ ರೀತಿಯ ಸ್ಪೋಟಕಗಳನ್ನ ಇಲ್ಲಿನ ಮಸೀದಿಗಳಲ್ಲಿ ತಯಾರಿಸಿದ್ರಾ ಅಥವಾ ಇದೆಲ್ಲವನ್ನೂ ಹೊರಗಿಂದ ತಂದಿದ್ರಾ? ಅಂತ ಆರ್. ಅಶೋಕ್ (Rashok) ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಈ ಎಲ್ಲಾ ವಿಚಾರಗಳು ಹೊರಬರಬೇಕು ಅಂದ್ರೆ ಈ ಪ್ರಕರಣಗಳ ತನಿಖೆಯನ್ನು ಎನ್.ಐ.ಎ ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.