• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೈಲಹೊಂಗಲ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಪ್ರತಿಧ್ವನಿ by ಪ್ರತಿಧ್ವನಿ
January 8, 2026
in Top Story, ಕರ್ನಾಟಕ
0
ಬೈಲಹೊಂಗಲ ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ
Share on WhatsAppShare on FacebookShare on Telegram

ಬೆಳಗಾವಿ: ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿಯಿರುವ ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಬಾಯ್ಲರ್ ಸ್ಫೋಟ ಪ್ರಕರಣದಲ್ಲಿ (Boiler Explosion) ಚಿಕಿತ್ಸೆ ಫಲಿಸದೆ ಇಂದು ಒಂದೇ ದಿನ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಮೂಲಕ ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಈ ಘಟನೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ADVERTISEMENT
Zameer Ahmed on Ballari Banner Row: ಬಳ್ಳಾರಿ ಬ್ಯಾನರ್​ ಗಲಾಟೆಗೆ ಬಿಜೆಪಿಯವರೇ ಚಾಲನೆ ಕೊಟ್ಟಿದ್ದು ಎಂದ ಜಮೀರ್

ಅಕ್ಷಯ ತೋಪಡೆ, ದೀಪಕ್ ಮುನವಳ್ಳಿ, ಸುದರ್ಶನ ಬನೋಶಿ, ಬೈಲಹೊಂಗಲ ತಾಲೂಕಿನ ಅರವಳ್ಳಿ ನಿವಾಸಿ ಮಂಜುನಾಥ ಮಡಿವಾಳಪ್ಪ ಕಾಜಗಾರ್, ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ನಿವಾಸಿ ಭರತೇಶ ಸಾರವಾಡಿ, ತೇರದಾಳ–ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ, ಬಾಗಲಕೋಟೆ ಜಿಲ್ಲೆಯ ಮರೆಗುದ್ದಿ ಗ್ರಾಮದ ನಿವಾಸಿ ಗುರುಪಾದಪ್ಪ ತಮ್ಮನ್ನವರ್ ಮೃತ ದುರ್ದೈವಿ.

DK Shivakumar on HD Kumaraswamy : ಆದಷ್ಟು ಬೇಗ ಕುಮಾರಸ್ವಾಮಿ ಜೆಡಿಎಸ್‌ನ ಬಿಜೆಪಿ ಜೊತೆ ಸೇರಿಸಬಹುದು..! #jds

ಘಟನೆಯ ಹಿನ್ನೆಲೆ ಏನು..?

ಬುಧವಾರ ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯಲ್ಲಿ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಬಾಯ್ಲರ್‌ನ ವಾಲ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ಪರಿಣಾಮ ಕುದಿಯುತ್ತಿದ್ದ ಕಬ್ಬಿನ ಹಾಲು ಕಾರ್ಮಿಕರ ಮೈಮೇಲೆ ಬಿದ್ದಿದ್ದು, ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ಚಿಕಿತ್ಸೆ ಫಲಿಸದೆ ಇನ್ನೂ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂಬಂಧಿತ ಇನಾಮ್‌ದಾರ್ ಸಕ್ಕರೆ ಕಾರ್ಖಾನೆ ವಿಕ್ರಮ ಇನಾಮದಾರ್ ಅವರಿಗೆ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ.

DK Shivakumar on JDS : ದಳಪತಿಗೆ ಕೈ ಕೊಟ್ಟ ಜೆಡಿಎಸ್‌ ಮುಖಂಡರು..! #hdkumaraswamy #jds #lader

ಈ ದುರ್ಘಟನೆಗೆ ಸಂಬಂಧಿಸಿದಂತೆ ಮೃತ ಕಾರ್ಮಿಕರ ಕುಟುಂಬಸ್ಥರು ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ ಆಡಳಿತ ಸ್ಪಂದಿಸುತ್ತಿಲ್ಲ, ಸರ್ಕಾರದಿಂದಲೂ ಯಾವುದೇ ಪರಿಹಾರ ಘೋಷಣೆ ಆಗಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಯ್ಲರ್ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Tags: BelagaviDeathKarnatakaSugar Factory
Previous Post

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!

Next Post

ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡ ಹೊಂಬಾಳೆ ಫಿಲಂಸ್ ..

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post
ಬಹುನಿರೀಕ್ಷಿತ ಚಿತ್ರ ‘ರಾಜಾ ಸಾಬ್’ ಚಿತ್ರದ  ವಿತರಣಾ ಹಕ್ಕನ್ನು ಪಡೆದುಕೊಂಡ ಹೊಂಬಾಳೆ ಫಿಲಂಸ್ ..

ಬಹುನಿರೀಕ್ಷಿತ ಚಿತ್ರ 'ರಾಜಾ ಸಾಬ್' ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡ ಹೊಂಬಾಳೆ ಫಿಲಂಸ್ ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada