ತೆಲುಗಿನಲ್ಲಿ ಸ್ಟಾರ್ ಕೊರಿಯೋಗ್ರಾಫರ್ (Star Choreographer in Telugu) ಎನಿಸಿಕೊಂಡಿದ್ದ ಜಾನಿ ಮಾಸ್ಟರ್ (Johnny Master) ಈಗ ತಮಿಳು(Tamil), ಕನ್ನಡ (Kannada), ಹಿಂದಿಯಲ್ಲೂ ಬ್ಯುಸಿಯಾಗಿದ್ದಾರೆ. ಕನ್ನಡದ ದಿವಂಗತ ಸ್ಟಾರ್ ನಟ ಪುನೀರ್ ರಾಜ್ ಕುಮಾರ್ (Punith Rajkumar) ಅವರ ಯುವರತ್ನ(Yuvarathna) ಸಿನಿಮಾದಲ್ಲಿಯೂ ಡ್ಯಾನ್ಸ್ ಕೋರಿಯೋಗ್ರಾಫ್ ಮಾಡಿದ್ದಾರೆ. 70 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಜಾನಿ ಮಾಸ್ಟರ್ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ತೆಲುಗು(Telugu), ತಮಿಳು, ಕನ್ನಡದಲ್ಲಿ ಫುಲ್ ಡಿಮ್ಯಾಂಡ್ ಹೊಂದಿರುವ ಜಾನಿ ಮಾಸ್ಟರ್ ಈಗ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ.
ನ್ಯಾಯಮೂರ್ತಿ ಹೇಮಾ(Judge Hema) ಸಮಿತಿಯ ವರದಿ ಬಹಿರಂಗಗೊಂಡ ಬಳಿಕ ಚಿತ್ರರಂಗದಲ್ಲಿ ಭಾರೀ ಕೋಲಾಹಲ ಎದ್ದಿದ್ದು ಗೊತ್ತೇ ಇದೆ. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ (Sexual harassment) ಎದುರಿಸುತ್ತಿರುವ ಮಹಿಳೆಯರು ಒಬ್ಬೊಬ್ಬರಾಗಿ ಹೊರಬರುತ್ತಿದ್ದು, ಸಂಚಲನದ ಆರೋಪಗಳನ್ನು ಮಾಡುತ್ತಿದ್ದಾರೆ. ಸಂತ್ರಸ್ತರಲ್ಲಿ ಹಲವು ಹೀರೋಯಿನ್ ಗಳಿದ್ದು ಇದೀಗ ತಮ್ಮ ಕಹಿ ಅನುಭವ ಹಾಗೂ ಕಿರುಕುಳವನ್ನು ಧೈರ್ಯವಾಗಿ ಬಹಿರಂಗಪಡಿಸುತ್ತಿರುವುದು ಹಾಟ್ ಟಾಪಿಕ್ ಆಗಿದೆ. ಈಗಾಗಲೇ ಮಲಯಾಳಂನಲ್ಲಿ ಸಿದ್ದಿಕಿ, ಜಯಸೂರ್ಯ ಮತ್ತು ನಿರ್ದೇಶಕ ರಂಜಿತ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ನಾಯಕ ನಿವಿನ್ ಪೌಲಿ (Nivin Pouli) ವಿರುದ್ಧವೂ ಪ್ರಕರಣ ದಾಖಲಾಗಿದೆ. ಈಗ ತೆಲುಗಿನಲ್ಲೂ ಈ ಟ್ರೆಂಡ್ ಶುರುವಾಗಿದೆ.
ಪ್ರಕರಣದ ವಿವರ ನೋಡುವುದಾದರೆ, ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕೆಲ ದಿನಗಳಿಂದ ತನಗೆ ಲೈಂಗಿಕ ಕಿರುಕುಳ (Sexual harassment)ನೀಡುತ್ತಿದ್ದಾರೆ ಎಂದು ಮತ್ತೊಬ್ಬ ಮಹಿಳಾ ನೃತ್ಯ ನಿರ್ದೇಶಕಿ (21) ಪೊಲೀಸರಿಗೆ ದೂರು ನೀಡಿದ್ದಾರೆ. ಜಾನಿ ಮಾಸ್ಟರ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ನೃತ್ಯಗಾರ್ತಿಯೊಬ್ಬರು ರಾಯದುರ್ಗ ಪೊಲೀಸ್ ಠಾಣೆಯಲ್ಲಿ (Rayadurga Police Station) ದೂರು ದಾಖಲಿಸಿದ್ದಾರೆ. ತನ್ನ ಮೇಲೆ ಅತ್ಯಾಚಾರ ಎಸಗಿ ಗಾಯಗೊಳಿಸಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆನ್ನೈ(Chennai), ಮುಂಬೈ(Mumbai), ಹೈದರಾಬಾದ್ (Hyderabad) ಸೇರಿದಂತೆ ವಿವಿಧ ನಗರಗಳಲ್ಲಿ ಹೊರಾಂಗಣದಲ್ಲಿದ್ದಾಗ ಮತ್ತು ನಾರ್ಸಿಂಗಿಯಲ್ಲಿರುವ ತನ್ನ ನಿವಾಸದಲ್ಲಿ ಜಾನಿ ತನ್ನ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ರಾಯದುರ್ಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸದರಿ ಮಹಿಳೆ ನರಸಂಗಿ ನಿವಾಸಿಯಾಗಿರುವುದರಿಂದ ನರಸಂಗಿ ಪೊಲೀಸರಿಗೆ ಪ್ರಕರಣ ವರ್ಗಾಯಿಸಲಾಗಿದ್ದು, ಐಪಿಸಿ ಸೆಕ್ಷನ್ 376 (IPC 376), ಕ್ರಿಮಿನಲ್ ಬೆದರಿಕೆ (506) ಮತ್ತು ಸ್ವಯಂಪ್ರೇರಿತ ಗಾಯ (323) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.