ಪಂಜಾಬ್ನ ಪಟಿಯಾದಲ್ಲಿ ನಡೆದ ಖಲಿಸ್ತಾನ ಪರ-ವಿರೋಧಿ ಗುಂಪು ಘರ್ಷಣೆಯ ಪ್ರಮುಖ ಆರೋಪಿ ಬರ್ಜಿಂದರ್ ಸಿಂಗ್ ಪರ್ವಾನಾ ಅವರನ್ನು ಮೊಹಾಲಿಯಲ್ಲಿ ಪೊಲೀಸರು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಆರೋಪಿಯನ್ನು ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7:20ಕ್ಕೆ ವಿಸ್ತಾರಾ ವಿಮಾನದ ಮೂಲಕ ಮುಂಬೈಗೆ ಕರೆತರಲಾಯಿತು. ಇನ್ಸ್ಪೆಕ್ಟರ್ ಶಮೀಂದರ್ ಸಿಂಗ್ ನೇತೃತ್ವದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ಪಟಿಯಾಲ ತಂಡ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬರ್ಜಿಂದರ್ ಸಿಂಗ್ ರನ್ನು ಬಂಧಿಸಿದೆ.
ಶುಕ್ರವಾರ ಕಾಳಿ ಮಾತಾ ದೇವಸ್ಥಾನದ ಹೊರಗೆ ಖಲಿಸ್ತಾನ ಪರ-ವಿರೋಧಿ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾದ ನಂತರ ಪಟಿಯಾಲದಲ್ಲಿ ಉದ್ವಿಗ್ನತೆ ಉಂಟಾಗಿದೆ, ರ್ಯಾಲಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಐಜಿ (ಪಟಿಯಾಲ ಶ್ರೇಣಿ) ಮುಖ್ವಿಂದರ್ ಸಿಂಗ್ ಚಿನ್ನಾ ಅವರ ಪ್ರಕಾರ, ಪೊಲೀಸರು ನಿನ್ನೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ ಮತ್ತು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. “3 ಬಂಧಿತ ಆರೋಪಿಗಳು ಹರೀಶ್ ಸಿಂಗ್ಲಾ, ಕುಲದೀಪ್ ಸಿಂಗ್ ದಂತಾಲ್ ಮತ್ತು ದಲ್ಜಿತ್ ಸಿಂಗ್” ಎಂದು ಬಂಧಿತ ವ್ಯಕ್ತಿಗಳ ಹೆಸರನ್ನು ಪ್ರಕಟಿಸಿದರು.
ಈ ಪ್ರಕರಣದಲ್ಲಿ ಯಾವುದೇ ಆರೋಪಿಗಳನ್ನು ಬಿಡುವ ಮಾತಿಲ್ಲ ಮತ್ತು ಘಟನೆಯೊಂದಿಗೆ ಯಾವುದೇ ಸಂಬಂಧ ಹೊಂದಿರುವವರನ್ನು ಬಂಧಿಸಲಾಗುವುದು ಎಂದು ಐಜಿ ಪ್ರತಿಪಾದಿಸಿದರು.
ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸ್ ಇಲಾಖೆಯ ಮೂವರು ಉನ್ನತ ಅಧಿಕಾರಿಗಳನ್ನು ಬೇರೆಡೆಗೆ ಪಂಜಾಬ್ ಸರ್ಕಾರ ವರ್ಗಾವಣೆ ಮಾಡಿತ್ತು. ಘರ್ಷಣೆ ನಡೆದ ಪ್ರದೇಶವನ್ನು ಇಂಟರ್ನೆಂಟ್ ಸ್ಥಗಿತಗೊಳಿಸಿತ್ತು.