ಪತ್ನಿ ಮತ್ತು ಕುಟುಂಬದವರ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ ಟೆಕ್ಕಿ ಅತುಲ್ ಸುಭಾಷ್ (Atul subhash) ಅವರ ಅಂತ್ಯ ಕ್ರಿಯೆಯನ್ನು ಇಂದು ನೆರವೇರಿಸಲಾಗಿದೆ. ಆದ್ರೆ ಇದೆ ವೇಳೆ ಅತುಲ್ ಕುಟುಂಬಸ್ಥರು ಒಂದು ದೃಢ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಅತುಲ್ ಸುಭಾಷ್ ತಮ್ಮ ಡೆತ್ ನೋಟ್ (Death note) ಹಾಗೂ ವಿಡಿಯೋ ದಲ್ಲಿ ಹೇಳಿರುವಂತೆ, ತಮ್ಮ ಸಾವಿಗೆ ನ್ಯಾಯ ಸಿಗುವವರೆಗೆ ನನ್ನ ಅಸ್ತಿಯನ್ನು ವಿಸರ್ಜಿಸಬೇಡಿ ಎಂದು ಹೇಳಿದ್ದರು. ಹೀಗಾಗಿ ಕುಟುಂಬಸ್ಥರು ಯಾವುದೇ ಕಾರಣಕ್ಕೂ ಅಸ್ತಿ ವಿಸರ್ಜಿಸಲ್ಲ ಎಂದು ಹೇಳಿದ್ದಾರೆ.
ಒಂದುವೇಳೆ ಈ ಪ್ರಕರಣದಲ್ಲಿ ಅತುಲ್ ಪತ್ನಿ ಮತ್ತು ಕುಟುಂಬಸ್ಥರಿಗೆ ಶಿಕ್ಷೆ ಆಗದಿದ್ದಲ್ಲಿ ಆಗ ತನ್ನ ಅಸ್ಥಿಯನ್ನು ಕೋರ್ಟ್ ಮುಂಭಾಗ ಬಿಸಾಡುವಂತೆ ಅತುಲ್ ಹೇಳಿರುವ ಕಾರಣ ಕುಟುಂಬಸ್ಥರು ಅಸ್ತಿ ಯನ್ನು ಜೋಪಾನವಾಗಿ ಬಳಿಯೇ ಇಟ್ಟುಕೊಂಡಿದ್ದಾರೆ.