
ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಆರೋಪಿ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು. ಯಾವುದೇ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆನ್ನು ನೋವಿದೆ ಎಂದು ಮೆಡಿಕಲ್ ಬೇಲ್ ಪಡೆದು ಬಳ್ಳಾರಿ ಜೈಲಿನಿಂದ ಹೊರಬಂದಿದ್ದ ದಾಸ ದರ್ಶನ್ ಕಳೆದ 45 ದಿನಗಳಿಂದಲೂ ಸರ್ಜರಿ ಮಾಡಿಸಿಕೊಳ್ಳದೆ ಕಳ್ಳಾಟ ಆಡುತ್ತಿದ್ದನು.

ಇದರ ಬೆನ್ನಲ್ಲೆ ದರ್ಶನ್‌ಗೆ ರೆಗ್ಯುಲರ್ ಬೇಲ್ ಸಿಕ್ಕ ಹಿನ್ನಲೆಯಲ್ಲಿ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.ದರ್ಶನ್‌ಗೆ ನಟ ಧನ್ವೀರ್, ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜಿಎಸ್ ವೈದ್ಯರ ಸಲಹೆಯ ಮೇರೆಗೆ ಇನ್ನೂ ಮೂರು ತಿಂಗಳ ಕಾಲ ದರ್ಶನ್ ಫಿಸಿಯೋಥೆರಪಿಗೆ ಒಳಗಾಗಲಿದ್ದು, ನಂತರ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ ಎಂದರೆ ಮಾತ್ರ ಆಪರೇಶನ್ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.
ಬಿಜಿಎಸ್ ಆಸ್ಪತ್ರೆಯ ಪ್ರವೇಶ ದ್ವಾರದಿಂದ ನಟ ಕುಂಟುತ್ತಾ ಹೊರ ಬಂದಿದ್ದಾರೆ. ಆ ಬಳಿಕ ಕಾರ್‌ನಲ್ಲಿ ಮನೆಯತ್ತ ಸಾಗಿದರು.ದರ್ಶನ್‌ಗೆ ಈವರೆಗೂ ಶಸ್ತ್ರಚಿಕಿತ್ಸೆಯಾಗಿದೆಯೋ ಇಲ್ಲೋ ಎಂಬ ಬಗ್ಗೆ ವೈದ್ಯರಾಗಲಿ ಅಥವಾ ಕುಟುಂಬ ಸದಸ್ಯರಾಗಲಿ ಖಚಿತ ಮಾಹಿತಿ ನೀಡಿಲ್ಲ. ಶಸ್ತ್ರಚಿಕಿತ್ಸೆ ಮಾಡಿಲ್ಲ ಎಂದು ಕೆಲ ಮೂಲಗಳು ಹಾಗೂ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.




