• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬಜರಂಗದಳದ ಆಕ್ಷೇಪಣೆಗೆ ಮಣಿದು ಹಿಜಾಬ್, ಬುರ್ಖಾ ಧರಿಸಿದಂತೆ ಆದೇಶ ಹೊರಡಿಸಿದ ಪ್ರಾಂಶುಪಾಲರು!

ಪ್ರತಿಧ್ವನಿ by ಪ್ರತಿಧ್ವನಿ
February 15, 2022
in ದೇಶ
0
ಬಜರಂಗದಳದ ಆಕ್ಷೇಪಣೆಗೆ ಮಣಿದು ಹಿಜಾಬ್, ಬುರ್ಖಾ ಧರಿಸಿದಂತೆ ಆದೇಶ ಹೊರಡಿಸಿದ ಪ್ರಾಂಶುಪಾಲರು!
Share on WhatsAppShare on FacebookShare on Telegram

ಕರ್ನಾಟಕದಿಂದ ಆರಂಭವಾದ ಹಿಜಾಬ್‌ ವಿವಾದ ಈಗ ಮಧ್ಯಪ್ರವೇಶಕ್ಕೂ ಕಾಲಿಟ್ಟಿದ್ದು, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರವಾದ ದಾತಿಯಾದಲ್ಲಿ ಹಿಜಾಬ್‌ ಧರಿಸುವ ವಿಚಾರವಾಗಿ ಹೊಸದೊಂದು ವಿವಾದ ದೃಷ್ಟಿಯಾಗಿದೆ.

ADVERTISEMENT

ಬಜರಂಗದಳ ಮತ್ತು ದುರ್ಗಾ ವಾಹಿನಿ ಸದಸ್ಯರ ಆಕ್ಷೇಪಣೆಗೆ ಹಾಗೂ ಪ್ರತಿಭಟನೆಗೆ ಮಣಿದಿರುವ ಸ್ಥಳೀಯ ಸರ್ಕಾರಿ ಪಿಜಿ ಕಾಲೇಜಿನ ಪ್ರಾಂಶುಪಾಲರು ಕ್ಯಾಂಪಸ್‌ನಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಆದಾಗ್ಯೂ, ಮಂಗಳವಾರ, ಗೃಹ ಸಚಿವ ಮಿಶ್ರಾ ಅವರು ಹಿಜಾಬ್ ಅನ್ನು ನಿಷೇಧಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಹೇಳಿದ್ದಾರೆ. ಈ ಘಟನೆಯ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಯನ್ನು ಕೇಳಿಕೊಂಡಿದ್ದು, ಈಗ ಅದರ ವೀಡಿಯೊ ವೈರಲ್ ಆಗಿದೆ.

ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿರುವ ಕೆಲವು ಯುವಕರು ಮತ್ತು ಯುವತಿಯರು, ಬಲಪಂಥೀಯ ಸಂಘಟನೆಗಳಾದ ಬಜರಂಗದಳ ಮತ್ತು ದುರ್ಗಾ ವಾಹಿನಿಯ ಸದಸ್ಯರು ಹಿಜಾಬ್ ಮತ್ತು ಬುರ್ಖಾ ಧರಿಸಿ ಹುಡುಗಿಯರನ್ನು ಕರೆದು ‘ಜೈ ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ದಾತಿಯಾ ಕಾಲೇಜಿನ ವೀಡಿಯೊದಲ್ಲಿ ಕಾಣಬಹುದು. ಕ್ಯಾಂಪಸ್‌ಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಮತ್ತು ಕಾಲೇಜಿಗೆ ಹುಡುಗಿಯರು ಅದನ್ನು ಧರಿಸಿದರೆ, ಇತರ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್‌ಗಳನ್ನು ಧರಿಸುತ್ತಾರೆ ಎಂದು ಈ ಸದಸ್ಯರು ಕಾಲೇಜಿನಲ್ಲಿ ಧರಣಿ ನಡೆಸುತ್ತಿರುವುದನ್ನು ಮತ್ತೊಂದು ವೀಡಿಯೊ ತೋರಿಸಲಾಗಿದೆ.

ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗ ಗದ್ದಲದ ನಂತರ ಕಾಲೇಜಿನ ಪ್ರಾಂಶುಪಾಲರು ಈ ಆದೇಶ ಹೊರಡಿಸಿದ್ದು, ಯಾವುದೇ ಸಮುದಾಯವು ‘ಹಿಜಾಬ್‌ನಂತಹ’ ಯಾವುದೇ ವಿಶೇಷ ಉಡುಪುಗಳನ್ನು ಧರಿಸಬಾರದು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದೆ. “ಎಲ್ಲಾ ವಿದ್ಯಾರ್ಥಿಗಳು ಉತ್ತಮ ಮತ್ತು ಸುಸಂಸ್ಕೃತ ಉಡುಪುಗಳಲ್ಲಿ ಬರಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

दतिया के पीजी कॉलेज का वीडियो सोशल मीडिया पर वायरल हो रहा है। प्रिंसिपल द्वारा निकाले गए आदेश की जांच के लिए दतिया कलेक्टर को निर्देशित किया है।

प्रदेश सरकार पहले ही स्पष्ट कर चुकी है #Hijab पर बैन को लेकर सरकार के पास कोई भी प्रस्ताव विचाराधीन नहीं है इसलिए कोई भ्रम ना फैलाएं। pic.twitter.com/i6S1EOnlrk

— Dr Narottam Mishra (@drnarottammisra) February 15, 2022
ಈ ವಿವಾದಕ್ಕೆ ಗೃಹ ಸಚಿವರು ಮಂಗಳವಾರ ಸ್ಪಷ್ಟನೆ ನೀಡಿ “ನಮ್ಮ ದಾತಿಯಾ ಕೋಮು ಸೌಹಾರ್ದತೆಯ ಜೀವಂತ ಉದಾಹರಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ನೋಡಿದ್ದೇನೆ. ಕಾಲೇಜಿನ ಪ್ರಾಂಶುಪಾಲರು ಹೇಗೆ, ಏಕೆ ಮತ್ತು ಯಾವ ಸಂದರ್ಭದಲ್ಲಿ ಇಂತಹ ಆದೇಶ ಹೊರಡಿಸಿದ್ದಾರೆ ಎಂಬ ಬಗ್ಗೆ ತಕ್ಷಣ ಗಮನಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಹಿಜಾಬ್ ನಿಷೇಧದ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಆದ್ದರಿಂದ ಯಾವುದೇ ತಪ್ಪು ಮಾಹಿತಿಗಳನ್ನು ಹರಡಬೇಡಿ ಅಥವಾ ಯಾವುದೇ ತಪ್ಪುದಾರಿಗೆಳೆಯುವ ಕ್ರಮಗಳನ್ನು ತೆಗೆದುಕೊಳ್ಳಬೇಡಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಮಿಶ್ರಾ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Tags: Bajrang DalDurga Vahinikesari shalyaMadhya PradeshNarottam Mishraprincipalಕರ್ನಾಟಕಕೇಸರಿ ಶಾಲುಗೃಹ ಸಚಿವದುರ್ಗಾ ವಾಹಿನಿನರೋತ್ತಮ್ ಮಿಶ್ರಾ Hijabಪ್ರಾಂಶುಪಾಲರುಬಜರಂಗದಳಮಧ್ಯಪ್ರದೇಶಹಿಜಾಬ್‌ ವಿವಾದ
Previous Post

ಪಂಚಮಸಾಲಿ ಸಮುದಾಯ 2 ಎ ಸೇರಿಸುವ ಕುರಿತು ನಿಷ್ಪಕ್ಷಪಾತ ವರದಿ ನೀಡುವೆ : ಜಯಪ್ರಕಾಶ್ ಹೆಗ್ಡೆ ಭರವಸೆ

Next Post

ಯುಪಿಯಲ್ಲಿ ಕೋಮು ವಿವಾದ ಸೃಷ್ಟಿಗೆ ಹೊಸ ಅಸ್ತ್ರಗಳ ಮೊರೆ ಹೋದ ಬಿಜೆಪಿ

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ :  ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ : ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

May 12, 2026
Next Post
ಬಹುಮತದ ಕೊರತೆ : ಪರಿಷತ್ ನಲ್ಲಿ ಮತಾಂತರ ಮಸೂದೆ ಮಂಡನೆಯಿಂದ ಹಿಂದೆ ಸರಿದ BJP ಸರ್ಕಾರ!

ಯುಪಿಯಲ್ಲಿ ಕೋಮು ವಿವಾದ ಸೃಷ್ಟಿಗೆ ಹೊಸ ಅಸ್ತ್ರಗಳ ಮೊರೆ ಹೋದ ಬಿಜೆಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada