ನವದೆಹಲಿ : ಇಂಧನ ಮಿತ ಬಳಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿರುವ ಬಳಿಕ ಭಾರತದಲ್ಲಿ ಇಂಧನದ ಅಭಾವ ಕಾಡುತ್ತಿದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಅನಗತ್ಯವಾಗಿ ವಾಹನಗಳ ಓಡಾಟವನ್ನು ತಪ್ಪಿಸುವಂತೆ ಮೋದಿ ಸಲಹೆ ನೀಡಿದ ನಂತರ ಇಂಧನ ಅಭಾವದ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

ಆದರೆ ಆಯಕಟ್ಟಿನ ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಸುತ್ತ ಹಲವು ಪ್ರಶ್ನೆಗಳು ಮೂಡಿರುವುದರ ನಡುವೆಯೇ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಹತ್ವದ ಮಾಹಿತಿ ನೀಡಿದ್ದು, ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ ಮಾತನಾಡಿ, ದೇಶಾದ್ಯಂತ ನಿರಂತರ ಇಂಧನ ಪೂರೈಕೆಯಲ್ಲಿ ಕಚ್ಚಾ ತೈಲ, ಎಲ್‌ಎನ್‌ಜಿ ಮತ್ತು ಎಲ್‌ಪಿಜಿಯ ಸಾಕಷ್ಟು ಮೂಲಗಳನ್ನು ಹೊಂದಿದ್ದೇವೆ. ನಾಗರಿಕರು ಭಯಪಡಬೇಡಿ. ಹಲವಾರು ದೇಶಗಳು ಕೊರತೆ ಮತ್ತು ತೀವ್ರ ಬೆಲೆ ಏರಿಕೆಯ ಭಾರವನ್ನು ಅನುಭವಿಸುತ್ತಿವೆ. ಆದರೆ ಭಾರತ ಇಂಧನ ಸ್ಥಿರತೆಯನ್ನು ಯಶಸ್ವಿಯಾಗಿ ಕಾಯ್ದುಕೊಂಡಿದೆ ಎಂದು ತಿಳಿಸಿದ್ದಾರೆ.
ಭಾರತವು ಪ್ರಸ್ತುತ ಸುಮಾರು 60 ದಿನಗಳ ಕಚ್ಚಾ ತೈಲ ನಿಕ್ಷೇಪಗಳು, 60 ದಿನಗಳ ಎಲ್‌ಎನ್‌ಜಿ ದಾಸ್ತಾನುಗಳು ಮತ್ತು 45 ದಿನಗಳ ಎಲ್‌ಪಿಜಿ ನಿಕ್ಷೇಪಗಳನ್ನು ಹೊಂದಿದೆ. ಜಾಗತಿಕ ಇಂಧನ ಪೂರೈಕೆ ಸರಪಳಿಗಳಲ್ಲಿನ ದೀರ್ಘಕಾಲದ ಸಮಸ್ಯೆಗಳ ಹೊರತಾಗಿಯೂ ದೇಶವನ್ನು ಸುರಕ್ಷಿತ ಸ್ಥಾನದಲ್ಲಿ ಇರಿಸಿದೆ ಎಂದು ಪುರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಶೇ.1.5 ತುಟ್ಟಿಭತ್ಯೆ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್
ನಾಲ್ಕು ವರ್ಷಗಳಲ್ಲಿ ಬೆಲೆ ಏರಿಕೆಯಾಗಿಲ್ಲ..
ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ಚಿಲ್ಲರೆ ಇಂಧನ ಬೆಲೆಗಳು ಏರಿಕೆಯಾಗಿಲ್ಲ, ಕಳೆದ ನಾಲ್ಕು ವರ್ಷಗಳಲ್ಲಿ, ಬೆಲೆಗಳಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಬೆಲೆಗಳು ಶೇಕಡಾ 50 ರಿಂದ 60 ರಷ್ಟು ಏರಿಕೆಯಾಗಿರುವ ಅನೇಕ ದೇಶಗಳಿಗಿಂತ ಭಿನ್ನವಾಗಿ, ಭಾರತವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದೆ ಎಂದು ಹೇಳಿದ್ದಾರೆ.
ಬಿಕ್ಕಟ್ಟಿನ ನಡುವೆಯೂ ದೇಶೀಯ ಎಲ್‌ಪಿಜಿ ಉತ್ಪಾದನೆಯಲ್ಲಿ ಹೆಚ್ಚಳ
ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸನ್ನಿವೇಶ ಎದುರಾದರೂ ಸಹ ನಮ್ಮಲ್ಲಿ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಭಾರತವು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿದೆ. ಬಿಕ್ಕಟ್ಟಿನ ಅವಧಿಯಲ್ಲಿ ಭಾರತದ ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 36,000 ಮೆಟ್ರಿಕ್ ಟನ್‌ಗಳಿಂದ 54,000 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.

ನಮ್ಮಲ್ಲಿ ಎಲ್ಲಿಯೂ ಯಾವುದೇ ಕೊರತೆಯಿಲ್ಲ ಎಂದು ನೀವು ನೋಡಿರಬೇಕು. ಕಾರ್ಯತಂತ್ರದ ಯೋಜನೆ ಮತ್ತು ಪೂರೈಕೆ ನಿರ್ವಹಣೆ ದೇಶಾದ್ಯಂತ ಇಂಧನ ಪೊರೈಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿದೆ. ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆ ತೈಲ ಮಾರುಕಟ್ಟೆ ಕಂಪನಿಗಳು ಆರ್ಥಿಕ ಒತ್ತಡದಲ್ಲಿವೆ ಎಂದು ಹರ್ದೀಪ್ ಸಿಂಗ್ ಪುರಿ ಒಪ್ಪಿಕೊಂಡಿದ್ದಾರೆ.
ತೈಲ ಕಂಪನಿಗಳು ಪ್ರತಿದಿನ ಸುಮಾರು 1,000 ಕೋಟಿ ರೂ. ನಷ್ಟ ಅನುಭವಿಸುತ್ತಿವೆ, ಒಟ್ಟು 1.98 ಲಕ್ಷ ಕೋಟಿ ರೂ.ಗಳ ಅಂಡರ್-ರಿಕವೇಶನ್ ಆಗುತ್ತಿದೆ ಹವಾಮಾನ ವೈಪರೀತ್ಯ ಮತ್ತು ಬೇಡಿಕೆ ವಿಚಾರದಲ್ಲಿ ಸಮರ್ಪಕ ನಿರ್ವಹಣೆಯಿಂದಾಗಿ ಎಲ್‌ಪಿಜಿ ಬೇಡಿಕೆ ಸುಮಾರು 90,000 ಮೆಟ್ರಿಕ್ ಟನ್‌ಗಳಿಂದ ಸುಮಾರು 75,000 ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ ಎಂದು ತಿಳಿಸಿದ್ದಾರೆ.
ಬಿಕ್ಕಟ್ಟು ಹೀಗೆ ಮುಂದುವರೆದರೆ ಇಂಧನ ಬಳಕೆಯ ಎಚ್ಚರಿಕೆ..
ತೈಲ ಕಂಪನಿಗಳೊಂದಿಗೆ ಸಮನ್ವಯ ನಡೆಸಿ ಸರ್ಕಾರವು ಪ್ರತಿದಿನವೂ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ. ಜಾಗತಿಕ ಬಿಕ್ಕಟ್ಟು ದೀರ್ಘಕಾಲದವರೆಗೆ ಮುಂದುವರಿದರೆ ಸರ್ಕಾರವು ಜೀವನಶೈಲಿ ಮತ್ತು ಇಂಧನ ಬಳಕೆಯಲ್ಲಿ ಸ್ವಯಂಪ್ರೇರಿತ ಮಿತಗೊಳಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಿ ಮೋದಿ ಸಲಹೆಗಳನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಮರ್ಥಿಸಿಕೊಂಡಿದ್ದಾರೆ.






