ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂಬ ಹೇಳಿಕೆ ಬೆನ್ನಲ್ಲಿಯೇ ಇದೀಗ ಅಡುಗೆ ಎಣ್ಣೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ಭಾನುವಾರಷ್ಟೇ ಹೈದ್ರಾಬಾದ್‌ನಲ್ಲಿ ಮಾತನಾಡಿದ್ದ ಮೋದಿ, ದೇಶದ ಜನರಿಗೆ ಕೆಲವು ತ್ಯಾಗದ ಸೂತ್ರಗಳನ್ನು ಹೇಳಿದ್ದರು. ಇಂಧನ ಮಿತಬಳಕೆ, ಚಿನ್ನ ಖರೀದಿಸಬೇಡಿ, ಅನಗತ್ಯ ದುಂದು ವೆಚ್ಚಕ್ಕೆ ಕಡಿವಾಣ ಎಂಬ ಸಲಹೆಗಳನ್ನು ನೀಡಿದ್ದರು.

ಆದರೆ ಮೋದಿ ಹೇಳಿಕೆಯು ನಿಧಾನವಾಗಿ ಜನರ ಜೀವನದ ಮೇಲೆ ಪರಿಣಾಮ ಬೀರಲು ಶುರುವಾಗಿದೆ. ಅಡುಗೆ ಎಣ್ಣೆಯ ಬಳಕೆ ನಿಯಂತ್ರಿಸಿ ಎಂದು ಹೇಳಿದ್ದ ಮೋದಿ ಮಾತಿನಿಂದ ಎಣ್ಣೆ ಬೆಲೆ ಇಳಿಕೆ ಕಂಡಿದ್ದು, ಆದರೆ ಅಕ್ಕಿಯ ಬೆಲೆಯಲ್ಲಿ ಏರಿಕೆಯಾಗಿದೆ.
ಇನ್ನೂ ಎಲ್ಲಾ ಬ್ರ್ಯಾಂಡ್‌ನ ಅಡುಗೆ ಎಣ್ಣೆಗಳಲ್ಲೂ 1 ಲೀಟರ್‌ಗೆ 3 ರೂಪಾಯಿಯಿಂದ 5 ರೂಪಾಯಿವರೆಗೂ ಕಡಿಮೆಯಾಗಿದೆ. ಒಂದು ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆ ಕಂಡಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆಯಾಗುವ ಸಾಧ್ಯತೆಯ ಇದೆ ಎನ್ನಲಾಗಿದೆ. ಪೊರೈಕೆಯಲ್ಲಿ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣವಾಗಿದೆ.
ಇದನ್ನೂ ಓದಿ : “ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”
ಎಣ್ಣೆ ಬೆಲೆಯಲ್ಲಿ ಇಳಿಕೆಯಾಗಿದ್ದು ಒಂದೆಡೆಯಾದರೆ, ಎಲ್ಲಾ ವಿಧದ ಅಕ್ಕಿ ಬೆಲೆಯಲ್ಲಿ ಶೇ. 10% ನಷ್ಟು ಏರಿಕೆಯಾಗಿದೆ. ಬೇರೆ ದೇಶಗಳಿಗೆ ನಮ್ಮ ರಾಜ್ಯದ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ರಪ್ತಾಗುತ್ತಿದೆ. ಆದರೆ ಹಳೆಯ ಅಕ್ಕಿ ಸಪ್ಲೈ ಕಡಿಮೆಯಾಗಿರೋದೇ ಕಾರಣವೆಂದು ಹೇಳಲಾಗಿದೆ. ಬಾಸ್ಮತಿ ಹಾಗೂ ಜೀರಾ ರೈಸ್‌ನಲ್ಲಿ ಕೆ.ಜಿಗೆ 40 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಎಷ್ಟಿದೆ ಅಡುಗೆ ಎಣ್ಣೆಯ ಬೆಲೆ..?
ಅಡುಗೆ ಎಣ್ಣೆ – ಹಳೆಯ ದರ (1 ಲೀ.) – ಹೊಸ ದರ (1 ಲೀ.)
ಫಾಮ್ ಆಯಿಲ್ – 143 ರೂ. – 141 ರೂ.
ಸನ್ ಪ್ಯೂರ್ – 170 ರೂ. – 167 ರೂ.
ಕಡಲೆಕಾಯಿ – 190 ರೂ. – 185 ರೂ
ಅಕ್ಕಿ ಬೆಲೆ ಎಷ್ಟಿದೆ..?
ಅಕ್ಕಿ – ಹಳೆಯ ದರ (1 ಕೆ.ಜಿಗೆ) – ಹೊಸ ದರ (1 ಕೆ.ಜಿಗೆ)
ಬಾಸ್ಮತಿ ರೈಸ್ – 90 ರೂ. – 115 ರೂ.
ಜೀರಾ ರೈಸ್ – 180 ರೂ. – 220 ರೂ.
ಸೋನಾಮಸೂರಿ – 40 ರೂ. – 45 ರೂ.
ಬುಲೆಟ್ ರೈಸ್ – 65 ರೂ. – 75 ರೂ.






