ಅಸ್ಸಾಂ, ಪುದುಚೇರಿ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರ ವ್ಯಸ್ತವಾಗಿರಬೇಕಾದರೆ ಭಾರತದ ರೈತರು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಕ್ಕಾಗಿ ದೆಹಲಿಯ ಗಡಿಯಲ್ಲಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಏಪ್ರಿಲ್ 1, 2021 ರಂದು ಧಾನ್ಯಗಳ ಸಂಗ್ರಹ ಸಾರ್ವಕಾಲಿಕ ಉನ್ನತ ಮಟ್ಟವನ್ನು 772.33 ಲಕ್ಷ ಟನ್ ತಲುಪಿದೆ.
ಮೇಲಿನ ಅಂಕಿ ಅಂಶ ತೋರಿಸಿದಂತೆ, ಭಾರತದಲ್ಲಿ 2015 ರ ಜನವರಿಯಲ್ಲಿ ನಿಗದಿಪಡಿಸಿದ ಬಫರ್ ಮಾನದಂಡಗಳಿಗಿಂತ 3.5 ಪಟ್ಟು ಹೆಚ್ಚು ಧಾನ್ಯಗಳ ಸಂಗ್ರಹವಾಗಿದೆ.
2020-21ರಲ್ಲಿ ಮಧ್ಯಪ್ರದೇಶದಲ್ಲಿ 129.42 ಲಕ್ಷ ಟನ್ ಗೋಧಿ ಸಂಗ್ರಹವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು 67.25 ಲಕ್ಷ ಟನ್‌ಗಿಂತ ಹೆಚ್ಚಾಗಿದೆ. ಗೋಧಿ ದಾಸ್ತಾನು ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಖಾರಿಫ್ ಮಾರುಕಟ್ಟೆ ಯಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಅಕ್ಕಿ ಖರೀದಿ ಕಳೆದ ವರ್ಷ 393.68 ಲಕ್ಷ ಟನ್ ಇದ್ದರೆ ಈ ವರ್ಷ 466.92 ಲಕ್ಷ ಟನ್ ಆಗಿದೆ. ಬಿಹಾರ, ಒಡಿಶಾ, ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಅಕ್ಕಿ ಸಂಗ್ರಹವಾಗಿರುವುದು ಈ ಹೆಚ್ಚಳಕ್ಕೆ ಕಾರಣವಾಗಿದೆ.
ಕಳೆದ ವರ್ಷ ಕೂಡ ಕೇಂದ್ರದ ಧ್ಯಾನ ಸಂಗ್ರಹ ಇದೇ ರೀತಿ ಹೆಚ್ಚಾಗಿದ್ದತ್ತು. ಆಗ ಸರ್ಕಾರವು ಅವುಗಳನ್ನು ‘ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ’ (ಪಿಎಂಜಿಕೆಎ) ಅಡಿಯಲ್ಲಿ ಉಚಿತ ವಿತರಣೆಗೆ ಬಳಸಿಕೊಂಡಿತು ಮತ್ತು 299.09 ಲಕ್ಷ ಟನ್ ಗೋಧಿ ಮತ್ತು ಅಕ್ಕಿಯನ್ನು ಪಡಿತರ ಕಾರ್ಡು ಹೊಂದಿರುವವರಿಗೆ ಉಚಿತವಾಗಿ ವಿತರಿಸಲಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ಆಹಾರ ಸಬ್ಸಿಡಿಯ ಬಾಕಿ ಹಣವನ್ನು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ವಿಕೇಂದ್ರೀಕೃತ ಖರೀದಿ (ಡಿಸಿಪಿ) ಕೇಂದ್ರಗಳಿಗೆ ಪಾವತಿಸಿಲ್ಲ. 2020-21ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರ ಎಫ್‌ಸಿಐಗೆ 3.44 ಲಕ್ಷ ಕೋಟಿ ರೂ ಗಳನ್ನು ಮೀಸಲಿಟ್ಟಿದೆ.
ಆದರೆ, ಮಾರ್ಚ್ 31, 2021 ರಂದು ಸರ್ಕಾರವು 1.18 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಆಹಾರ ಸಹಾಯಧನವನ್ನು ಬಿಡುಗಡೆ ಮಾಡಿತು. ಈ ಪ್ರಕ್ರಿಯೆಯಲ್ಲಿ, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಯಿಂದ ಪಡೆದ ಸಾಲಗಳು ಸೇರಿದಂತೆ ಎಫ್‌ಸಿಐನ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅಂದಾಜು ಸಂಗ್ರಹವು 604 ಲಕ್ಷ ಟನ್ ಮತ್ತು 659 ಲಕ್ಷ ಟನ್ ನಡುವೆ ಇರುತ್ತದೆ. ಈ ವರ್ಷ ಯಾವುದೇ ಹೆಚ್ಚುವರಿ ಹಂಚಿಕೆಗಳನ್ನು ಮಾಡದಿದ್ದರೆ ಸಂಗ್ರಗ ಇದೇ ವ್ಯಾಪ್ತಿಯಲ್ಲಿ ಉಳಿಯುವ ಸಾಧ್ಯತೆಯಿದೆ. ಆ ಪರಿಸ್ಥಿತಿಯಲ್ಲಿ, ಸರ್ಕಾರವು ಪಿಡಿಎಸ್ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013) ಅಡಿಯಲ್ಲಿ ಅದರ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಸಂಗ್ರಹ ಹೊಂದಿದಂತಾಗುತ್ತದೆ.
ಇದರ ನಿರ್ವಹಣೆ ಮತ್ತು ವಿಲೇವಾರಿ ಸರ್ಕಾರಕ್ಕೆ ತಲೆನೋವಾಗಿದ್ದು ಸಾರ್ವಜನಿಕರಿಗೆ, ಈಗಿರುವಂತೆ ಗೋಧಿಯನ್ನು ರೂಪಾಯಿ ಎರಡರಂತೆ ಮತ್ತು ಅಕ್ಕಿಯನ್ನು ರೂ ಮೂರರಂತೆ ವಿತರಿಸಿದರೆ ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಇದರ ಹೊರತಾಗಿಯೂ ಭಾರತಕ್ಕೆ ತನ್ನಲ್ಲಿರುವ ಸಂಗ್ರಹವನ್ನು ವಿದೇಶಕ್ಕೆ ರಪ್ತು ಮಾಡುವ ಆಯ್ಕೆಯಿದೆ. ಆದರೆ ಹೀಗೆ ಮಾಡಿದರೆ, ಉತ್ಪಾದನಾ ಮೌಲ್ಯದ 10% ಗಿಂತ ಅಧಿಕ ಬೆಂಬಲ ಬೆಲೆ ಮಾತ್ರ ನೀಡಬೇಕು ಎಂಬ ಅಂತರರಾಷ್ಟ್ರೀಯ ಒಪ್ಪಂದವನ್ನು ಮುರಿದಂತಾಗುತ್ತದೆ.
ಸರ್ಕಾರದ ಮುಂದಿರುವ ಮೂರನೆಯ ಆಯ್ಕೆಯು ಆಹಾರ ಧಾನ್ಯಗಳನ್ನು ಮಿತ್ರ ದೇಶಗಳಿಗೆ ಉಡುಗೊರೆಯಾಗಿ ರಫ್ತು ಮಾಡುಬುದು. ಹಿಂದೆ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವಾರು ನೆರೆಯ ಮತ್ತು ಆಫ್ರಿಕನ್ ದೇಶಗಳಿಗೆ ಭಾರತ ಗೋಧಿ ಮತ್ತು ಅಕ್ಕಿಯನ್ನು ಉಡುಗೊರೆಯಾಗಿ ನೀಡಿತ್ತು. ಆದರೆ ಇದು ಸಹ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ನಾಲ್ಕನೇ ಆಯ್ಕೆಯು ಇಥನಾಲ್ ಉತ್ಪಾದನೆಗೆ ತನ್ನಲ್ಲಿರುವ ಧಾನ್ಯಗಳನ್ನು ನೀಡುವುದು. ಆದರೆ ಇದು ನೈತಿಕವಾಗಿ ಸರಿಯಲ್ಲ ಎನ್ನುವ ಕೂಗು ಹಿಂದೆಯೇ ಎದ್ದಿತ್ತು.





