• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜೂನ್14‌, ವಿಶ್ವ ರಕ್ತದಾನಿಗಳ ದಿನ: ರಕ್ತದಾನದಿಂದ ರೋಗಿಗಷ್ಟೇ ಅಲ್ಲ, ದಾನಿಗೂ ಇವೆ ಪ್ರಯೋಜನಗಳು

ಫಾತಿಮಾ by ಫಾತಿಮಾ
June 14, 2021
in ಅಭಿಮತ
0
ಜೂನ್14‌, ವಿಶ್ವ ರಕ್ತದಾನಿಗಳ ದಿನ:  ರಕ್ತದಾನದಿಂದ ರೋಗಿಗಷ್ಟೇ ಅಲ್ಲ, ದಾನಿಗೂ ಇವೆ ಪ್ರಯೋಜನಗಳು
Share on WhatsAppShare on FacebookShare on Telegram

ರಕ್ತದ ಸುರಕ್ಷಿತ ವರ್ಗಾವಣೆ, ಸಂರಕ್ಷಣೆಯ ಅಗತ್ಯತೆ ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳಿಗೆ ಸ್ವಯಂಪ್ರೇರಿತ ರಕ್ತದಾನಿಗಳು ನೀಡುವ ನಿರ್ಣಾಯಕ ಕೊಡುಗೆಯ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಜೂನ್ 14ನ್ನು ರಕ್ತದಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ADVERTISEMENT

ಮೊದಲ ವಿಶ್ವ ರಕ್ತದಾನಿಗಳ ದಿನವನ್ನು 2004 ರಲ್ಲಿ ಡಬ್ಲ್ಯುಎಚ್‌ಒ ಆಚರಿಸಿತು ಮತ್ತು ಇದನ್ನು 2005 ರಲ್ಲಿ 58 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ವಾರ್ಷಿಕ ಜಾಗತಿಕ ಕಾರ್ಯಕ್ರಮವೆಂದು ಘೋಷಿಸಲಾಯಿತು. ಈ ದಿನವನ್ನು ಆಸ್ಟ್ರಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೈನರ್ ಅವರ ಜನ್ಮ ವಾರ್ಷಿಕೋತ್ಸವದಂದು ಆಚರಿಸಲಾಗುತ್ತದೆ. ಅವರನ್ನು ಆಧುನಿಕ ರಕ್ತ ವರ್ಗಾವಣೆಯ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಸ್ವಯಂಪ್ರೇರಿತ, ಸಂಭಾವನೆ ಪಡೆಯದ ರಕ್ತದಾನಿಗಳಿಂದ ರಕ್ತ ಸಂಗ್ರಹವನ್ನು ಹೆಚ್ಚಿಸಲು ಸರ್ಕಾರಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳಿಗೆ ಸಮರ್ಪಕ ಸಂಪನ್ಮೂಲಗಳನ್ನು ಒದಗಿಸಲು ಮತ್ತು ಸ್ಥಳ ವ್ಯವಸ್ಥೆಗಳನ್ನು ಹಾಗೂ ಮೂಲಸೌಕರ್ಯಗಳನ್ನು ಒದಗಿಸಲು ಈ ದಿನವು ಅವಕಾಶ ನೀಡುತ್ತದೆ.

WHO ಪ್ರಕಾರ, ಸುರಕ್ಷಿತ ರಕ್ತ ಸಂಗ್ರಹ ಮತ್ತು ವರ್ಗಾವಣೆಯು ಸಾರ್ವಜನಿಕ ಆರೋಗ್ಯದ ನಿರ್ಣಾಯಕ ಅಂಶಗಳಾಗಿವೆ. ರಕ್ತದ ಅವಶ್ಯಕತೆ ಸಾರ್ವತ್ರಿಕವಾಗಿದ್ದು, ರಕ್ತದಾನಿಗಳು ಲಕ್ಷಾಂತರ ಜೀವಗಳನ್ನು ಉಳಿಸುತ್ತಾರೆ ಮತ್ತು ಪ್ರತಿದಿನ ಅನೇಕ ರೋಗಿಗಳ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತಾರೆ. ‘Give blood and keep the world beating’ ಎಂಬುವುದು 2021ರ ರಕ್ತದಾನ ದಿನದ ಘೋಷಣಾವಾಕ್ಯವಾಗಿದೆ.

ಕರೋನವೈರಸ್ ಸಾಂಕ್ರಾಮಿಕದಲ್ಲಿ ಈ ಅಗತ್ಯ ಸೇವೆಯ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ. ಸಾಂಕ್ರಾಮಿಕ ರೋಗದುದ್ದಕ್ಕೂ ಲಾಕ್ಡೌನ್ ಮತ್ತು ಇತರ ಸವಾಲುಗಳ ಹೊರತಾಗಿಯೂ, ಅನೇಕ ದೇಶಗಳಲ್ಲಿ ರಕ್ತದಾನಿಗಳು, ವಿಶೇಷವಾಗಿ ಭಾರತದಲ್ಲಿ‌ ರಕ್ತ ವರ್ಗಾವಣೆ ಅಗತ್ಯವಿರುವ ರೋಗಿಗಳಿಗೆ ರಕ್ತ ಮತ್ತು ಪ್ಲಾಸ್ಮಾವನ್ನು ದಾನ ಮಾಡುವುದನ್ನು ಮುಂದುವರೆಸಿದ್ದರು.

ಕಳೆದ ತಿಂಗಳು ದಿ ಲ್ಯಾನ್ಸೆಟ್ ರಿಕವರಿ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ -19 ಚಿಕಿತ್ಸೆಗಾಗಿ ಪ್ಲಾಸ್ಮಾವನ್ನು ಅದರ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ಗಳಿಂದ ತೆಗೆದುಹಾಕಿದೆ. ಆದರೆ ಕಳೆದ ಒಂದು ವರ್ಷದಿಂದ ಪ್ಲಾಸ್ಮಾವನ್ನೂ ಚಿಕಿತ್ಸೆಗಾಗಿ ಬಳಸುತ್ತಿದ್ದಾಗ ರಕ್ತದಾನಿಗಳು ಗೈದ ಸೇವೆ ಅಪಾರ.

ಅಲ್ಲದೆ, ಆರೋಗ್ಯ ಮೂಲಸೌಕರ್ಯ‌ ಕ್ಷೇತ್ರವು ಕಳೆದೊಂದು ವರ್ಷದಿಂದ ಕೋವಿಡ್ ಪ್ರಕರಣಗಳಿಂದ ತುಂಬಿ ತುಳುಕುತ್ತಿರುವ ಸಮಯದಲ್ಲಿ ಥಲಸ್ಸೆಮಿಯಾ, ರಕ್ತಹೀನತೆಗಳಂತಹ ಇತರ ಮಾರಣಾಂತಿಕ ವೈದ್ಯಕೀಯ ಪರಿಸ್ಥಿತಿಗಳ ರೋಗಿಗಳು ನಿರ್ಣಾಯಕ ವೈದ್ಯಕೀಯ ಸೇವೆಯನ್ನು ಪಡೆಯುವಲ್ಲಿಯೂ ರಕ್ತದಾನಿಗಳ ಶ್ರಮ ಅಪಾರ. ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯು ಮಹಿಳೆಯರ ಪ್ರಾಣದ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಪ್ರಸವಾನಂತರದ ರಕ್ತಸ್ರಾವವು ತಾಯಿಯ ಸಾವಿಗೆ ಕೆಲವೊಮ್ಮೆ ಕಾರಣವಾಗುವುದೂ ಇದೆ. ಇಂತಹ ಸಂದರ್ಭದಲ್ಲಿ ದಾನಿಗಳಿಂದ ಸಂಗ್ರಹಿಸಿದ ರಕ್ತ ಅನೇಕ ತಾಯಂದಿರ ಜೀವ ಕಾಪಾಡಿದೆ.

ರಕ್ತದಾನ ಮಾಡುವುದರಿಂದ ರೋಗಿಗೆ ಮಾತ್ರವಲ್ಲ, ದಾನಿಗೂ ಹಲವು ಪ್ರಯೋಜನಗಳಿವೆ. “ಅನೇಕ ಬಾರಿ, ಮಾರಣಾಂತಿಕ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳನ್ನು ರಕ್ತದಾನದಿಂದ ಉಳಿಸಬಹುದು. ಆದರೆ, ರಕ್ತದಾನವು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂಬುವುದು ಎಷ್ಟು ನಿಜವೋ ದಾನಿಗಳಿಗೆ ಕೆಲವು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ ಎಂಬುವುದು ಅಷ್ಟೇ ನಿಜ “ಎಂದು ಡಾ ಸಂದೀಪ್ ಜಸ್ಸಲ್ ಹೇಳುತ್ತಾರೆ.

ಸಮಯೋಚಿತ ರಕ್ತದಾನವು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯವಂತರಲ್ಲಿ ಫಿಟ್ನೆಸ್ ಅನ್ನು ಸುಧಾರಿಸುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಒಂದು ಪಿಂಟ್ ರಕ್ತವನ್ನು ದಾನ ಮಾಡುವುದು, ಅಂದರೆ 450 ಮಿಲಿ ರಕ್ತದಾನವು ನಮ್ಮ ದೇಹದಿಂದ ಸುಮಾರು 650 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅ
ರಕ್ತದಾನ ಮಾಡುವುದರಿಂದ ದೇಹವು ಕಬ್ಬಿಣವನ್ನು ಅಧಿಕವಾಗಿ ಹೀರಿಕೊಳ್ಳುವ ರೋಗವಾದ ಹೆಮೋಕ್ರೊಮಾಟೋಸಿಸ್ ಬೆಳವಣಿಗೆಯನ್ನು ತಡೆಯಬಹುದು ಅಥವಾ ಅಪಾಯವನ್ನು ಕಡಿಮೆ ಮಾಡಬಹುದು.

ದೇಹದಲ್ಲಿ ಕಬ್ಬಿಣವಂಶವು ಹೆಚ್ಚಾಗುವುದು ಕ್ಯಾನ್ಸರ್ ‌ಗೆ ‌ಕಾರಣವಾಗಬಹುದು. ರಕ್ತದಾನ ಮಾಡುವ ಮೂಲಕ, ಆರೋಗ್ಯಕರ ಕಬ್ಬಿಣದ ಮಟ್ಟವನ್ನು ಕಾಪಾಡಿಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸುತ್ತವೆ. ಅಲ್ಲದೆ ರಕ್ತದಾನವು ಹೊಸ ರಕ್ತ ಕಣಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತದೆ.

Previous Post

ಅದಾನಿ ಸಮೂಹಸಂಸ್ಥೆಗಳ ವಿದೇಶಿ ಹೂಡಿಕೆ ಖಾತೆ ಫ್ರೀಝ್: ಷೇರು ಮೌಲ್ಯದಲ್ಲಿ ಭಾರಿ ಕುಸಿತ

Next Post

ಲಾಕ್ ಡೌನ್ ಮುಗಿದ ಬೆನ್ನಲ್ಲೇ ಕೇರಳ , ತಮಿಳುನಾಡಿನಿಂದ ಬೆಂಗಳೂರಿಗೆ ಜನರ ಆಗಮನ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಲಾಕ್ ಡೌನ್ ಮುಗಿದ ಬೆನ್ನಲ್ಲೇ ಕೇರಳ , ತಮಿಳುನಾಡಿನಿಂದ ಬೆಂಗಳೂರಿಗೆ ಜನರ ಆಗಮನ

ಲಾಕ್ ಡೌನ್ ಮುಗಿದ ಬೆನ್ನಲ್ಲೇ ಕೇರಳ , ತಮಿಳುನಾಡಿನಿಂದ ಬೆಂಗಳೂರಿಗೆ ಜನರ ಆಗಮನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada