• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅದಾನಿ ಸಮೂಹಸಂಸ್ಥೆಗಳ ವಿದೇಶಿ ಹೂಡಿಕೆ ಖಾತೆ ಫ್ರೀಝ್: ಷೇರು ಮೌಲ್ಯದಲ್ಲಿ ಭಾರಿ ಕುಸಿತ

Any Mind by Any Mind
June 14, 2021
in ದೇಶ
0
ಅದಾನಿ ಸಮೂಹಸಂಸ್ಥೆಗಳ ವಿದೇಶಿ ಹೂಡಿಕೆ ಖಾತೆ ಫ್ರೀಝ್: ಷೇರು ಮೌಲ್ಯದಲ್ಲಿ ಭಾರಿ ಕುಸಿತ
Share on WhatsAppShare on FacebookShare on Telegram

ಭಾರತದ ಎರಡನೆಯ ಅತಿ ದೊಡ್ಡ ಶ್ರೀಮಂತ ಗೌತಮ್‌ ಅದಾನಿಗೆ ಭಾರೀ ಆಘಾತ ಎದುರಾಗಿದೆ. ತನ್ನ ಸಮೂಹ ಸಂಸ್ಥೆಗಳಿಗೆ ಹೂಡಿಕೆ ಮಾಡಿದ್ದ ಮೂರು ವಿದೇಶಿ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್‌ಡಿಎಲ್) ಮುಟ್ಟುಗೋಲು ಹಾಕಿಕೊಂಡಿದೆ. ಈ ವಿಚಾರ ಬಹಿರಂಗವಾದ ಬೆನ್ನಲ್ಲೇ ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಸುಮಾರು ಶೇ 25ರಷ್ಟು ಕುಸಿತ ಕಂಡಿದೆ.

ADVERTISEMENT

ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಮೂರು ವಿದೇಶೀ ಫಂಡ್ಸ್‌ಗಳಾದ Albula ಇನ್ವೆಸ್ಟ್‌ಮೆಂಟ್‌ ಫಂಡ್, ಕ್ರೆಸ್ಟಾ ಫಂಡ್ ಹಾಗೂ ಎಪಿಎಂಎಸ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. ಇವುಗಳ ಬಳಿ ಅದಾನಿ ಗ್ರೂಪ್‌ನ ನಾಲ್ಕು ಕಂಪನಿಯ 43,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೇರು ಇದೆ.

ಅಕೌಂಟ್‌ ಫ್ರೀಜ್‌ ಆಗಿರುವ ಕಾರಣ ನಿಧಿಗಳಿಗೆ ಅಸ್ತಿತ್ವದಲ್ಲಿರುವ ಯಾವುದೇ ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಅಥವಾ ಯಾವುದೇ ಹೊಸ ಸೆಕ್ಯೂರಿಟಿಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಕೂಡ ಠೇವಣಿದಾರರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದ ವಿದೇಶಿ ನಿಧಿಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಅದಾನಿ ಷೇರುಗಳು ಶೇಕಡಾ 5ರಿಂದ 25ರಷ್ಟು ಕುಸಿತಗೊಂಡಿವೆ. ಕಂಪನಿಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ಮೂರು ವಿದೇಶಿ ನಿಧಿಗಳ ಖಾತೆಗಳನ್ನು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಸ್ಥಗಿತಗೊಳಿಸಿದ ನಂತರ ಅದಾನಿ ಕಂಪೆನಿಗಳ ಷೇರುಗಳು ತೀವ್ರ ಕುಸಿತಗೊಂಡಿವೆ.

ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಲಾಭದಾಯಕ ಮಾಲೀಕತ್ವದ ಬಗ್ಗೆ ಈ ವಿದೇಶಿ ನಿಧಿಗಳು ಮಾಹಿತಿಯನ್ನು ಸಾಕಷ್ಟು ಬಹಿರಂಗಪಡಿಸದ ಕಾರಣ ಮೂರು ಖಾತೆಗಳ ಸ್ಥಗಿತವಾಗಿದೆ ಎಂದು ವಿದೇಶಿ ಹೂಡಿಕೆದಾರರನ್ನು ನಿಭಾಯಿಸುವ ಕಸ್ಟೋಡಿಯನ್ ಬ್ಯಾಂಕುಗಳ ಅಧಿಕಾರಿಗಳು ತಿಳಿಸಿದ್ದಾರೆ. ಪಿಎಂಎಲ್ಎ ಸಾಮಾನ್ಯವಾಗಿ ಮಾಹಿತಿ ಹಾಗೂ ಕ್ರಮದ ಬಗ್ಗೆ ಗ್ರಾಹಕರಿಗೆ ಮೊದಲು ಎಚ್ಚರಿಕೆ ನೀಡುತ್ತಾರೆ. ಇದಕ್ಕೆ ಅವರು ಸ್ಪಂದಿಸದಿದ್ದರೆ ಅಥವಾ ಅನುಸರಿಸಲು ವಿಫಲವಾದರೆ ಖಾತೆಗಳನ್ನು ಮುಟ್ಟುಗೋಲು ಹಾಕಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸದ್ದು ಮಾಡಿದ ಸುಚೇತ ದಲಾಲ್‌ ಟ್ವೀಟ್‌

ಅದಾನಿ ಸಮೂಹದ ಷೇರುಗಳು ಕುಸಿತಗೊಳ್ಳುತ್ತಿದ್ದಂತೆಯೇ ಎರಡು ದಿನಗಳ ಹಿಂದೆ ವಾಣಿಜ್ಯ ಪತ್ರಕರ್ತೆ ಸುಚೇತ ದಲಾಲ್ ಅವರು ಮಾಡಿರುವ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.  

Another scandal hard to prove outside the black box of information available with SEBI tracking systems is the return of an operator of the past who is relentlessly rigging prices of one group. All through foreign entities! His speciality & that of a former FM. Nothing changes!

— Sucheta Dalal (@suchetadalal) June 12, 2021

ಸುಚೇತ ಅವರು ಅಂಬಾನಿ ಕಂಪನಿಯ ಹೆಸರನ್ನು ಉಲ್ಲೇಖಿಸದೇ ಕಂಪನಿಯ ಒಳಗೆ ನಡೆದಿರುವ ಲಾಭಿ ಕುರಿತು ಹಾಗೂ ಷೇರುಗಳ ಪರವಾಗಿ ಸಂಭವನೀಯ ಹಗರಣದ ಬಗ್ಗೆ ಸುಳಿವಿರುವ ನೀಡಿದ್ದರು. ಈ ಟ್ವೀಟ್‌ನಲ್ಲಿ ಕಂಪನಿಯ ಹೆಸರು ಉಲ್ಲೇಖಿಸದೇ ಇದ್ದರೂ ವಾಣಿಜ್ಯ ಕ್ಷೇತ್ರದ ಮಾಹಿತಿ ಇರುವವರಿಗೆ ಮೇಲ್ನೋಟಕ್ಕೆ ಅದಾನಿ ಗ್ರೂಪ್ ಎಂದು ಮನದಟ್ಟಾಗುತ್ತದೆ.

Previous Post

ಕೋವಿಡ್ ಮಾರ್ಗಸೂಚಿ ವಿಚಾರದಲ್ಲಿ ವಿವಾದಕ್ಕೊಳಗಾದ ಡಾ. ರಾಜು ಅವರ ಮಾತುಗಳು – Dr. Raju Krishna Murthy

Next Post

ಜೂನ್14‌, ವಿಶ್ವ ರಕ್ತದಾನಿಗಳ ದಿನ: ರಕ್ತದಾನದಿಂದ ರೋಗಿಗಷ್ಟೇ ಅಲ್ಲ, ದಾನಿಗೂ ಇವೆ ಪ್ರಯೋಜನಗಳು

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಜೂನ್14‌, ವಿಶ್ವ ರಕ್ತದಾನಿಗಳ ದಿನ:  ರಕ್ತದಾನದಿಂದ ರೋಗಿಗಷ್ಟೇ ಅಲ್ಲ, ದಾನಿಗೂ ಇವೆ ಪ್ರಯೋಜನಗಳು

ಜೂನ್14‌, ವಿಶ್ವ ರಕ್ತದಾನಿಗಳ ದಿನ: ರಕ್ತದಾನದಿಂದ ರೋಗಿಗಷ್ಟೇ ಅಲ್ಲ, ದಾನಿಗೂ ಇವೆ ಪ್ರಯೋಜನಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada