• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಲೋಹಿಯಾವಾದಿಗಳು ಮತ್ತು ಬಲಪಂಥೀಯರು

ಪ್ರತಿಧ್ವನಿ by ಪ್ರತಿಧ್ವನಿ
January 3, 2025
in Top Story, ದೇಶ, ರಾಜಕೀಯ
0
ಲೋಹಿಯಾವಾದಿಗಳು ಮತ್ತು ಬಲಪಂಥೀಯರು
Share on WhatsAppShare on FacebookShare on Telegram

ಸ್ವಾತಂತ್ರ ಬಂದ ನಂತರ ಭಾರತದಲ್ಲಿ ನೆಹರೂವಿಯನ್‌ ಚಿಂತನೆಯಲ್ಲಿ ರೂಪುಗೊಂಡ ಸಾರ್ವಜನಿಕ ವ್ಯವಸ್ಥೆ-ಖಾಸಗಿ ಪಾಲ್ಗೊಳ್ಳುವಿಕೆಯ ಮಿಶ್ರ ಸಮಾಜವಾದದ ಆರ್ಥಿಕತೆಯನ್ನು ಜಾರಿಗೊಳಿಸಲಾಯಿತು. ಇಲ್ಲಿ ಸಾರ್ವಜನಿಕರಂಗ ಪ್ರಧಾನವಾಗಿತ್ತು. ಸರ್ಕಾರದ ನೇತೃತ್ವದಲ್ಲಿ ಸ್ವತಂತ್ರ ಕೈಗಾರಿಕೆಯನ್ನು ಬೆಳೆಸಬೇಕು, ಇದು ಸ್ವಾವಲಂಬನೆ ಸಾಧಿಸಬೇಕು, ಉದ್ಯೋಗ ಸೃಷ್ಟಿಸಬೇಕು ಎನ್ನುವ ಉದ್ದೇಶಗಳೊಂದಿಗೆ ಹೊಸ ಯೋಜನೆಗಳು, ಉದ್ಯಮಗಳು ಪ್ರಾರಂಭಗೊಂಡವು. ಸ್ವಾಲಂಬನೆ ಮತ್ತು ಸ್ಥಳೀಯತೆಗೆ ಪ್ರಾಧಾನ್ಯತೆ ಒದಗಿಸಲು ಆಮದುಗಳಿಗೆ ಹೆಚ್ಚಿನ ಶುಲ್ಕ ಹೇರುವ ಮೂಲಕ ಆ ನೀತಿಯನ್ನು ನಿಯಂತ್ರಣಗೊಳಿಸಲಾಯಿತು. ಇಲ್ಲಿಯೇ ಉತ್ಪಾದಿಸಿ ಇಲ್ಲಿನ ಜನರಿಗೆ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಈ ಆರ್ಥಿಕ ನೀತಿ ಅರವತ್ತರ ದಶಕದವರೆಗೂ ಹಂತ ಹಂತವಾಗಿ ರೂಪುಗೊಳ್ಳತೊಡಗಿತು. ಮತ್ತು ನಿರ್ದಿಷ್ಠ ಪ್ರಮಾಣದಲ್ಲಿ ಖಾಸಗಿ ಬಂಡವಾಳಶಾಹಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಮಿಶ್ರ ಆರ್ಥಿಕ ನೀತಿಯನ್ನು ʼಮಧ್ಯ-ಬಲʼ ನೀತಿಯ ರಾಜಾಜಿ, ಮಿನೂ ಮಸಾನಿಯ ಸ್ವತಂತ್ರ ಪಕ್ಷ ಮತ್ತು ತೀವ್ರವಾದಿ ಬಲಪಂಥೀಯ ಆರೆಸ್ಸಸ್‌ನ ಜನಸಂಘ ಪಕ್ಷಗಳು ವಿರೋಧಿಸಿದರು. ಕಾಂಗ್ರೆಸ್‌ನಲ್ಲಿಯೂ ಹಳೆ ತಲೆಗಳಾದ ನಿಜಲಿಂಗಪ್ಪ, ಮುರಾರ್ಜಿ ದೇಸಾಯಿ ಮುಂತಾದ ಸಿಂಡಿಕೇಟ್‌ ಮುಂಖಡರು ಈ ಸ್ವಾವಲಂಬಿ ನೀತಿಯನ್ನು ವಿರೋಧಿಸಿದರು. 1967ರಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗುವ ಹೊತ್ತಿಗೆ ಅವರ ವಿರುದ್ಧ ಹೊರಗಿನ ಬಲಪಂಥೀಯ ಪಕ್ಷಗಳು ಮತ್ತು ಒಳಗಿನ ಬಲಪಂಥೀಯರು ಯುದ್ಧವನ್ನೇ ಸಾರಿದರು. ಸಾರ್ವಜನಿಕರಂಗವನ್ನು ವಿರೋಧಿಸಿದರು, ಖಾಸಗೀಕರಣವನ್ನು ಬೆಂಬಲಿಸಿದರು

ADVERTISEMENT
Goutham Bambir: ಗಂಭೀರ್ ಅವರನ್ನು ಟೀಕೆಗೆ ಗುರಿಪಡಿಸಿದ ಪ್ರಮುಖ ಕಾರಣಗಳು..! #gouthambambir #ipl #inidan


ಸ್ವತಂತ್ರ ಬಂದ ನಂತರದ ಎರಡು ದಶಕಗಳ ಸಾರ್ವಜನಿಕರಂಗ ಆರ್ಥಿಕ ಪ್ರಧಾನತೆಯ ಪ್ರಯೋಗಗಳು ಅರವತ್ತರ ದಶಕದ ಕೊನೆಯ ಹೊತ್ತಿಗೆ ಒಂದು ಹಂತ ತಲುಪಿತ್ತು. ಈ ತಿರುವಿನ ಘಟ್ಟದಲ್ಲಿ ಈ ಮಿಶ್ರ ಆರ್ಥಿ ನೀತಿಗೆ ಮತ್ತಷ್ಟು ಬದಲಾವಣೆಗಳ, ಹೊಸ ದೃಷ್ಟಿಕೋನ, ಸಬಲೀಕರಣದ ಅಗತ್ಯವಿತ್ತು. ಆದೇ ಸಂದರ್ಭದಲ್ಲಿ ಸರ್ಕಾರಿ ವಲಯದಲ್ಲಿ ಭ್ರಷ್ಟಾಚಾರದ ಪರ್ವವೂ ಶುರುವಾಗಿದ್ದು ಕ್ರಮೇಣ ಅಲ್ಲಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರತೊಡಗಿತು. ಇಂತಹ ಬಿಕ್ಕಟ್ಟಿನಲ್ಲಿ ಹಸಿರು ಕ್ರಾಂತಿಯಂತಹ ದೊಡ್ಡ ವಿದ್ಯಾಮಾನವು ಇಲ್ಲಿನ ಬಡಕುಟುಂಬಗಳನ್ನು ಹಸಿವಿನಿಂದ ಕಾಪಾಡಿದ್ದು ನಿಜ(ಈ ಕ್ರಾಂತಿಯು ಇಲ್ಲಿನ ಕೃಷಿ ವಲಯವನ್ನು ಸಂಪೂರ್ಣವಾಗಿ ರಾಸಾಯನಿಕ ಬೇಸಾಯಕ್ಕೆ ದೂಡಿತು, ಮಣ್ಣಿನ ಫಲವತ್ತತೆ ನಾಶ ಮಾಡಿತು ಎನ್ನುವುದು ಬೇರೆಯದೇ ಚರ್ಚೆ). ನಂತರ ಇಂದಿರಾ ಗಾಂಧಿಯವರ ಬ್ಯಾಂಕ್‌ ರಾಷ್ಟ್ರೀಕರಣ, ಗರೀಬಿ ಹಟಾವೋ, ಭೂ ಸುಧಾರಣೆಯಂತಹ ಮಹತ್ವದ ನಡೆಗಳು ಮರಳಿ ದೇಶವನ್ನು ಸಮಾಜವಾದಿ ಹಳಿಗೆ ತಂದು ನಿಲ್ಲಿಸಿದ್ದು ಸತ್ಯ. ಆದರೆ ಇದು ಕೇವಲ ಸೀಮಿತ ಯಶಸ್ಸು ಸಾಧಿಸಿತು. ಮತ್ತು ಆಡಳಿತರಂಗದಲ್ಲಿನ ಭ್ರಷ್ಟಾಚಾರ ಹಾಗೂ ನಿರುದ್ಯೋಗದ ಪರಿಸ್ಥಿತಿಯು ಇಂದಿರಾ ಗಾಂಧಿಯವರ ವಿರುದ್ಧ ದೊಡ್ಡ ಹೋರಾಟಕ್ಕೆ ಕಾರಣವಾಯಿತು.
ಇದು ಕ್ರಮೇಣ ಸಾರ್ವಜನಿಕರಂಗದ ವಿರುದ್ಧ ಖಾಸಗೀಕರಣದ ಪರವಾದ ಹೋರಾಟವಾಗಿ ಪರಿವರ್ತನೆಗೊಂಡಿತು. ಆರೆಸ್ಸಸ್‌, ಜನಸಂಘ, ಲೋಹಿಯಾವಾದಿಗಳು ಮತ್ತು ಸಂಸ್ಥಾ ಕಾಂಗ್ರೆಸ್ಸಿಗರು ಇದರ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್‌ ವಿರೋಧಿ ಗೀಳನ್ನು ಹತ್ತಿಸಿಕೊಂಡಿದ್ದ ಸಮಾಜವಾದಿಗಳು ಸಹ ಇದರ ಭಾಗವಾಗಿದ್ದು ಇಲ್ಲಿನ ದುರಂತ.

ಇಲ್ಲಿನ ಸಮಾಜೋ-ಆರ್ಥಿಕ ಹಿನ್ನಡೆಗೆ ಲೋಹಿಯಾ ಸಮಾಜವಾದಿಗಳ ಕೊಡುಗೆ ತುಂಬಾ ಇದೆ. ಇವರಿಗೆ ರಾಜಕೀಯ ಪಕ್ಷವನ್ನು ಕಟ್ಟುವುದು, ಸಂಘಟಿಸುವುದು ಎರಡೂ ಗೊತ್ತಿಲ್ಲ. ಬೌದ್ಧಿಕವಾಗಿ ತುಂಬಾ ಓದಿಕೊಂಡಿದ್ದರೂ ಸಹ ಅದನ್ನು ಅನುಷ್ಠಾನಗೊಳಿಸುವ ದೀರ್ಘಕಾಲದ ಕಾರ್ಯಯೋಜನೆ, ದೂರದೃಷ್ಟಿ ಎರಡೂ ಇಲ್ಲ. ಹೆಚ್ಚೆಂದರೆ ಅಕಾಡೆಮಿಕ್ ಆಗಿ ತಲೆದೂಗಿಸುವಂತೆ ಮಾತನಾಡಬಲ್ಲ ಇವರನ್ನು ವಂಚಿತ ಸಮುದಾಯಗಳ ಪ್ರಾತಿನಿಧ್ಯ ಮತ್ತು ಸಬಲೀಕರಣದ ಕುರಿತು ಮುಂದಿನ ಹತ್ತು ವರ್ಷಗಳ ಅವಧಿಗೆ ಒಂದು plan of action ಹಾಕಿಕೊಡಿ ಎಂದು ಕೇಳಿ ನೋಡಿ, ಕಕ್ಕಾಬಿಕ್ಕಿಯಾಗುತ್ತಾರೆ.
ಈ ಸೋ ಕಾಲ್ಡ್ ಲೋಹಿಯಾವಾದಿಗಳು ಮಾಧ್ಯಮಗಳ ಜೊತೆಗೆ ಉತ್ತಮ ಸಂಬಂಧವಿಟ್ಟುಕೊಂಡಿರುವ ಕಾರಣ ಇವರು ಸದಾ ಚರ್ಚೆಯಲ್ಲಿರುತ್ತಾರೆ.


(ಸಶೇಷ)

— ಬಿ. ಶ್ರೀಪಾದ ಭಟ್

Tags: fox and friendsfrom where did the terms left and right originatelebanon rightists settleleft and right in politicsleft wing and right wingleft wing vs rightist wing explainedleftist vs rightistleftist vs rightist explainedorigin of left wing and right wingorigins of left and right in politicsrightistrightist partyrightist politics partyrightistswhat is the left and rightwhy is there a left wing and right wing?
Previous Post

1980ರ ನಂತರದ ಆರ್ಥಿಕ ಬಿಕ್ಕಟ್ಟುಗಳಿಗೆ ಸಾರ್ವಜನಿಕ-ಬಂಡವಾಳಶಾಹಿಯ ಮಿಶ್ರ ಆರ್ಥಿಕ ನೀತಿ,

Next Post

ದುರ್ಬಲ ಪ್ರಧಾನಿ?

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post

ದುರ್ಬಲ ಪ್ರಧಾನಿ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada