ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸಿಎಂ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸ್ಪಂದಿಸಿದರು. “ನಾನು ಜೀವನದಲ್ಲಿ ಪ್ರೀತಿಸಿದ್ದೇನೆ, ಆದರೆ ಅದರ ಬಗ್ಗೆ ಈಗ ವಿವರಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮೈಸೂರಿನ ಕಾನೂನು ಕಾಲೇಜು ದಿನಗಳನ್ನು ನೆನೆದು, ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿದ್ದಾಗಿ ಹಾಗೂ ಆ ಪ್ರೇಮ ಯಶಸ್ವಿಯಾಗದಿದ್ದುದಾಗಿ ಅವರು ಹೇಳಿಕೊಂಡಿದ್ದರು.
https://youtube.com/live/c8_aL2bILIg
ಇನ್ನೊಂದೆಡೆ, ಸಿದ್ದರಾಮಯ್ಯ ಅವರ ಪತ್ನಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಿಎಂ ಇತ್ತೀಚೆಗೆ ಯುಗಾದಿ ಸೇರಿದಂತೆ ಹಬ್ಬಗಳಲ್ಲಿಯೂ ನಾನ್‌ವೆಜ್ ಸೇವಿಸುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಪತ್ನಿಯ ದೇವಾಲಯ ಭೇಟಿಗಳು ಹೆಚ್ಚಿನ ಗಮನ ಸೆಳೆದಿವೆ.ಸಂದರ್ಶನದಲ್ಲಿ ‘ಭಾಗ್ಯ’ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಿಎಂ, “ಭಾಗ್ಯ ಎಂಬುದು ಯಾರೊಬ್ಬರ ಹೆಸರಲ್ಲ, ಅದು ಒಂದು ಪದ.

ಬಡಜನರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳ ಸಂಕೇತ” ಎಂದು ಹೇಳಿದರು. ಜನರು ಸುಖವಾಗಿರಬೇಕು ಎಂಬ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತಂದಿದ್ದಾಗಿ ಅವರು ವಿವರಿಸಿದರು. ಜೊತೆಗೆ, ಈ ಯೋಜನೆಗಳ ಮುಂದುವರಿದ ಭಾಗವಾಗಿ ‘ಗ್ಯಾರಂಟಿ’ಗಳನ್ನು ನೀಡಲಾಗುತ್ತಿದೆ ಎಂದರು. ಸಿಎಂ ಅವರ ವೈಯಕ್ತಿಕ ಹಾಗೂ ರಾಜಕೀಯ ಹೇಳಿಕೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ.






