ಅರೆ ಸಮಾಜವಾದಿ ತತ್ವ ಕಾರಣವಲ್ಲ. ಅದನ್ನು ಅಳವಡಿಸಿಕೊಳ್ಳುವಾಗ, ಪ್ರಯೋಗಿಸುವಾಗ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳು, ವ್ಯವಸ್ಥೆಯಲ್ಲಿನ ಲೋಪದೋಷಗಳು ಈ ಅರೆ ಸಮಾಜವಾದಿ ನೀತಿಯ ಹಿನ್ನಡೆಗೆ ಕಾರಣವಾಗಿದೆ. ಇದು ಸಾರ್ವಜನಿಕರಂಗದಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾದರೆ, ಇದರ ಫಲವಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವ ನೆರೇಶನ್ ಪ್ರಚಾರ ಪಡೆದುಕೊಂಡಿತು. ಆದರೆ ಗೊಂದಲ, ಬಿಕ್ಕಟ್ಟುಗಳಿದ್ದ ಅರೆ ಸಮಾಜವಾದಿ ನೀತಿಯನ್ನು ಪುನರೂಪಿಸುವುದು, ಮರಳಿ ಕಟ್ಟುವುದು ಹೇಗೆ ಎನ್ನುವುದರ ಕುರಿತು ಅದರ ಸಮರ್ಥಕರು ಚಿಂತಿಸಲಿಲ್ಲ. ಎಲ್ಲವೂ ಬೌದ್ಧಿಕವಾಗಿ ಚರ್ಚೆಗೊಳಪಡುತ್ತಿತ್ತೇ ವಿನಃ ಅಧಿಕಾರದಲ್ಲಿರುವ ಸರ್ಕಾರವು ಹೇಗೆ ಅದನ್ನು ಜಾರಿಗೊಳಿಸಬೇಕು ಎನ್ನುವುದರ ಕುರಿತು ಯಾರ ಬಳಿಯೂ ನೀಲನಕ್ಷೆ, ದೂರದೃಷ್ಟಿ ಇರಲಿಲ್ಲ. ಇದು ಅತ್ಯಂತ ಜಟಿಲ, ಸಂಕೀರ್ಣ ವ್ಯವಸ್ಥೆ. ನಾವು ಕ್ಯೂಬಾದಂತಹ ಸಣ್ಣ ದೇಶವನ್ನು ಭಾರತದಂತಹ ಅತಿ ಹೆಚ್ಚಿನ ಜನಸಂಖೆಯುಳ್ಳ, ಜಾತಿ, ವರ್ಗ ಶ್ರೇಣೀಕರಣದಂತಹ ದೇಶದೊಂದಿಗೆ ಹೋಲಿಸುವುದೇ ಅರ್ಥಹೀನ. ಒಂದು ಸಮಾಜವಾದಿ ನೀತಿಯು ಸಮರ್ಪಕವಾಗಿ ಜಾರಿಗೊಳ್ಳಬೇಕೆಂದರೆ ಮೇಲಿನಿಂದ ಕೆಳಗಿನ ತನಕ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಬದ್ಧತೆಯ ಅಗತ್ಯವಿದೆ. ಇಲ್ಲಿ ಸಣ್ಣ ಪ್ರಮಾಣದ ಲೋಪವುಂಟಾದರೂ ಅದು ಇಡೀ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. 1970-80ರ ದಶಕದಲ್ಲಿ ಇಲ್ಲಿನ ಸಾರ್ವಜನಿಕರಂಗವೂ ಇಂತಹದೇ ಹಿನ್ನಡೆಗೆ ಒಳಗಾಗಿತ್ತು. ಇಂತಹ ಬಿಕ್ಕಟ್ಟಿಗಾಗಿ ಕಾದು ಕುಳಿತಿದ್ದ ಬಂಡವಾಳಶಾಹಿಗಳು ಇದನ್ನು ಬಳಸಿಕೊಂಡು ತಮ್ಮ ಪ್ರಾಬಲ್ಯ ಸಾಧಿಸಿದರು. ಇದಕ್ಕೆ ಮನಮೋಹನ್ ಸಿಂಗ್ ಸಾಧನವಾಗಿ ಬಳಕೆಯಾದರು. ಅಂತಿಮವಾಗಿ ಯಾವುದೇ ರಚನಾತ್ಮಕ ಕಾರ್ಯಯೋಜನೆಗಳಿಲ್ಲದ ಇಲ್ಲಿನ ಸಾರ್ವಜನಿಕರಂಗ ಸಮರ್ಥಕರ ವೈಫಲ್ಯವೇ ಎಲ್ಪಿಜಿ ಪ್ರವೇಶಕ್ಕೆ ಮುಖ್ಯ ಕಾರಣ. ಕೇವಲ ಮನಮೋಹನ್ ಸಿಂಗ್ ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ….

1990ರ ನಂತರ ಜಾಗತಿಕವಾಗಿಯೇ ದೊಡ್ಡ ಮಟ್ಟದ ಮಾರುಕಟ್ಟೆ ಆರ್ಥಿಕತೆ ತೆರೆದುಕೊಳ್ಳತೊಡಗಿತು. ಆಗಿನ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಭಾರತವು ವಿಶ್ವ ವಾಣಿಜ್ಯ ಸಂಸ್ಥೆ ಮತ್ತು ಗ್ಯಾಟ್ ಜೊತೆ ಒಪ್ಪಂದ ಮಾಡಿಕೊಂಡು ತನ್ನನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಂಡಿತು. ಇಲ್ಲಿ ಪ್ರಶ್ನೆ ಇರುವುದು ಯಾತಕ್ಕಾಗಿ ಸಾರ್ವಜನಿಕರಂಗದ ಸುಧಾರಣೆ ಮತ್ತು ಸಬಲೀಕರಣದ ಕಡೆಗೆ ಯಾರೂ ಗಮನ ಹರಿಸಲಿಲ್ಲ? ಆ ವಲಯವು ಉದ್ದೇಶಪೂರ್ವಕವಾಗಿ ಅವನತಿ ಹೊಂದಲು ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೈ ಜೋಡಿಸಿದ್ದೇಕೆ? ಈ ಪ್ರಶ್ನೆಗಳಿಗೆ ಮೂವತ್ತು ವರ್ಷಗಳ ನಂತರವೂ ಉತ್ತರ ದೊರಕಿಲ್ಲ. ಪ್ರತಿ ಸಂದರ್ಭದಲ್ಲಿಯೂ ತಳಸಮುದಾಯ, ದಲಿತರು, ಮುಸ್ಲಿಂರ ಬದುಕಿನ ಸುಧಾರಣೆ ಮತ್ತು ಸಬಲೀಕರಣದ ಕುರಿತಾದ ಆರ್ಥಿಕ ನೀತಿಯ ಅಗತ್ಯವನ್ನು ಯಾರೂ ಚರ್ಚಿಸುವುದಿಲ್ಲ. ಎಲ್ಪಿಜಿ ನಂತರದ ಮೂರು ದಶಕಗಳಲ್ಲಿ ವಂಚಿತ ಸಮುದಾಯಗಳ ಬದುಕು ಮತ್ತಷ್ಟು ಹದಗೆಟ್ಟಿದೆ ಮತ್ತು ಮುಂದುವರಿದ ಜಾತಿಗಳು, ಮಧ್ಯಮವರ್ಗದ ಜೀವನ ಹಸನಾಗಿದೆ. ಹಾಗಿದ್ದಲ್ಲಿ ಈ ಮಾದರಿಯ ಆರ್ಥಿಕ ಸುಧಾರಣೆ ಯಾರಿಗೆ ಬೇಕು?…
(ಸಶೇಷ)
— ಬಿ. ಶ್ರೀಪಾದ ಭಟ್