ತುಮಕೂರು : ಕರ್ನಾಟಕದಲ್ಲಿ ಮುಖ್ಯಮಂತ್ರಿ ಖರ್ಚಿ ಅಲುಗಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಮಧುಗಿರಿ ಪಟ್ಟದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮಲ್ಲಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆಯೋ, ಇಲ್ಲವೋ ಅದು ನಮ್ಮ ಪಕ್ಷದ ಆಂತರಿಕ ವಿಚಾರ. ನಮಗೂ ಅವರಿಗೂ ಏನು ಸಂಬಂಧ.? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಇಂದಿರಾ ಗಾಂಧಿ ಕಾಲದ ಪರಿಸ್ಥಿತಿಯೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆಯಾಗಿದೆ. ಅಂದು ಬರಗಾಲವಿತ್ತು, ಇಂದಿನ ಪರಿಸ್ಥಿತಿಗೆ ಅಂದಿನ ಹೇಳಿಕೆ ತಾಳೆಯಾಗಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಅಲ್ಲ, ವಾಸ್ತವ ಅರಿಯಲಿ, ಪ್ರಧಾನಿ ಮೋದಿ ಆಕಾಶದಿಂದ ಇಳಿದು ಮಾತನಾಡಲಿ. ಭೂಮಿಯ ಮೇಲಿದ್ದು ಹೇಳಿಕೆ ನೀಡಲಿ ಎಂದು ರಾಜಣ್ಣಟಾಂಗ್ ನೀಡಿದ್ದಾರೆ.
ಇದನ್ನೂ ಓದಿ : ದಿಢೀರ್ ಗಾಳಿ-ಮಳೆಗೆ ಸಂಬರಗಿ ತತ್ತರ ; ಮನೆಗಳ ಮೇಲ್ಛಾವಣಿ ಹಾರಿ, ಬೆಳೆಗಳಿಗೆ ಹಾನಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಗೆದ್ದ ಹಾಗೆ ಮಾತಾನಾಡುವುದಲ್ಲ. ಆದರೆ ಜನಾದೇಶಕ್ಕೆ ನಾವು ತಲೆ ಬಾಗುತ್ತೇವೆ ಎಂದು ಕಾಂಗ್ರೆಸ್ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡಿದ್ದಾರೆ.
ನಟ ವಿಜಯ್ ಹಾದಿ ಮುಳ್ಳಿನ ಹಾದಿ.
ಇನ್ನೂ ತಮಿಳುನಾಡಿನಲ್ಲಿ ನಟ ವಿಜಯ್ ಸಿಎಂ ಆದ ಬಳಿಕವೇ 700 ಮದ್ಯದಂಗಡಿ ಮುಚ್ಚಿದ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ಆದಾಯದ ಹಾದಿ ಮುಚ್ಚಿಕೊಂಡರೆ ಫ್ರೀ ಬೀಸ್ ನೀಡಲು ಸಾಧ್ಯವೇ? ವಿಜಯ್ ನಡೆ ಅನುಭವದ ಕೊರತೆ, ಎಲ್ಲವನ್ನೂ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜಣ್ಣ ಸಲಹೆ ನೀಡಿದ್ದಾರೆ.






