• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

ಪ್ರತಿಧ್ವನಿ by ಪ್ರತಿಧ್ವನಿ
May 14, 2026
in Top Story
0
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
Share on WhatsAppShare on FacebookShare on Telegram

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದ ಕಾಲ ಅನಗತ್ಯ ಚಿನ್ನ ಖರೀದಿ ಕಡಿಮೆ ಮಾಡುವಂತೆ ಕರೆ ನೀಡಿದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಚರ್ಚೆ ಜೋರಾಗಿದೆ. ಇದೇ ವೇಳೆ ಕರ್ನಾಟಕ ಜುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ. ಶರವಣ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚಿನ್ನಾಭರಣ ಖರೀದಿಯನ್ನು ನಿಯಂತ್ರಿಸುವುದು ಭಾರತೀಯ ಸಂಪ್ರದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

 

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಚಿನ್ನ ಖರೀದಿಯಲ್ಲಿ ಹೂಡಿಕೆ ಉದ್ದೇಶದ ಸಾಲಿಡ್ ಗೋಲ್ಡ್ ಖರೀದಿ ಮತ್ತು ಚಿನ್ನಾಭರಣ ಖರೀದಿ ಎಂಬ ಎರಡು ವಿಭಾಗಗಳಿವೆ. ಸಮಸ್ಯೆ ಉಂಟುಮಾಡುತ್ತಿರುವುದು ಸಾಲಿಡ್ ಗೋಲ್ಡ್ ಖರೀದಿಯೇ ಹೊರತು, ಮದುವೆ, ನಿಶ್ಚಿತಾರ್ಥ, ಕಿವಿ ಚುಚ್ಚಿಸುವ ಕಾರ್ಯಕ್ರಮ ಸೇರಿದಂತೆ ಕುಟುಂಬ ಸಂಪ್ರದಾಯಗಳಿಗೆ ಬಳಸುವ ಚಿನ್ನಾಭರಣವಲ್ಲ” ಎಂದು ಹೇಳಿದರು.

Dinesh Gundu Rao: 1.85 ಕೋಟಿ ಮೌಲ್ಯದ ಅನುತ್ತಮ ಔಷಧಿಗಳನ್ನು ಲಿಸ್ಟ್ ಮಾಡಲಾಗಿದೆ #pratidhvani

ಮುಂದು

“ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಾಭರಣ ಖರೀದಿ ಒಂದು ಭಾಗ. ಅದನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಿಲ್ಲ. ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಈಗಾಗಲೇ ತೆರಿಗೆ ಹೆಚ್ಚಳದಿಂದ ಅವರಿಗೆ ಸಂಕಷ್ಟ ಉಂಟಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

LPG cylinder : ಅಬ್ಬಬ್ಬಾ.. ದಿನೇ ದಿನೇ ಹೆಚ್ಚಾಯ್ತು ಸಿಲೆಂಡರ್ ಕಳ್ಳರ ಹಾವಳಿ.. #pratidhvani

ಚಿನ್ನದ ಮೇಲೆ ತೆರಿಗೆ ಹೆಚ್ಚಳವಾಗಿರುವುದರಿಂದ ಸಣ್ಣ ಮತ್ತು ಮಧ್ಯಮ ಜುವೆಲರಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದ ಅವರು, “ಸಣ್ಣ ಅಂಗಡಿದಾರರು ಸಾಲ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಉದ್ಯಮದ ಮೇಲೆ ನೇರ ಮತ್ತು ಪರೋಕ್ಷವಾಗಿ ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಹಾಲ್ಮಾರ್ಕ್, ಪ್ಯಾಕಿಂಗ್, ಡಿಸ್ಟ್ರಿಬ್ಯೂಷನ್ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೊಡೆತ ಬೀಳಲಿದೆ” ಎಂದು ಹೇಳಿದರು.

 

ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ ಶರವಣ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ‌ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.ಇನ್ನೊಂದೆಡೆ ಪ್ರಧಾನಿ ಮೋದಿ ನೀಡಿದ ವಾಹನ ಬಳಕೆ ಕಡಿತ, ವರ್ಕ್ ಫ್ರಂ ಹೋಂ ಹಾಗೂ ಆನ್‌ಲೈನ್ ತರಗತಿಗಳ ಕುರಿತ ಸಲಹೆಗಳಿಗೂ ಟ್ರಾವೆಲ್ಸ್ ಉದ್ಯಮದಿಂದ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮಾತನಾಡಿ, “ಕೋವಿಡ್ ಬಳಿಕ ಈಗಷ್ಟೇ ಟ್ರಾವೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಮತ್ತೆ ವರ್ಕ್ ಫ್ರಂ ಹೋಂ ಹೆಚ್ಚಾದರೆ ನಮ್ಮ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ” ಎಂದು ಬೇಸರ ವ್ಯಕ್ತಪಡಿಸಿದರು.

BY Vijayendra on Hijab Controversy: ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ ಅವಕಾಶ.. ವಿಜಯೇಂದ್ರ ಆಕ್ರೋಶ

ಪ್ರಧಾನಿ ಮೋದಿ ಅವರ ಮಿತ ವ್ಯಯದ ಕರೆ ದೇಶದ ಆರ್ಥಿಕತೆ, ವಿದೇಶಿ ವಿನಿಮಯ ಉಳಿತಾಯ ಹಾಗೂ ಇಂಧನ ಬಳಕೆ ಕಡಿತದ ಉದ್ದೇಶ ಹೊಂದಿದ್ದರೂ, ಅದರ ಪರಿಣಾಮ ವಿವಿಧ ಉದ್ಯಮ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Tags: #AusterityMeasures#EconomicNews#GoldJewellery#GoldMarket#GoldPurchase#hdkumaraswamy#indianews#JewellersAssociation#JewelleryIndustry#MiddleClass#narendramodiBusinessNewsGoldPriceIndiaEconomynirmalasitharamanpratidavani
Previous Post

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

Related Posts

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು
Top Story

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

by ಪ್ರತಿಧ್ವನಿ
May 14, 2026
0

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದ್ದು, ಕೇಂದ್ರ ತನಿಖಾ ದಳ (CBI) ಮತ್ತಷ್ಟು ಆರೋಪಿಗಳನ್ನು ಬಂಧಿಸಿದೆ. ಮಹಾರಾಷ್ಟ್ರದಲ್ಲಿ ಇಬ್ಬರನ್ನು ಬಂಧಿಸಿರುವ...

Read moreDetails
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

May 14, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada