• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ: ಬಿ.ಕೆ. ಹರಿಪ್ರಸಾದ್​ ಹೇಳಿಕೆಗೆ ಲೀಗಲ್ ನೋಟಿಸ್​!

ಪ್ರತಿಧ್ವನಿ by ಪ್ರತಿಧ್ವನಿ
July 6, 2026
in Top Story, ಕರ್ನಾಟಕ, ದೇಶ, ರಾಜಕೀಯ
0
ಪಾಕ್ ಅಧಿಕಾರಿಗಳ ಜೊತೆ ರಾಮ್ ಮಾಧವ್ ಗೌಪ್ಯಸಭೆ: ಬಿ.ಕೆ. ಹರಿಪ್ರಸಾದ್​ ಹೇಳಿಕೆಗೆ ಲೀಗಲ್ ನೋಟಿಸ್​!
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಸದ್ಯ ಸುದ್ದಿಯಲ್ಲಿದ್ದಾರೆ. ಜೊತೆಗೆ ರಾಮ್‌ ಮಾಧವ್‌ ಕುರಿತು ಕೊಟ್ಟ ಹೇಳಿಕೆಗೆ ಲೀಗಲ್‌ ನೋಟಿಸ್‌ ಕೂಡ ನೀಡಲಾಗಿದೆ. ಇಷ್ಟಕ್ಕೂ ಹರಿಪ್ರಸಾದ್‌ ಅವರಿಗೆ ಲೀಗಲ್‌ ನೋಟಿಸ್‌ ಬಂದಿರುವುದಕ್ಕೆ ಕಾರಣ, ಅವರು ಈ ಹಿಂದೆ ಹೇಳಿದ್ದ ಒಂದು ಹೇಳಿಕೆ. ಅವರು ಹೇಳಿದ್ದ ಹೇಳಿಕೆ ಹೀಗಿತ್ತು. “ಪಾಕ್ ಅಧಿಕಾರಿಗಳ ಜೊತೆ ಬಿಜೆಪಿ ನಾಯಕ ರಾಮ್ ಮಾಧವ್ ಗೌಪ್ಯ ಸಭೆ ನಡೆಸಿದ್ದಾರೆ. ಕೊಲಂಬೋ ಹಾಗೂ ಲಂಡನ್​ನಲ್ಲಿ 4 ಸಭೆಗಳನ್ನು ಮಾಡಿದ್ದಾರೆ. ​​ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂಬ ಬಗ್ಗೆ ಅವರು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು. ಈ ಆರೋಪಕ್ಕೆ ಬಿಎನ್‌ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

BK Hariprasad : BJPಗೆ ಗ್ಯಾರೆಂಟಿಯನ್ನು ಜೀರ್ಣಮಾಡಿಕೊಳ್ಳಲು ಆಗ್ತಿಲ್ಲಾ.! #pratidhvani

ಪಾಕ್ ಅಧಿಕಾರಿಗಳೊಂದಿಗೆ ರಾಮ್ ಮಾಧವ್ ಗೌಪ್ಯಸಭೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​, ರಾಮ್ ಮಾಧವ್ ಹೆಸರಿಗೆ ಕಳಂಕಗೊಳಿಸಲು ಪ್ರಯತ್ನಿಸಿರುವುದಲ್ಲದೆ ಅವರ ಇಮೇಜ್ ಮತ್ತು ಖ್ಯಾತಿಯನ್ನು ಗುರಿಯಾಗಿಸಿ ಈ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಎನ್​ಎಸ್​ ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಹರಿಪ್ರಸಾದ್​​ ರಾಮ್ ಮಾಧವ್​ಗೆ ಕ್ಷಮೆ ಕೇಳಬೇಕೆಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

BK Hariprasad : ಬೇಕಾದಾಗ ದೊಡ್ಡ ಗೌಡ್ರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರು‌.! #pratidhvani

ಜಿಬಿಎ ಚುನಾವಣಾ ಬಿಜೆಪಿ ಉಸ್ತುವಾರಿ ರಾಮ್ ಮಾಧವ್, ಪಾಕ್​ ಐಎಸ್‌ಐ ಮಾಜಿ ಮೇಜರ್ ಜನರಲ್ ಜೊತೆ ರಹಸ್ಯ ಮೀಟಿಂಗ್​​ ನಡೆಸಿದ್ದು, ಗೌಪ್ಯ ಸಭೆಯಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟ ಪಡಿಸಬೇಕು ಎಂದು ಹರಿಪ್ರಸಾದ್​​ ಆಗ್ರಹಿಸಿದ್ದರು. ಪಾಕ್ ಜೊತೆ ಚರ್ಚಿಸುವಂತೆ ಆರ್‌ಎಸ್‌ಎಸ್​​ ಮುಖ್ಯಸ್ಥ ಮೋಹನ್​​ ಭಾಗವತ್ ಹೇಳಿದ್ದಾರೆ ಅಂತಾನೂ ಆರೋಪ ಮಾಡಿದ್ದರು.

ಆಪರೇಷನ್ ಸಿಂಧೂರ್ ಆಗಿ ಇನ್ನೂ ವರ್ಷವೇ ಆಗಿಲ್ಲ. ಆಗಲೇ ಲಂಡನ್​​​ಗೆ ಹೋಗಿ ರಾಮ್ ಮಾಧವ್​ 4 ಸಭೆ ನಡೆಸಿದ್ದಾರೆ. ನಾನು ಬಿಜೆಪಿ ನಾಯಕ ರಾಮ್ ಮಾಧವ್​​​​​​ಗೆ ಕೇಳುತ್ತೇನೆ, ನೀವು ಬೆಂಗಳೂರಿಗೆ ಬರುವಾಗ ಇದಕ್ಕೆ ಉತ್ತರ ಕೊಡಬೇಕು. ರಹಸ್ಯ ಸಭೆ ನಡೆಸಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ವಿದೇಶಾಂಗ ಸಚಿವಾಲಯ ಸಭೆ ಮಾಡಬೇಕು. ಇವರು ವಿದೇಶಾಂಗ ಸಚಿವಾಲಯದಲ್ಲಿ ಮಂತ್ರಿ ಕೂಡ ಅಲ್ಲ. ಎಂಎಲ್ಎ ಅಲ್ಲ, ಎಂಪಿ ಅಲ್ಲ, ಕೇವಲ ಆರ್‌ಎಸ್‌ಎಸ್ ಪ್ರಚಾರಕ. ಹೀಗಿರುವಾಗ ಇವರಿಗೆ ಸಭೆ ಮಾಡೋಕೆ ಅಧಿಕಾರ ಕೊಟ್ಟವರು ಯಾರು ಎಂದು ಬಹಿರಂಗಪಡಿಸಲಿ ಎಂದು ಹರಿಪ್ರಸಾದ್​​ ಹೇಳಿದ್ದರು. ಹರಿಪ್ರಸಾದ್‌ ಅವರ ಈ ಹೇಳಿಕೆ ರಾಮ್‌ ಮಾಧವ್‌ ಅವರಿಗೆ ಕಳಂಕ ತರುವಂಥದ್ದಾಗಿದೆ. ಹಾಗಾಗಿ ಮಾತಾಡಿದ್ದರ ಬಗ್ಗೆ ಸ್ಪಷ್ಟನೆ ಕೊಟ್ಟು, ಕ್ಷಮೆ ಕೇಳಬೇಕು ಅಂತ ಬಿಎನ್‌ಎಸ್ ಸೆಕ್ಷನ್ 356ರ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Dr H N Ravindra on CM Dk Shivakumar : Blue Print ಇಟ್ಟುಕೊಂಡು ನಮ್ಮಣ್ಣಾ ಸಿಎಂ ಆಗಿ ರಾಜ್ಯ ಆಳ್ತಿದ್ದಾರೆ..!
Previous Post

ಸುರೇಶ್ ಕುಮಾರ್ ವಿರುದ್ಧ 300 ಕೋಟಿ ಟೆಂಡರ್ ಗೋಲ್ಮಾಲ್‌ ಆರೋಪ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

Next Post

Mohanlal: ನಟ ಮೋಹನ್‌ ಲಾಲ್‌ ಬಳಿ 10 ಆನೆ ದಂತ, 13 ದಂತದ ಮೂರ್ತಿ ಇವೆಯಂತೆ!

Related Posts

Pratap Simha Vs Priyank Kharge On SIR
Top Story

“ಹಿಂದೂಗಳು ಇರುವ ದೇವಸ್ಥಾನ, ಛತ್ರಗಳಲ್ಲಿ ಗುಂಪು ಕಟ್ಟಿಕೊಂಡು ಯಾಕೆ SIR ಅರ್ಜಿ ತುಂಬುತ್ತಿಲ್ಲ?”

by ಪ್ರತಿಧ್ವನಿ
July 6, 2026
0

ಮೈಸೂರು : ದೇಶದಲ್ಲಿಎಸ್ ಐ ಆರ್ ವಿರೋಧಿಸಿದ್ದ ಮಮತಾ ಬ್ಯಾನರ್ಜಿಯನ್ನು ಜನ ತಿಪ್ಪೆಗೆ ಎಸೆದಿದ್ದಾರೆ. ಇಲ್ಲಿನ ಎನ್.ಆರ್. ಕ್ಷೇತ್ರದಲ್ಲಿ ಖಾಲಿ ಸೈಟ್ ನಲ್ಲಿ 20 ಮತದಾರರಿದ್ದರು. ಚುನಾವಣೆ...

Read moreDetails
ಕುಮಾರಸ್ವಾಮಿ ಅವರನ್ನು ಪ್ರಹ್ಲಾದ್ ಜೋಶಿ ಹರಕೆ ಕುರಿ ಮಾಡ್ತಿದ್ದಾರೆ: ಬಿ.ಕೆ ಹರಿಪ್ರಸಾದ್‌

ಕುಮಾರಸ್ವಾಮಿ ಅವರನ್ನು ಪ್ರಹ್ಲಾದ್ ಜೋಶಿ ಹರಕೆ ಕುರಿ ಮಾಡ್ತಿದ್ದಾರೆ: ಬಿ.ಕೆ ಹರಿಪ್ರಸಾದ್‌

July 6, 2026
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಕೃತಜ್ಞತೆ ಸಲ್ಲಿಸಿದ ಇರಾನ್‌

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಕೃತಜ್ಞತೆ ಸಲ್ಲಿಸಿದ ಇರಾನ್‌

July 6, 2026
ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಸರ್ಕಾರ ಸಂಚು: ಕುಮಾರಸ್ವಾಮಿ ಆರೋಪ

ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಸರ್ಕಾರ ಸಂಚು: ಕುಮಾರಸ್ವಾಮಿ ಆರೋಪ

July 6, 2026
SIR Arena Fight

SIR ಅಖಾಡದಲ್ಲಿ ಏಟಿಗೆ ಎದಿರೇಟು : ದೋಸ್ತಿಗಳ ಮಾಸ್ಟರ್‌ ಸ್ಟ್ರೋಕ್‌ಗೆ ಪ್ಲಾಫ್‌ ಆಗುತ್ತಾ ಕಾಂಗ್ರೆಸ್‌ ಪ್ಲ್ಯಾನ್..?

July 6, 2026
Next Post
Mohanlal: ನಟ ಮೋಹನ್‌ ಲಾಲ್‌ ಬಳಿ 10 ಆನೆ ದಂತ, 13 ದಂತದ ಮೂರ್ತಿ ಇವೆಯಂತೆ!

Mohanlal: ನಟ ಮೋಹನ್‌ ಲಾಲ್‌ ಬಳಿ 10 ಆನೆ ದಂತ, 13 ದಂತದ ಮೂರ್ತಿ ಇವೆಯಂತೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada