ಕರ್ನಾಟಕ ಲೋಕ ಸೇವಾ ಆಯೋಗ(KPSC)ಯಿಂದ ಸರ್ಕಾರದ ವಿವಿಧ ಹುದ್ದೆಗಳಿಗೆ ನಡೆಯುವ ಆಯ್ಕೆ ಪರೀಕ್ಷೆಗಳಲ್ಲಿ ಹೊಸ ಮಾನದಂಡ ಅನುಸರಿಸಲು ಮುಂದಾಗಿದೆ.
ಯಾವುದೇ ವೃಂದದ ಹುದ್ದೆಗಳಿಗೆ 20 ಸಾವಿರಕ್ಕಿಂತ ಕಡಿಮೆ ಅರ್ಜಿಗಳು ಬಂದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ(CBRT) ನಡೆಸಲು ಇಲಾಖೆಯೂ ಗಂಭೀರ ಚಿಂತನೆ ನಡೆಸಿದ ಎಂದು ವರದಿಯಾಗಿದೆ.
CBRT ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂಬ ಉದ್ದೇಶದಿಂದ ಇಲಾಖೆಯೂ ಜನವರಿ 7ರಂದು ಪ್ರಾಯೋಗಿಕವಾಗಿ ನಡೆಸಿದ ಪರೀಕ್ಷೆಯಲ್ಲಿ ನೂತನ ಮಾದರಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಈ ಮಾದರಿಯನ್ನ ಅಳವಡಿಸಿಕೊಳ್ಳಲು ಇಲಾಖೇ ತೀರ್ಮಾನಿಸಿದೆ ಎಂದು KPSC ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.







