ಕೆಕೆ ಆರ್ ತಂಡವು ಐಪಿಎಲ್ ನ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕೆಕೆಆರ್ 12 ವರ್ಷಗಳ ಸೋಲಿನ ಸರಪಳಿಯಿಂದ ಹೊರ ಬಂದಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ವಾಂಖೆಡೆ ಸ್ಟೇಡಿಯಂನಲ್ಲಿ ಕಳೆದ 12 ವರ್ಷಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿರಲಿಲ್ಲ. 2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೊನೆಯ ಬಾರಿ ಮುಂಬೈನಲ್ಲಿ ಗೆಲುವು ಕಂಡಿತ್ತು. ನಂತರ ಸತತ ಸೋಲು ಕಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್, ಈಗ ಗೆಲುವಿನ ಲಯಕ್ಕೆ ಮರಳಿದೆ.
ಈ ಮೂಲಕ 12 ವರ್ಷಗಳ ದೀರ್ಘಾವಧಿಯ ಬಳಿಕ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ಗೆಲುವಿನ ನಗೆ ಬೀರಿದೆ. ಈ ಗೆಲುವು ಕೋಲ್ಕತ್ತಾಗೆ ಪ್ಲೇ ಆಫ್ ಹಾದಿಯನ್ನು ಕೂಡ ಸುಗಮಗೊಳಿಸಿದೆ. ಕೋಲ್ಕತ್ತಾ ತಂಡ ರೈಡರ್ಸ್ 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಕೆಕೆಆರ್ ಕೂಡ ಬ್ಯಾಟಿಂಗ್ ವಿಭಾಗದಲ್ಲಿ ಕುಸಿತ ಕಂಡು ಕೇವಲ 169 ರನ್ ಗಳಿಗೆ ಆಲೌಟ್ ಆಯಿತು. ಸರಳ ಗುರಿ ಬೆನ್ನಟ್ಟಿದ್ದ ಮುಂಬೈ ತಂಡ ಗೆಲುವು ದಾಖಲಿಸಲು ವಿಫಲವಾಯಿತು. ಮುಂಬೈಗೂ ಆರಂಭಿಕ ಆಘಾತ ಎದುರಾಯಿತು. ನಂತರ ಬಂದವರು ಕೂಡ ಸಮರ್ಪಕ ಆಟ ಪ್ರದರ್ಶಿಸಲಿಲ್ಲ.