• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತ್ರಿಶೂರ್‌ ಪೂರಂ ಛತ್ರಿಯಲ್ಲಿ ʼಸಾವರ್ಕರ್ʼ ಚಿತ್ರ : ಕೋಮುವಾದ ಮಾಡಬೇಡಿ ಎಂದು ಆಗ್ರಹಿಸಿದ ಕೇರಳಿಗರು!

ಪ್ರತಿಧ್ವನಿ by ಪ್ರತಿಧ್ವನಿ
May 9, 2022
in ದೇಶ
0
ತ್ರಿಶೂರ್‌ ಪೂರಂ ಛತ್ರಿಯಲ್ಲಿ ʼಸಾವರ್ಕರ್ʼ ಚಿತ್ರ : ಕೋಮುವಾದ ಮಾಡಬೇಡಿ ಎಂದು ಆಗ್ರಹಿಸಿದ ಕೇರಳಿಗರು!
Share on WhatsAppShare on FacebookShare on Telegram

ಕೇರಳದ ಪ್ರಸಿದ್ಧ ತ್ರಿಶೂರ್ ಪೂರಂನ ಮುನ್ನ ನಡೆಯುವ ಆನಾ ಚಮಯಂ (ಆನೆ ಶೃಂಗಾರ) ಸಮಯದಲ್ಲಿ ಪಾರಮೆಕ್ಕಾವು ದೇವಸ್ವಂ ಪ್ರದರ್ಶಿಸಿದ ಛತ್ರಿಗಳು ವಿವಾದಕ್ಕೆ ನಾಂದಿ ಹಾಡಿದೆ. ಹಿಂದೂ ಬಲಪಂಥೀಯ ರಾಜಕಾರಣದ ಐಕಾನ್‌ ವಿಡಿ ಸಾವರ್ಕರ್‌ ಅವರ ಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಇಟ್ಟ ಛತ್ರಿಗಳು ಇದೀಗ ಚರ್ಚೆಗೆ ಕಾರಣವಾಗಿದೆ.

ADVERTISEMENT

ಮೇ 8 ರ ಭಾನುವಾರದಂದು ಆನೆ ಶೃಂಗಾರ ಪ್ರದರ್ಶನದಲ್ಲಿ ಛತ್ರಿಗಳನ್ನು ಪ್ರದರ್ಶಿಸಲಾಯಿತು. ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದನ್, ಸುಭಾಷ್ ಚಂದ್ರ ಬೋಸ್ ಮತ್ತು ಕೇರಳದ ಚಟ್ಟಂಪಿ ಸ್ವಾಮಿಕಲ್ ಅವರಂತಹ ಸಮಾಜ ಸುಧಾರಕರೊಂದಿಗೆ ಸಾವರ್ಕರ್ ಅವರ ಚಿತ್ರವನ್ನೂ ಛತ್ರಿಗಳ ಮೇಲೆ ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೂರಂ ಆಚರಣೆಯಿಂದ ವಿವಾದಿತ ಕೊಡೆಗಳನ್ನು ಹೊರಗಿಡುವಂತೆ ಹಲವರು ಒತ್ತಾಯಿಸಿದ್ದಾರೆ.

ದೆಹಲಿ ಮೂಲದ ಪತ್ರಕರ್ತೆ ಚಾರ್ಮಿ ಹರಿಕೃಷ್ಣನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ “ಪಾರಮೆಕ್ಕಾವು ಸಾವರ್ಕರ್ ರನ್ನು ಛತ್ರಿ ಮೇಲೆ ಹಾಕಬಾರದು. ತ್ರಿಶೂರ್ ಪೂರಂ ಅನ್ನು ರಾಜಕೀಯಗೊಳಿಸುವುದನ್ನು ಮತ್ತು ಕೋಮುವಾದೀಕರಣ ಮಾಡುವುದನ್ನು ನಿಲ್ಲಿಸಿ” ಎಂದು ಬರೆದಿದ್ದಾರೆ.

ಯೂತ್ ಕಾಂಗ್ರೆಸ್ ಮತ್ತು ಸಿಪಿಐನ ವಿದ್ಯಾರ್ಥಿ ಘಟಕವಾದ ಎಐಎಸ್‌ಎಫ್ (ಅಖಿಲ ಭಾರತ ವಿದ್ಯಾರ್ಥಿಗಳ ಫೆಡರೇಶನ್) ಭಾನುವಾರ ಸಾವರ್ಕರ್‌ ಚಿತ್ರವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದೆ ಎಂದು ವರದಿಯಾಗಿದೆ, ಪ್ರತಿಭಟನಾಕಾರರು, ಪರಮೆಕ್ಕಾವು ದೇವಸ್ವಂ ಪ್ರದರ್ಶನದಿಂದ ಛತ್ರಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಪರಮೆಕ್ಕಾವು ದೇವಸ್ವಂ ಬೋರ್ಡ್ ಅಧ್ಯಕ್ಷ ರಾಜೇಶ್ ಮೆನನ್ ಅವರು ಛತ್ರಿಯನ್ನು ಇನ್ನೂ ಸ್ವಲ್ಪ ಸಮಯದವರೆಗೆ ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ದಿ ನ್ಯೂಸ್‌ ಮಿನಿಟ್‌ ಗೆ ತಿಳಿಸಿದ್ದಾರೆ.

“ಕೇಂದ್ರ ಸರ್ಕಾರ ಹೊರಡಿಸಿದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸಾವರ್ಕರ್ ಅವರ ಹೆಸರಿದೆ ಮತ್ತು ಅದನ್ನು ನಾವು ಛತ್ರಿಗಳಲ್ಲಿ ಹಾಕಿದ್ದೇವೆ. ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ಕೂಡ ಇದ್ದಾರೆ,” ಎಂದು ಅವರು ಹೇಳಿದ್ದಾರೆ.

ಕುಡಮಟ್ಟಂ ಸಮಯದಲ್ಲಿ ಛತ್ರಿಗಳನ್ನು ಬಳಸಬಾರದು ಎಂದು ಹೇಳುತ್ತಾರೆ, ಆದರೆ, ಪೂರಂ ಸಮಯದಲ್ಲಿ ಇದು ಪ್ರತಿ ವರ್ಷವೂ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.

“ಕುಡಮಟ್ಟಂ ಸಮಯದಲ್ಲಿ ನಾವು ಎಂದಿಗೂ ಜನರ ಪ್ರತಿಕೃತಿಯನ್ನು ಬಳಸುವುದಿಲ್ಲ, ಏಕೆಂದರೆ ಅವರನ್ನು ದೇವಿಗಿಂತ ಎತ್ತರದಲ್ಲಿ ಇಡಬಾರದು.” ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ರಾಜೇಶ್ ಮೆನನ್ ಅವರಲ್ಲಿ ಸಾವರ್ಕರ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ನಂಬುತ್ತಾರೆಯೇ ಎಂದು ಕೇಳಿದಾಗ, “ಈ ಸಮಯದಲ್ಲಿ ಚರ್ಚಿಸುವ ವಿಷಯವಲ್ಲ” ಎಂದು ಹೇಳಿದ್ದಾರೆ.

ಪೂರಂ ಅನ್ನು ಪರಮೆಕ್ಕಾವು ಮತ್ತು ತಿರುವಂಬಾಡಿ ದೇವಸ್ವಂಗಳು ಆಯೋಜಿಸುತ್ತವೆ. ಪೂರಂ ಉತ್ಸವದ ಆರಂಭವನ್ನು ಸೂಚಿಸುವ ʼಕೊಡಿಯೆಟ್ಟಂʼ (ತೇರು) ಮೇ 4 ಬುಧವಾರದಂದು ನಡೆದಿದೆ. ಹಬ್ಬದ ಪರಾಕಾಷ್ಠೆಯನ್ನು ಸೂಚಿಸುವ ಪೂರಂ ಮೇ 10 ರಂದು ನಡೆಯಲಿದೆ.

Tags: BJPCongress Partyಕೇರಳಿಗರುಕೋಮುವಾದನರೇಂದ್ರ ಮೋದಿಬಿಜೆಪಿ
Previous Post

ಸೇವಾಸಿಂಧು ಸೇವೆ ಎಲ್ಲರಿಗೂ ತಲುಪುತ್ತಿದೆಯೆ? | PRATIDHVANI | Malathi Mysore |

Next Post

ಕೇಂದ್ರ ಸಚಿವರು ರೈತರಿಗೆ ಬೆದರಿಕೆ ಹಾಕದಿದ್ದರೆ ಲಖಿಂಪುರಿ ಹಿಂಸಾಚಾರ ನಡೆಯುತ್ತಿರಲಿಲ್ಲ: ಅಲಹಾಬಾದ್‌ ಹೈಕೋರ್ಟ್

Related Posts

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ
Top Story

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

by ಪ್ರತಿಧ್ವನಿ
April 20, 2026
0

ಕೃಷ್ಣಗಿರಿ ತಮಿಳುನಾಡು : ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕದ...

Read moreDetails
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

April 20, 2026
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
Next Post
ಕೇಂದ್ರ ಸಚಿವರು ರೈತರಿಗೆ ಬೆದರಿಕೆ ಹಾಕದಿದ್ದರೆ ಲಖಿಂಪುರಿ ಹಿಂಸಾಚಾರ ನಡೆಯುತ್ತಿರಲಿಲ್ಲ: ಅಲಹಾಬಾದ್‌ ಹೈಕೋರ್ಟ್

ಕೇಂದ್ರ ಸಚಿವರು ರೈತರಿಗೆ ಬೆದರಿಕೆ ಹಾಕದಿದ್ದರೆ ಲಖಿಂಪುರಿ ಹಿಂಸಾಚಾರ ನಡೆಯುತ್ತಿರಲಿಲ್ಲ: ಅಲಹಾಬಾದ್‌ ಹೈಕೋರ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!