ಬೆಂಗಳೂರು : ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮನೆ ಮೇಲೆ ಇಂದು ಬೆಳಂಬೆಳಿಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಅಶೋಕ ನಗರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪ್ಪಾಡ್‌ಗೂ ಬಿಸಿ ಮುಟ್ಟಿಸಿರುವ ಅಧಿಕಾರಿಗಳು ಅವರ ಮನೆಯ ಮೇಲೂ ದಾಳಿ ನಡೆಸಿದ್ದಾರೆ.
ಹ್ಯಾಕರ್ ಕಿಂಗ್ ಶ್ರೀಕಿ ಜೊತೆ ನಲಪ್ಪಾಡ್‌ಗೆ ನಂಟಿನ ಕಾರಣಕ್ಕೆ ಪ್ರಾಥಮಿಕವಾಗಿ ದಾಳಿ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಬೆಂಗಳೂರಿನ 17 ಕಡೆ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದ ಮೇಲೆಯೂ ದಾಳಿ ನಡೆದಿದೆ. ಅಶೋಕ್ ನಗರದಲ್ಲಿರುವ ನಲಪಾಡ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಬೆಂಗಳೂರಿನ 17 ಕಡೆ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿವಾಸದ ಮೇಲೆಯೂ ದಾಳಿ ನಡೆದಿದೆ. ಅಶೋಕ್ ನಗರದಲ್ಲಿರುವ ನಲಪಾಡ್ ನಿವಾಸದ ಮೇಲೆ ಇಡಿ ದಾಳಿ ನಡೆಸಿದ್ದು, ನಿವಾಸದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಶ್ರೀಕಿ ಜೊತೆ ನಲಪಾಡ್ 6 ವರ್ಷದ ಆರ್ಥಿಕ ವ್ಯವಹಾರ ಹೊಂದಿದ್ದರು. ಇಬ್ಬರೂ ಸೇರಿ 4.5 ಕೋಟಿ ರೂ. ವಹಿವಾಟು ನಡೆಸಿದ್ದರು ಎನ್ನಲಾಗಿದೆ.
ಹ್ಯಾರಿಸ್ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ. ಇವರ ಪುತ್ರ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ಯುವ ಮುಖಂಡ. ಇವರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಇನ್ನೂ ಈ ಹಿಂದೆ ಇದೇ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪ್ಪಾಡ್ ಅವರನ್ನು ವಿಶೇಷ ತನಿಖಾ ದಳ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಇಡಿ ಬಿಸಿ ಮುಟ್ಟಿಸಿರುವುದು ಯುವ ಕಾಂಗ್ರೆಸ್ ನಾಯಕನಿಗೆ ಬಂಧನದ ಭೀತಿ ಶುರುವಾಗಿದೆ.






